ಬೆಂಗಳೂರು: ಕಾನ್‌ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಬೆಂಗಳೂರಲ್ಲಿ ಉದ್ಯಮಿ ರಾಯ್ ಆತ್ಮಹತ್ಯೆ ರಾಷ್ಟ್ರಮಟ್ಟದ ಚರ್ಚೆ ಕಾರಣವಾಗಿದೆ. ಈ ಬೆಳವಣಿಗೆ ನಡುವೆ ರಾಯ್ ಸೂಸೈಡ್ ಕೇಸ್ ವಿಚಾರದಲ್ಲಿ ಕೇರಳ ಸಿಎಂ ಮಧ್ಯಪ್ರವೇಶ ಮಾಡಿದ್ದಾರೆ. ಪ್ರಕರಣ ಸಂಬಂಧ ಕೇಂದ್ರಕ್ಕೆ ಪತ್ರ ಕೂಡ ಬರೆದಿದ್ದಾರೆ.
ನ್ಯಾಯಾಂಗ ತನಿಖೆ ಆಗ್ರಹಿಸಿ ಕೇರಳ ಸಿಎಂ ಪತ್ರ
ಬೆಂಗಳೂರಿನಲ್ಲಿ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಕೇಂದ್ರಕ್ಕೆ ಕೇರಳ ಸಿಎಂ ಪತ್ರ ಬರೆದಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮಿ ಸಿಜೆ ರಾಯ್ ಸಾವಿನ ಬಗ್ಗೆ ಸೂಕ್ತ ತನಿಖೆಯ ಅಗತ್ಯವಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಸಿಎಂ ಪಿಣರಾಯ್ ವಿಜಯನ್ ಪತ್ರ ಬರೆದಿದ್ದಾರೆ.
‘ಐಟಿ ದಾಳಿ ನಡೆದಿದ್ದ ವೇಳೆ ನಡೆದ ಘಟನೆ’
ಉದ್ಯಮಿ ಸಿಜೆ ರಾಯ್ ಸಾವು ಹಲವು ಉದ್ಯಮಿಗಳಲ್ಲಿ ಆತಂಕ ಹುಟ್ಟಿಸಿದೆ. ಈ ಘಟನೆ ನಡೆಯುವ ವೇಳೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಯುತ್ತಿತ್ತು. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೇರಳ ಸಿಎಂ ಪಿಣರಾಯಿ ಒತ್ತಾಯಿಸಿದ್ದಾರೆ.
ಉದ್ಯಮಿ ರಾಯ್ ಅವರ ಶಂಕಿತ ಆತ್ಮಹತ್ಯೆ ಸಮಾಜ ಹಾಗೂ ಉದ್ಯಮಿಗಳನ್ನ ಆಘಾತಗೊಳಿಸಿದೆ. ಈ ಘಟನೆ ದೇಶದ ತೆರಿಗೆ ಆಡಳಿತ ಮೇಲಿನ ಕಪ್ಪು ಕಲೆಯಂತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಯಲಿ ಎಂದು ಕೇರಳ ಸಿಎಂ ಪಿಣರಾಯಿ ಅವರು ಮನವಿ ಮಾಡಿದ್ದಾರೆ.
ಉದ್ಯಮಿ ಸಿಜೆ ರಾಯ್ ಸೂಸೈ* ಕೇಸ್ ವಿಚಾರಕ್ಕೆ ಕೇರಳ ಸಿಎಂ ಎಂಟ್ರಿ! ಕೇಂದ್ರಕ್ಕೆ ಪಿಣರಾಯಿ ಬರೆದ ಪತ್ರದಲ್ಲಿ ಏನಿದೆ?
