ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಗ್ಗಜಗ್ಗಾಟ ಮುಂದುವರಿದಿರುವ ಹೊತ್ತಲ್ಲೇ ಇತ್ತ ಕಾಂಗ್ರೆಸ್ ಶಾಸಕರು ಫಾರಿನ್ ಟೂರ್ ಫಿಕ್ಸ್ ಆಗಿದೆ.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಾರ್ನಿಂಗ್‌ಗೂ ಶಾಸಕರು ತಲೆಕೆಡಿಸಿಕೊಂಡಿಲ್ಲ. ವಿದೇಶಿ ಪ್ರವಾಸವನ್ನು ಫಿಕ್ಸ್ ಮಾಡಿದ್ದಾರೆ. 20ಕ್ಕೂ ಹೆಚ್ಚು ಶಾಸಕರು ಮತ್ತು ಅವರ ಕುಟುಂಬ ಸದಸ್ಯರು ವಿದೇಶ ಪ್ರವಾಸ ಹೊರಡಲಿದ್ದಾರೆ.
ಇಬ್ಬರು ಸಚಿವರ ತೆರೆಮರೆಯ ಉಸ್ತುವಾರಿಯಲ್ಲಿ ಶಾಸಕರ ಫಾರಿನ್ ಟೂರ್ ಹೋಗಲಿದ್ದಾರೆ. ಪ್ರವಾಸದ ಎಲ್ಲಾ ಜವಾಬ್ದಾರಿಯನ್ನು ಇಬ್ಬರು ಸಚಿವರು ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಪ್ರವಾಸದ ಬಗ್ಗೆ ಫೆಬ್ರವರಿ 5ರಂದು ಸುದ್ದಿ ಪ್ರಸಾರವಾದ ಬೆನ್ನಲ್ಲೇ ಕೆಲ ಶಾಸಕರಿಗೆ ಸುರ್ಜೇವಾಲಾ ಅವರು ಕರೆ ಮಾಡಿದ್ದರು. ಆದರೆ, ಸುರ್ಜೇವಾಲಾ ಮಾತು ಕೇಳಿ ಐದಾರು ಶಾಸಕರಷ್ಟೇ ವಿದೇಶ ಪ್ರವಾಸದಿಂದ ದೂರ ಸರಿದಿದ್ದಾರೆ. ಉಳಿದ ಶಾಸಕರು ಫಾರಿನ ಟೂರ್‌ಗೆ ಹೋಗಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಫೆಬ್ರವರಿ 15 ರಿಂದ ಮಾರ್ಚ್ 3ರ ತನಕ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದ್ದಾರೆ.
ಶಾಸಕರು ಫಾರಿನ್ ಟ್ರಿಪ್ ಹೋಗ್ತಿರೋದು ನನಗೆ ಗೊತ್ತಿಲ್ಲ. ಅವರ ಹಣದಲ್ಲಿ ಅವರು ವಿದೇಶಿ ಪ್ರವಾಸಕ್ಕೆ ಹೋದ್ರೆ ಬೇಡ ಅನ್ನೋಕೆ ಆಗುತ್ತಾ ಅಂತ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಶಾಸಕರ ಫಾರಿನ್ ಟ್ರಿಪ್ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಶಾಸಕರು ಅವರ ಸ್ವಂತ ದುಡ್ಡಿನಲ್ಲಿ ಹೋದ್ರೆ ನಾನು ಬೇಡ ಅನ್ನೋಕೆ ಆಗುತ್ತಾ? ಒಐಂ ಗಳು, ಒಐಅ ಗಳು ಅವರ ಸ್ವಂತ ದುಡ್ಡಿನಲ್ಲಿ ಹೋಗ್ತಾ ಇದ್ದಾರೆ.ಶಾಸಕರು ಫಾರಿನ್ ಟ್ರಿಪ್ ಹೋಗೋದು ನನ್ನ ಗಮನಕ್ಕೆ ಇಲ್ಲ ಎಂದರು.
ಬಜೆಟ್ ದಿನಾಂಕ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಹಬ್ಬ ಮುಗಿದ ಮೇಲೆ ಬಜೆಟ್ ದಿನಾಂಕ ಹೇಳ್ತೀನಿ ಅಂತ ತಿಳಿಸಿದರು.
