ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ತರಕಾರಿ, ಹಣ್ಣು, ಚಿನ್ನ, ಬೆಳ್ಳಿ ಬೆಲೆ ಏರಿಕೆಯಿಂದ ರಾಜ್ಯದ ಜನರು ಬೇಸರಗೊಂಡಿದ್ದಾರೆ. ಈಗ ದಿನನಿತ್ಯದ ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಮೆಣಸಿನಕಾಯಿ ಬೆಲೆಯಲ್ಲಿ ಹೆಚ್ಚಳವಾಗಿರುವುದು ಜನಸಾಮಾನ್ಯರು ತಲೆ ಮೇಲೆ ಕೈ ಹೊತ್ತು ಕೂರುವಂತೆ ಮಾಡಿದೆ. ಬ್ಯಾಡಗಿ ಮೆಣಸಿನ ಕಾಯಿ, ಸೋನಾ ಮಸೂರಿ ಅಕ್ಕಿ ಸೇರಿ ಹಲವು ಬೇಳೆ, ಕಾಳುಗಳ ಬೆಲೆಯಲ್ಲಿ ಗಮನಾರ್ಹ ಏರಿಕೆಯಾಗಿದೆ.
ಆದಾಯ ಬರುವ ಮುನ್ನವೇ ರೈತರಿಕೆ ಆತಂಕ
ಪ್ರಮುಖವಾಗಿ ಬೇರೆ ಬೇರೆ ದೇಶಗಳಿಗೆ ಅಕ್ಕಿ ರಫ್ತು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಅಕ್ಕಿಯ ಬೆಲೆ ಕೆ.ಜಿ.ಗೆ 5–6 ರೂಪಾಯಿ ಏರಿಕೆಯಾಗಿದೆ. ಕಡಲೆಬೀಜ, ಮೆಣಸಿನಕಾಯಿ ಇಳುವಳಿಯಲ್ಲಿ ಇಳಿಕೆಯಾಗದ ಕಾರಣ ಬೆಲೆ 50 ರೂಪಾಯಿ ಎತ್ತರಕ್ಕೆ ತಲುಪಿದೆ. ಇತರ ಬೇಳೆ, ಕಾಳುಗಳ ಬೆಲೆಯೂ 10–20 ರೂಪಾಯಿ ಏರಿಕೆಯಾಗಿದೆ. ಬೇಸಿಗೆ ಇನ್ನೂ ಆರಂಭವಾಗಿಲ್ಲ, ಈಗಲೇ ಬೆಲೆ ತಾರಕಕ್ಕೇರಿರುವುದರಿಂದ ಸಾಮಾನ್ಯ ಜನರ ಜೀವನ ಖರ್ಚಿಗೆ ಮತ್ತೊಂದು ಹೊಡೆತವಾಗಿದೆ.
ಕೆ.ಜಿಗೆ ದವಸ-ಧಾನ್ಯಗಳ ಬೆಲೆಯೇರಿಕೆಯ ಪಟ್ಟಿ ಇಲ್ಲಿದೆ
ಪದಾರ್ಥಗಳ ಹೆಸರು ಹಳೆಯ ದರ(ರೂ.ಗಳಲ್ಲಿ) ಹೊಸ ದರ(ರೂ.ಗಳಲ್ಲಿ)
ಸೋನಾ ಮಸೂರಿ 38 44
RFO ಅಕ್ಕಿ 49 54
ದೋಸೆ ಅಕ್ಕಿ 29 39
ಬ್ಯಾಡಗಿ ಮೆಣಸಿನಕಾಯಿ 260 420
ಗುಂಟೂರು ಮೆಣಸಿನಕಾಯಿ 180 230
ತೊಗರಿ ಬೇಳೆ 110 135
ಉದ್ದಿನ ಬೆಳೆ 100 120
ಕಡಲೆಬೀಜ 120 150
ಒಟ್ಟಾರೆ ಹೊಸ ಬೆಳೆ ಬರುವವರೆಗೂ ಈ ಬೆಲೆ ಏರಿಕೆ ಮುಂದುವರೆಯಲ್ಲಿದ್ದು, ಜನಸಾಮಾನ್ಯರ ಜೇಬು ಸುಡಲಿದೆ.
