Ad image

ದಾವಣಗೆರೆ ಪಾಲಿಕೆ ಇ ಸ್ವತ್ತು ಸಾಫ್ಟ್‌ವೇರ್ ಹ್ಯಾಕ್‌ – ಹಲವು ಸ್ವತ್ತುಗಳಿಗೆ ಅಕ್ರಮ ಅನುಮೋದನೆ

Team SanjeMugilu
1 Min Read

ದಾವಣಗೆರೆ: ಸೈಬರ್ ವಂಚಕರು ದಾವಣಗೆರೆಯ  ಮಹಾನಗರ ಪಾಲಿಕೆಯ  ಇ-ಸ್ವತ್ತು ತಂತ್ರಾಂಶವನ್ನೇ  ಹ್ಯಾಕ್ ಮಾಡಿದ್ದಾರೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಹ್ಯಾಕ್‌ ಮಾಡಿ ಐದು ಸ್ವತ್ತುಗಳಿಗೆ ಅಕ್ರಮವಾಗಿ ‘ಇ-ಆಸ್ತಿ’ ಅನುಮೋದನೆ ನೀಡಿರುವುದು ಗೊತ್ತಾಗಿದೆ. ಅಧಿಕಾರಿಗಳ ಲಾಗಿನ್ ಐಡಿ ಮತ್ತು ಪಾಸ್‍ವರ್ಡ್ ಬಳಸಿ ಈ ಕೃತ್ಯ ಎಸಗಲಾಗಿದೆ. ಮಹಾನಗರ ಪಾಲಿಕೆಯ ಇ-ಸ್ವತ್ತು ತಂತ್ರಾಂಶದಲ್ಲಿ ಅಧಿಕಾರಿಗಳ ಗಮನಕ್ಕೆ ಬಾರದೇ ಅನುಮೋದನೆ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸಿದಾಗ ಹ್ಯಾಕ್ ಆಗಿರುವುದು ಖಚಿತವಾಗಿದೆ. ಈ ಪ್ರಕರಣ ನಡೆದು 6 ತಿಂಗಳ ಬಳಿಕ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಈ ಸಂಬಂಧ ಸಿಇಎನ್ ಠಾಣೆಗೆ ಮಹಾನಗರ ಪಾಲಿಕೆಯ ವಲಯ ಕಚೇರಿ 1ರ ಆಯುಕ್ತ ಕೆ.ನಾಗರಾಜ್ ದೂರು ನೀಡಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಮೂರು ವಲಯ ಕಚೇರಿಗಳಲ್ಲಿ ಇ-ಸ್ವತ್ತು ನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

Share This Article