ನಾಳೆ ಜನವರಿ 27ರಂದು ದೇಶಾದ್ಯಂತ ಬ್ಯಾಂಕ್ ಸೇವೆಗಳು ಸ್ಥಗಿತಗೊಳ್ಳಲಿವೆ. ಬ್ಯಾಂಕ್ ಸಿಬ್ಬಂದಿಯ ಸಂಘಟನೆಗಳು ವಾರದಲ್ಲಿ ಐದು ದಿನಗಳ ಕೆಲಸದ ಅವಧಿಗೆ ಆಗ್ರಹಿಸಿ ಒಂದು ದಿನದ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಇದರಿಂದಾಗಿ ಬ್ಯಾಂಕ್‌ಗಳಲ್ಲಿ ನೇರ ವ್ಯವಹಾರಗಳು (ಹಣ ತೆಗೆಯುವುದು, ಠೇವಣಿ, ಚೆಕ್ ಕ್ಲಿಯರೆನ್ಸ್, ಡಿಮ್ಯಾಂಡ್ ಡ್ರಾಫ್ಟ್, ಲೋನ್ ಸಂಬಂಧಿತ ಕೆಲಸಗಳು) ಸಂಪೂರ್ಣವಾಗಿ ನಿಲ್ಲುವ ಸಾಧ್ಯತೆ ಇದೆ.
ಈಗಾಗಲೇ ಕಳೆದ ಮೂರು ದಿನಗಳಿಂದ ಸಾಲು ಸಾಲು ರಜೆ ಬಂದಿದ್ದರಿಂದ ಬ್ಯಾಂಕ್ ಸೇವೆ ಇರಲಿಲ್ಲ. ಇದೀಗ ನಾಳೆ ಕೂಡ ಬ್ಯಾಂಕ್ ಸೇವೆ ಇರೋದು ಡೌಟ್ ಆಗಿದೆ. ದೇಶಾದ್ಯಂತ ನಾಳೆ ಬ್ಯಾಂಕ್ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.
ನಾಳೆ ದೇಶಾದ್ಯಂತ ಬ್ಯಾಂಕ್ ಮುಷ್ಕರಕ್ಕೆ ಕರೆ!
ಬ್ಯಾಂಕ್ ಸಿಬ್ಬಂದಿ ದೀರ್ಘಕಾಲದಿಂದ ವಾರದಲ್ಲಿ ಐದು ದಿನಗಳ ಕೆಲಸದ ಅವಧಿಗೆ ಒತ್ತಾಯಿಸುತ್ತಿದ್ದಾರೆ. ಪ್ರಸ್ತುತ ಬ್ಯಾಂಕ್‌ಗಳು ಆರು ದಿನಗಳ ಕೆಲಸದ ವ್ಯವಸ್ಥೆಯನ್ನು ಹೊಂದಿವೆ. ಆದರೆ ಸಿಬ್ಬಂದಿ ಸಂಘಟನೆಗಳು ಐದು ದಿನಗಳ ಕೆಲಸದ ದಿನಗಳನ್ನು ಫಿಕ್ಸ್ ಮಾಡಬೇಕು ಎಂದು ಬೇಡಿಕೆ ಇಡುತ್ತಿವೆ. ಈ ಬೇಡಿಕೆಗೆ ಸರ್ಕಾರ ಮತ್ತು ಬ್ಯಾಂಕ್ ನಿರ್ವಹಣೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರದ ಕಾರಣ ಒಂದು ದಿನದ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ನಾಳೆ ಯಾವ ಸೇವೆಗಳು ಸಿಗುವುದಿಲ್ಲ?
