Ad image

18 ಟ್ರಾಫಿಕ್ ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಜಿಬಿಎ ಪ್ಲ್ಯಾನ್

Team SanjeMugilu
1 Min Read

ಬೆಂಗಳೂರು ನಗರ ಎರಡನೇ ಟ್ರಾಫಿಕ್ ಸಿಟಿ ಅಂತಾ ಕುಖ್ಯಾತಿ ಪಡೆದಿದೆ. ಟ್ರಾಫಿಕ್ ಸಮಸ್ಯೆ, ಸಂಚಾರ ದಟ್ಟಣೆಯಿಂದ ರಸ್ತೆ ದಾಟುವುದು ಕೂಡ ಕಷ್ಟ ಆಗುತ್ತಿದೆ. ಹೀಗಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಸ್ಕೈ ವಾಕ್‌ಗಳ ನಿರ್ಮಾಣಕ್ಕೆ ಪ್ಲ್ಯಾನ್ ಮಾಡುತ್ತಿದೆ. ಪ್ರಾಥಮಿಕ ಹಂತದಲ್ಲಿ 18 ಸ್ಕೈವಾಕ್‌ಗಳನ್ನ ನಿರ್ಮಾಣ ಮಾಡುವ ಕುರಿತು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.

ಔಟರ್ ರಿಂಗ್ ರೋಡ್, ಐಟಿಬಿಟಿ ಕಂಪನಿಗಳು ಇರುವ ರಸ್ತೆಗಳಲ್ಲಿ ಸ್ಕೈವಾಕ್ ಮಾಡುವುದರ ಜೊತೆಗೆ ಟ್ರಾಫಿಕ್ ಹಾಟ್ ಸ್ಪಾಟ್ ಅಂತಲೇ ಕರೆಯುವ ಪ್ರದೇಶಗಳಲ್ಲಿ ಸ್ಕೈವಾಕ್ ನಿರ್ಮಾಣ ಮಾಡುವ ಸಾಧ್ಯತೆ ಇದೆ. 18 ಏರಿಯಾಗಳಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿದೆ.

18 ಕಡೆಗಳಲ್ಲಿ ಸ್ಕೈ ವಾಕ್:
– ಕೋಣನಕುಂಟೆ ಕ್ರಾಸ್ ಬಳಿ ಸ್ಕೈವಾಕ್
– ಕುಮಾರಸ್ವಾಮಿ ಲೇಔಟ್ ಜಂಕ್ಷನ್
– ಯಲಚೇನಹಳ್ಳಿ ಮೆಟ್ರೋ ಸಮೀಪ
– ಸಾರಕ್ಕಿ ಜಂಕ್ಷನ್ ಬಳಿ
– ವಸಂತಪುರ ಕ್ರಾಸ್ ಬಳಿ
– ಎಟುಬಿ ಜಂಕ್ಷನ್ ಗುಬ್ಬಲಾಳ ಜಂಕ್ಷನ್
– ಬೊಮ್ಮನಹಳ್ಳಿ ಸರ್ವಿಸ್ ರಸ್ತೆ
– ರಿಂಗ್ ರೋಡ್ ಮೆಟ್ರೋ ಪಿಲ್ಲರ್ 119 & 130
– ಈಸ್ಟ್ ಎಂಡ್ ಜಂಕ್ಷನ್
– ಬಿಟಿಎಂ ಲೇಔಟ್ 16 ಹಂತ
– ಇಬ್ಬಲೂರು ಜಂಕ್ಷನ್
– ಆರ್.ವಿ ಡೆಂಟಲ್ ಜಂಕ್ಷನ್ ಸೇರಿದಂತೆ ಇನ್ನು ಹಲವೆಡೆ ನೂತನ ಸ್ಕೈವಾಕ್ ನಿರ್ಮಾಣವಾಗಲಿದೆ.

ಎರಡು-ಮೂರು ವರ್ಷಗಳಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗುತ್ತಿದ್ದು, ದಕ್ಷಿಣ ನಗರ ಪಾಲಿಕೆ ಪ್ರಸ್ತಾವನೆಗೆ ಸರ್ಕಾರ, ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ಸಿಕ್ಕಿ ಸ್ಕೈವಾಕ್ ನಿರ್ಮಾಣದಿಂದ ಸುಲಭ ಸಂಚಾರಕ್ಕೆ ಅನುಕೂಲ ಆಗುತ್ತಾ ಕಾದು ನೋಡಬೇಕಿದೆ.

Share This Article