Ad image

ಕುಮಾರಸ್ವಾಮಿ ಫ್ಲೆಕ್ಸ್ ತೆರವು; ಕಾಂಗ್ರೆಸ್​ ಕಾರ್ಯಕರ್ತರಿಂದ ಧಮ್ಕಿ, ಹಲ್ಲೆ?

Team SanjeMugilu
1 Min Read

ಮೈಸೂರು: ಬಳ್ಳಾರಿ ಬ್ಯಾನರ್​ ಗಲಾಟೆ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿತು. ಇದರ ಬೆನ್ನಲ್ಲೇ ಮೈಸೂರಿನಲ್ಲಿ  ಫ್ಲೆಕ್ಸ್​ ಜಟಾಪಟಿ ಜೋರಾಗಿದೆ. ಕೆ.ಆರ್ ನಗರದ ಕೆಸ್ತೂರು ಕೊಪ್ಪಲಿನಲ್ಲಿ ಜೆಡಿಎಸ್ ನಾಯಕರ ಫ್ಲೆಕ್ಸ್ ತೆರವುಗೊಳಿಸಿದ ಆರೋಪ ಕೇಳಿ ಬಂದಿದೆ. ಜೆಡಿಎಸ್ ನಾಯಕರಾದ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ  ಹಾಗೂ ಮಾಜಿ ಸಚಿವ ಸಾರಾ ಮಹೇಶ್ ಫ್ಲೆಕ್ಸ್​​ಗಳನ್ನ ತೆರವುಗೊಳಿಸಿರುವ ಕಾಂಗ್ರೆಸ್​ ಕಾರ್ಯಕರ್ತರು ಧಮ್ಕಿ ಹಾಕಿದ್ದಾರೆ ಎನ್ನುವ ಆರೋಪ ಕೂಡ ಇದೆ.
ಕೈ ಶಾಸಕರ ಊರಲ್ಲಿ ಜೆಡಿಎಸ್ ನಾಯಕ ಫ್ಲೆಕ್ಸ್ ತೆರವು
ಕಾಂಗ್ರೆಸ್ ಶಾಸಕ ರವಿಶಂಕರ್ ಹುಟ್ಟೂರಲ್ಲಿ ಕೈ ಕಾರ್ಯಕರ್ತರು ಜೆಡಿಎಸ್​ ನಾಯಕರ ಬ್ಯಾನರ್ ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಜೆಡಿಎಸ್ ನಾಯಕಾರಾದ ಕೇಂದ್ರ ಸಚಿವ ಕುಮಾರಸ್ವಾಮಿ ಮಾಜಿ ಸಚಿವ ಸಾರಾ ಮಹೇಶ್ ಅವರ ಬ್ಯಾನರ್​ ತೆಗದ ಕಾಂಗ್ರೆಸ್ ಕಾರ್ಯಕರ್ತರು ಧಮ್ಕಿ ಹಾಕಿದ್ದಾರೆ ಎನ್ನುವ ಆರೋಪವಿದೆ.
ಕಾಂಗ್ರೆಸ್ ಕಾರ್ಯಕರ್ತರಿಂದ ಧಮ್ಕಿ ಆರೋಪ
ಕೆ.ಆರ್ ನಗರದ ಕೆಸ್ತೂರು ಕೊಪ್ಪಲಿನಲ್ಲಿ ನಮ್ಮ ಕಾಂಗ್ರೆಸ್ ನಾಯಕರಾದ ಶಾಸಕ ರವಿ ಅಣ್ಣಾ ಹಾಗೂ ಸ್ವಾಮಿ ಗೌಡ್ರು ಫ್ಲೆಕ್ಸ್​ ಮಾತ್ರ ಇರಬೇಕು. ಬೇರೆಯವರ ಫ್ಲೆಕ್ಸ್ ಅಥವಾ ಬ್ಯಾನರ್ ಹಾಕಿದ್ರೆ ಅಷ್ಟೇ ಎಂದು ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜೆಡಿಎಸ್​ ಕಾರ್ಯಕರ್ತರ ಮೇಲೆ ಹಲ್ಲೆ
ಫ್ಲೆಕ್ಸ್ ತೆರವುಗೊಳಿಸಲು ಬಂದ ಕಾಂಗ್ರೆಸ್​ ಕಾರ್ಯರ್ತರನ್ನ ಜೆಡಿಎಸ್ ಕಾರ್ಯಕರ್ತರು ತಡೆಯಲು ಮುಂದಾಗಿದ್ದಾರೆ. ಈ ನಡುವೆ ಎರಡು ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ ಜೆಡಿಎಸ್ ಕಾರ್ಯಕರ್ತರ ಮೇಲೆ ಕಾಂಗ್ರೆಸ್​ ಕಾರ್ಯಕರ್ತರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ಕೆ. ಆರ್ ನಗರದ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲು ದಾಖಲಾಗಿದೆ.
ಬಳ್ಳಾರಿ ಬ್ಯಾನರ್ ಗಲಾಟೆ ಬಳಿಕ ಮೈಸೂರಿನ ಫ್ಲೆಕ್ಸ್​​ ಕಿತ್ತಾಟ ಜೋರಾಗಿದ್ದು, ಪೊಲೀಸರು ಯಾವ ರೀತಿ ಕ್ರಮ ತೆಗೆದುಕೊಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

Share This Article