Ad image

ಸಿದ್ದರಾಮಯ್ಯ ಅಲ್ಲದೇ ಬೇರೆ ಯಾರೇ ಸಿಎಂ ಆದ್ರೂ ಸರ್ಕಾರ ನಡೆಸೋದು ಕಷ್ಟ: ಅಶೋಕ್‌ ಪಟ್ಟಣ್

Team SanjeMugilu
1 Min Read
ಕೊಪ್ಪಳ: ಸಿದ್ದರಾಮಯ್ಯ  ಅಲ್ಲದೇ ಬೇರೆ ಯಾರೇ ಸಿಎಂ ಆದ್ರೂ ಸರ್ಕಾರ ನಡೆಸೋದು ಕಷ್ಟ ಇದೆ ಎಂದು ಸಿಎಂ ಆಪ್ತ ಶಾಸಕ ಅಶೋಕ್‌ ಪಟ್ಟಣ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಸಿಎಂ ಬದಲಾವಣೆ ಆಗಲ್ಲ ಅಂತ ಎಲ್ಲರೂ ಹೇಳಿದ್ದಾರೆ. ಸಿಎಂ ಸಹ ಹೈಕಮಾಂಡ್ ಹೇಳಿದ್ರೆ ನಾನು ರಾಜೀನಾಮೆ ಕೊಡತ್ತೇನೆ ಎಂದಿದ್ದಾರೆ. ಹೈಕಮಾಂಡ್ ಹೇಳುತ್ತಿಲ್ಲ, ಅವರು ಬಿಡ್ತಾ ಇಲ್ಲ. ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಚೆನ್ನಾಗಿದ್ದಾರೆ. ಜಗಳ ಆಗ್ತಾ ಇದೆ ಅಂತಾ ಸೃಷ್ಟಿ ಮಾಡಲಾಗುತ್ತಿದೆ.
ಇಕ್ಬಾಲ್ ಹುಸೇನ್ ಮೊದಲ ಬಾರಿ ಶಾಸಕರಾಗಿದ್ದಾರೆ. ಅವರಿಗೆ ಸ್ವಲ್ಪ ಮೆಚ್ಯೂರಿಟಿ ಕಡಿಮೆ ಇರುವ ಹಾಗೇ ಕಾಣಿಸುತ್ತಿದೆ. ಅವರು ಡಿ.ಕೆ ಶಿವಕುಮಾರ್ ಅವರಿಗೆ ಬಹಳ ಆತ್ಮೀಯರು. ಹೀಗಾಗಿ ಹೇಳುತ್ತಿದ್ದಾರೆ. ಡಿ.ಕೆ ಶಿವಕುಮಾರ್ ನನಗೂ ಆತ್ಮೀಯರು, ಅವರು ಸಿಎಂ ಆದ್ರೆ ನಮಗೆ ಸಂತೋಷವೇ. ಆದರೆ ರಾಹುಲ್ ಗಾಂಧಿ ಹಾಗೂ ಎಲ್ಲ ಶಾಸಕರ ಭಾವನೆ ಸಿದ್ದರಾಮಯ್ಯ ಇರಲಿ ಅನ್ನೋದಾಗಿದೆ. ಎರಡೂವರೆ ವರ್ಷ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಹೀಗಾಗಿ ಅವರೇ ಇರಲಿ ಅನ್ನೋ ಭಾವನೆ ಇದೆ. 2028ಕ್ಕೆ ಡಿ.ಕೆ ಶಿವಕುಮಾರ್ ಕ್ಲೇಮ್ ಮಾಡಲಿ. 2028 ಕ್ಕೂ ಬಹಳ ಜನ ಇದ್ದಾರೆ. ಯಾರ ಅದೃಷ್ಟ ಇರತ್ತೆ ಅವರಾಗಲಿ ಎಂದು ಹೇಳಿದರು.
Share This Article