Ad image

ಕುಮಾರಸ್ವಾಮಿ ಹೇಳಿದ್ದು ಸರಿ: ಡಿಕೆಶಿ, ಹೆಚ್‌ಡಿಕೆ ಜಟಾಪಟಿ ನಡುವೆ ಪರಮೇಶ್ವರ್ ಎಂಟ್ರಿ

Team SanjeMugilu
2 Min Read

ಬೆಂಗಳೂರು : ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಜಟಾಪಟಿ ಜೋರಾಗಿದೆ. ಬಳ್ಳಾರಿ ಗಲಭೆ ವಿಚಾರದಲ್ಲಿ ಮುಖ್ಯಮಂತ್ರಿ ಅಥವಾ ಗೃಹ ಸಚಿವರ ಸಭೆ ನಡೆಸಬೇಕಿತ್ತು. ಬದಲಿಗೆ ಡಿಸಿಎಂ ಡಿಕೆ ಶಿವಕುಮಾರ್​ ಬಳ್ಳಾರಿಗೆ ತೆರಳಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು ಸರಿಯಲ್ಲ, ಇದು ಶಿಷ್ಠಾಚಾರದ ಉಲ್ಲಂಘನೆ ಅಲ್ವಾ ಮಿಸ್ಟರ್​ ಡಿಕೆಶಿ ಎಂದು ಎಚ್​ಡಿಕೆ ಪ್ರಶ್ನೆ ಮಾಡಿದ್ರು. ಈ ಬಗ್ಗೆ ಗೃಹ ಸಚಿವ ಪರಮೇಶ್ವರ್  ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಹೇಳಿದ್ದು ಸರಿ, ಆದ್ರೆ ಎನ್ನುತ್ತಾ ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದಾರೆ.
‘ಕುಮಾರಸ್ವಾಮಿ ಹೇಳಿದ್ದು ಕಾನೂನಾತ್ಮಕವಾಗಿ ಸರಿ’
ಬಳ್ಳಾರಿಯಲ್ಲಿ​​ ಪೊಲೀಸ್ ಅಧಿಕಾರಿಗಳ ಜೊತೆ ಡಿಕೆ ಶಿವಕುಮಾರ್ ನಡೆಸಿದ ಸಭೆ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ರು. ಈ ಬಗ್ಗೆ ಸ್ಪಷ್ಟನೆ ನೀಡಿದ ಗೃಹ ಸಚಿವ ಪರಮೇಶ್ವರ್ ಅವರು, ಕುಮಾರಸ್ವಾಮಿ ಹೇಳಿರೋದು ಕಾನೂನಾತ್ಮಕವಾಗಿ ಸರಿ ಇರಬಹುದು. ಆದ್ರೆ ಡಿಕೆಶಿ ಅವರು ಸರ್ಕಾರದ ಪ್ರತಿನಿಧಿಯಾಗಿ ಅಲ್ಲಿಗೆ ಹೋಗಿರೋದನ್ನ ತಪ್ಪು ಅಂತ ಹೇಳಲು ಆಗಲ್ಲ ಎಂದಿದ್ದಾರೆ.
ಡಿಕೆ ಶಿವಕುಮಾರ್ ಪರ ಪರಂ ಬ್ಯಾಟಿಂಗ್
ಡಿಕೆ ಶಿವಕುಮಾರ್​ ಅವರು ಜವಾಬ್ದಾರಿಯುತ ಸಚಿವರು, ಡಿಸಿಎಂ ಹಾಗೂ ಕ್ಯಾಬಿನೆಟ್ ಸಚಿವರು. ನಾನು ಹೋಗಲು ಆಗಲಿಲ್ಲ ಅಂತ ಡಿಕೆ ಶಿವಕುಮಾರ್​ ಹೋಗಿದ್ದಾರೆ. ಡಿಕೆಶಿ ಸರ್ಕಾರದ ಪ್ರತಿನಿಧಿಯಾಗಿ, ಮಾನವೀಯತೆ ದೃಷ್ಟಿಯಿಂದ ಹೋಗಿದ್ದಾರೆ. ಅದು ತಪ್ಪು ಅನ್ನೋದು ಸರಿಯಲ್ಲ. ಅದಕ್ಕೆಲ್ಲ ಅನುಮತಿ ‌ಪಡೆಯುವ ಅಗತ್ಯ ಇಲ್ಲ ಎಂದು ಡಿಕೆ ಶಿವಕುಮಾರ್​ ಪರವಾಗಿ ಪರಮೇಶ್ವರ್ ಬ್ಯಾಟಿಂಗ್ ಮಾಡಿದ್ದಾರೆ.

ಇದೇ ಕಾರಣಕ್ಕೆ ನಾನು ಬಳ್ಳಾರಿಗೆ ಹೋಗಿಲ್ಲ
ನಾನು ಸಂಬಂಧ ಪಟ್ಟ ಇಲಾಖೆ ಸಚಿವ, ನಾನು ಹೋಗಿದ್ರೆ ಅವರ ಪರ ಇವರ ಪರ ಮಾತಾಡಿದ್ರು ಅಂತ ಆರೋಪ ಬರುತ್ತೆ. ನಮ್ಮ ಹಸ್ತಕ್ಷೇಪ ಆಗದಿರಲಿ, ತನಿಖೆ ನಡೆಯಲಿ ಅಂತ ನಾನು ತಕ್ಷಣ ಘಟನೆ ಸ್ಥಳಕ್ಕೆ ಹೋಗಲ್ಲ . ನಾನು ಯಾವುದೇ ಘಟನೆ ಆದಾಗ ತಕ್ಷಣ ಹೋಗಲ್ಲ, ತೀರಾ ತುರ್ತು ಸಂದರ್ಭ ಇದ್ರೆ ಮಾತ್ರ ಹೋಗೋದು. ಬಳ್ಳಾರಿಗೂ ನಾನು ಇದೇ ಕಾರಣಕ್ಕೆ ಇನ್ನೂ ಹೋಗಿಲ್ಲ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

Share This Article