ನೇರವಾಗಿ ಬ್ಯಾಂಕ್‌ಗೆ ಹೋಗಿ ಹಣ ತೆಗೆಯುವುದು (ಕ್ಯಾಶ್ ವಿತ್‌ಡ್ರಾವಲ್)
ಹಣ ಠೇವಣಿ ಮಾಡುವುದು
ಚೆಕ್ ಜಮಾ ಮಾಡುವುದು ಮತ್ತು ಚೆಕ್ ಕ್ಲಿಯರೆನ್ಸ್
ಡಿಮ್ಯಾಂಡ್ ಡ್ರಾಫ್ಟ್ (DD), ಪೇ ಆರ್ಡರ್ ತಯಾರಿಸುವುದು
ಲೋನ್ ಸಂಬಂಧಿತ ಕೆಲಸಗಳು (ಹೊಸ ಲೋನ್ ಅರ್ಜಿ, ದಾಖಲೆಗಳ ಪರಿಶೀಲನೆ)
ಫಿಕ್ಸ್ಡ್ ಡೆಪಾಸಿಟ್, ಆರ್‌ಡಿ ಮುಗಿಯುವುದು, ಮೆಚ್ಯೂರಿಟಿ ಪಾವತಿ
ಡಿಜಿಟಲ್ ವಾಲೆಟ್‌ಗೆ ಹಣ ಲೋಡ್ ಮಾಡುವುದು (ಕೆಲವು ಬ್ಯಾಂಕ್‌ಗಳಲ್ಲಿ)
ಆದರೆ ಆನ್‌ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, UPI ವಹಿವಹಾರಗಳು, ಆಟೋಮ್ಯಾಟಿಕ್ ಡೆಬಿಟ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆ ಮಾಡುವುದು ಮಾತ್ರ ಸಾಧ್ಯವಾಗುತ್ತದೆ. ಎಟಿಎಂಗಳಲ್ಲಿ ಹಣ ತೆಗೆಯುವುದು ಸಹ ಸಾಧ್ಯವಾಗಬಹುದು (ಎಲ್ಲಾ ಎಟಿಎಂಗಳು ಕೆಲಸ ಮಾಡುತ್ತವೆ ಎಂದು ಖಚಿತವಿಲ್ಲ).
ಈಗಾಗಲೇ ನಾಲ್ಕು ದಿನಗಳ ಬ್ಯಾಂಕ್ ರಜೆ!
ಜನವರಿ 24, 25 ಮತ್ತು 26- ಭಾನುವಾರ, ಗಣರಾಜ್ಯೋತ್ಸವ ಮತ್ತು ಇತರ ರಜೆಗಳಿಂದಾಗಿ ಬ್ಯಾಂಕ್‌ಗಳು ಮುಚ್ಚಿವೆ. ನಾಳೆ (27ನೇ ತಾರೀಖು) ಮುಷ್ಕರದಿಂದಾಗಿ ಬ್ಯಾಂಕ್ ವ್ಯವಹಾರಗಳು ನಾಲ್ಕು ದಿನಗಳಿಂದ ಸ್ಥಗಿತಗೊಂಡಿರುತ್ತವೆ. ಇದರಿಂದ ವ್ಯಾಪಾರಸ್ಥರು, ಉದ್ಯೋಗಿಗಳು ಮತ್ತು ಸಾಮಾನ್ಯ ಜನರು ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ.
ಬ್ಯಾಂಕ್ ಸಿಬ್ಬಂದಿಯ ಬೇಡಿಕೆಗಳು ಏನು?
ವಾರದಲ್ಲಿ ಐದು ದಿನಗಳ ಕೆಲಸದ ಅವಧಿ ಖಚಿತಪಡಿಸುವುದು
ಶನಿವಾರ-ಭಾನುವಾರ ರಜೆಯನ್ನು ಖಚಿತಪಡಿಸುವುದು
ಕೆಲಸದ ಒತ್ತಡ ಕಡಿಮೆ ಮಾಡುವುದು
ಹೆಚ್ಚುವರಿ ಕೆಲಸದ ಗಂಟೆಗಳಿಗೆ ಯೋಗ್ಯ ವೇತನ
ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲೂ ಮುಷ್ಕರಗಳ ಸಾಧ್ಯತೆ ಇದೆ ಎಂದು ಸಿಬ್ಬಂದಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಜನರು ಏನು ಮಾಡಬೇಕು?
ಡಿಜಿಟಲ್ ವಹಿವಹಾರಗಳನ್ನು (UPI, ನೆಟ್ ಬ್ಯಾಂಕಿಂಗ್) ಬಳಸಿ
ದೊಡ್ಡ ಮೊತ್ತದ ವಹಿವಹಾರಗಳನ್ನು ಮುಂದೂಡಿ
ಬ್ಯಾಂಕ್ ಸಿಬ್ಬಂದಿಯ ಮುಷ್ಕರದಿಂದ ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಡಿಜಿಟಲ್ ಬ್ಯಾಂಕಿಂಗ್‌ನ ಮೂಲಕ ಹೆಚ್ಚಿನ ವಹಿವಹಾರಗಳನ್ನು ನಿರ್ವಹಿಸಬಹುದು ಎಂಬುದು ಈ ಸಂದರ್ಭದಲ್ಲಿ ಸಹಾಯಕವಾಗುತ್ತದೆ.
