Ad image

ಲವ್‌ ಪ್ರಪೋಸ್‌ ಒಪ್ಪದ ಯುವತಿಗೆ ಬಿಯರ್‌ ಬಾಟಲಿಯಲ್ಲಿ ಇರಿದ ಪಾಗಲ್‌ ಪ್ರೇಮಿ!

Team SanjeMugilu
0 Min Read

ಶಿವಮೊಗ್ಗ: ಪ್ರೇಮಿಗಳ ದಿನದಂದು ತನ್ನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದ ಯುವತಿಗೆ ಯುವಕನೊಬ್ಬ ಬಿಯರ್‌ ಬಾಟಲಿಯಲ್ಲಿ ಇರಿದಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಆಲ್ಮನೆ ಸಮೀಪ ನಡೆದಿದೆ.

ಪ್ರೇಮಿಗಳ ದಿನದಂದು ಯುವತಿಗೆ ಸ್ವರೂಪ್ ಎಂಬಾತ ಪ್ರೇಮ ನಿವೇದನೆ ಮಾಡಿದ್ದ. ಯುವತಿ ಆತನ ಪ್ರಪೋಸ್‌ನ್ನು ತಿರಸ್ಕರಿಸಿದ್ದಳು. ಇದರಿಂದ ಕೋಪಗೊಂಡು ಯುವತಿಯ ಕೈಗೆ ಮತ್ತು ಕುತ್ತಿಗೆ ಭಾಗಕ್ಕೆ ಬಿಯರ್ ಬಾಟಲಿಯಿಂದ ಸ್ವರೂಪ್ ಇರಿದಿದ್ದಾನೆ. ಯುವತಿಗೆ ಪಟ್ಟಣದ ಜೆಸಿ ಆಸ್ಪತ್ರೆಯಲ್ಲಿ ಪ್ರಾಥಮಿಮಿಕ ಚಿಕಿತ್ಸೆ ನೀಡಿ‌, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಪಾನಮತ್ತನಾಗಿದ್ದ ಆತನನ್ನು ಜಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article