ಬೆಂಗಳೂರು: ಅಮೆರಿಕದ ರಾಯಭಾರಿಯಾಗಿರುವ ಸರ್ಜಿಯೋ ಗೋರ್ ಭಾರತಕ್ಕೆ ಆಗಮಿಸಿದ್ದು, ಬೆಂಗಳೂರಿಗೂ ಭೇಟಿ ನೀಡಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ರೌಂಡ್ಸ್ ಹಾಕಿದ ಸರ್ಜಿಯೋ ಗೋರ್ ಜನಪ್ರಿಯ ಹೋಟೆಲ್ಗಳಲ್ಲಿ ನಮ್ಮೂರ ತಿಂಡಿ-ತಿನಿಸುಗಳನ್ನ ಸವಿದಿದ್ದಾರೆ. ಇದರ ನಡುವೆ ಇಂದು ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿದ್ದಾರೆ.
ಕಾವೇರಿ ನಿವಾಸದಲ್ಲಿ ಅಮೆರಿಕಾ ರಾಯಬಾರಿ
ಬೆಂಗಳೂರಿನಲ್ಲಿ ಕಾವೇರಿ ನಿವಾಸಕ್ಕೆ ಆಗಮಿಸಿದ ಅಮೆರಿಕಾ ರಾಯಭಾರಿ ಸರ್ಜಿಯೋ ಗೋರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಅವರು ಸರ್ಜಿಯೋ ಗೋರ್ ಅವರಿಗೆ ಪುಷ್ಪ ಗುಚ್ಛ ನೀಡಿ ಸ್ವಾಗತಿಸಿದ್ರು. ಇದು ಇಬ್ಬರು ನಾಯಕರ ಸೌಹಾರ್ದಯುತ ಭೇಟಿಯಾಗಿದೆ.
ಅಮೆರಿಕನ್ ರಾಯಭಾರಿ ಸಿಎಂ ನಿವಾಸಕ್ಕೆ ಆಗಮಿಸಿದ ವೇಳೆ ಸಚಿವರಾದ ಡಾ.ಎಂ.ಸಿ. ಸುಧಾಕರ್, ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಮತ್ತಿತರರು ಉಪಸ್ಥಿತರಿದ್ರು.
ತೇಜಸ್ವಿ ಸೂರ್ಯ ಜೊತೆಯೂ ಚರ್ಚೆ
ಅಮೆರಿಕ ರಾಯಭಾರಿ ಸರ್ಜಿಯೋ ಗೋರ್ ಬೆಂಗಳೂರಿಗೆ ಭೇಟಿ ನೀಡಿ, ಬಿಜೆಪಿ ಸಂಸದ ತೇಜಸ್ವಿ ಸೂರ್ಯರೊಂದಿಗೆ ಬೆಂಗಳೂರು ರೌಂಡ್ಸ್ ಹಾಕಿದ್ದಾರೆ. ಭಾರತ-ಅಮೆರಿಕ ಸಂಬಂಧದ ಕುರಿತು ಚರ್ಚೆ ಮಾಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾವೇರಿ ನಿವಾಸದಲ್ಲಿ ಅಮೆರಿಕಾ ರಾಯಭಾರಿ; ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಸರ್ಜಿಯೋ ಗೋರ್
