ಬೆಂಗಳೂರು: ಹೋಳಿ ಹಬ್ಬದ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಭಾರತೀಯ ರೈಲ್ವೆ ಮಹತ್ವದ ಕ್ರಮ ಕೈಗೊಂಡಿದೆ. ವಿಶಾಖಪಟ್ಟಣಂ–ಎಸ್‌ಎಂವಿಟಿ ಬೆಂಗಳೂರು ನಡುವೆ ಸಂಚರಿಸುವ ವಾರಾಂತ್ಯ ವಿಶೇಷ ರೈಲು ಸೇವೆಯ ಅವಧಿಯನ್ನು ವಿಸ್ತರಿಸಲಾಗಿದೆ.
ವಿಶೇಷ ರೈಲು ಮಾರ್ಚ್ ಅಂತ್ಯವರೆಗೆ
ರೈಲು ಸಂಖ್ಯೆ 08581 ವಿಶಾಖಪಟ್ಟಣಂ–ಎಸ್‌ಎಂವಿಟಿ ಬೆಂಗಳೂರು ವಾರಾಂತ್ಯ ಎಕ್ಸ್‌ಪ್ರೆಸ್ (ಭಾನುವಾರ ಸಂಚಾರ) ಮಾರ್ಚ್ 29ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ 08582 ಎಸ್‌ಎಂವಿಟಿ ಬೆಂಗಳೂರು–ವಿಶಾಖಪಟ್ಟಣಂ ವಾರಾಂತ್ಯ ಎಕ್ಸ್‌ಪ್ರೆಸ್ (ಸೋಮವಾರ ಸಂಚಾರ) ಮಾರ್ಚ್ 30ರವರೆಗೆ ಓಡಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ನಾಯಂಡಹಳ್ಳಿಯಲ್ಲಿ ಹೊಸ ನಿಲುಗಡೆ
ಇಂದಿನಿಂದ ಜಾರಿಗೆ ಬರುವಂತೆ South Western Railway ಪ್ರಕಟಣೆ ನೀಡಿದ್ದು, ಬೆಂಗಳೂರಿನ ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ಪ್ರಯೋಗಾತ್ಮಕವಾಗಿ ಒಂದು ನಿಮಿಷದ ನಿಲುಗಡೆ ನೀಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ನಾಯಂಡಹಳ್ಳಿಯಲ್ಲಿ ನಿಲುಗಡೆ ಇರುವ ರೈಲುಗಳು
• ರೈಲು ಸಂಖ್ಯೆ 16215 ಮೈಸೂರು–ಕೆಎಸ್‌ಆರ್ ಬೆಂಗಳೂರು ಚಾಮುಂಡಿ ಎಕ್ಸ್‌ಪ್ರೆಸ್ – ಬೆಳಿಗ್ಗೆ 8.45
• ರೈಲು ಸಂಖ್ಯೆ 16216 ಕೆಎಸ್‌ಆರ್ ಬೆಂಗಳೂರು–ಮೈಸೂರು ಚಾಮುಂಡಿ ಎಕ್ಸ್‌ಪ್ರೆಸ್ – ಸಂಜೆ 6.39
• ರೈಲು ಸಂಖ್ಯೆ 17307 ಮೈಸೂರು–ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ – ಮಧ್ಯಾಹ್ನ 3.16
• ರೈಲು ಸಂಖ್ಯೆ 17308 ಬಾಗಲಕೋಟೆ–ಮೈಸೂರು ಬಸವ ಎಕ್ಸ್‌ಪ್ರೆಸ್ – ಬೆಳಿಗ್ಗೆ 8.19
• ರೈಲು ಸಂಖ್ಯೆ 16235 ಟುಟಿಕೋರಿನ್–ಮೈಸೂರು ಎಕ್ಸ್‌ಪ್ರೆಸ್ – ಬೆಳಿಗ್ಗೆ 6.49
• ರೈಲು ಸಂಖ್ಯೆ 16236 ಮೈಸೂರು–ಟುಟಿಕೋರಿನ್ ಎಕ್ಸ್‌ಪ್ರೆಸ್ – ರಾತ್ರಿ 8.14
• ರೈಲು ಸಂಖ್ಯೆ 16535 ಮೈಸೂರು–ಪಂಡರಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ – ಸಂಜೆ 5.40
• ರೈಲು ಸಂಖ್ಯೆ 16536 ಪಂಡರಪುರ–ಮೈಸೂರು ಗೋಲ್ ಗುಂಬಜ್ ಎಕ್ಸ್‌ಪ್ರೆಸ್ – ಬೆಳಿಗ್ಗೆ 7.44
ಮುಂದಿನ ನಿರ್ಧಾರ ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ
ನಾಯಂಡಹಳ್ಳಿ ನಿಲುಗಡೆಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಮುಂದಿನ ದಿನಗಳಲ್ಲಿ ಶಾಶ್ವತಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
