Ad image

ವಿಶ್ವಕರ್ಮ ಮಹಾಸಂಸ್ಥಾನ ಮಠದಲ್ಲಿ ಸನ್ಯಾಸ ದೀಕ್ಷೆ, ಶಿಷ್ಯ ಸ್ವೀಕಾರ ಸಮಾರಂಭ

Team SanjeMugilu
0 Min Read

ಬೆಂಗಳೂರು: ಅರೇಮಾದನಹಳ್ಳಿ ವಿಶ್ವಕರ್ಮ ಮಹಾಸಂಸ್ಥಾನ ಮಠದ  ಪೂಜ್ಯರ ಉತ್ತರಾಧಿಗಳಿಗೆ ಸನ್ಯಾಸ ದೀಕ್ಷೆ ಮತ್ತು ಶಿಷ್ಯ ಸ್ವೀಕಾರ ಸಮಾರಂಭ ಗುರುವಾರ ಜರುಗಲಿದೆ.

ಬೆಂಗಳೂರಿನಲ್ಲಿ ಸಮಾರಂಭ ಕುರಿತು ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಿ. ಸುಜ್ಞಾನಮೂರ್ತಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ರು.

ಫೆಬ್ರವರಿ 25, 26 ರಂದು ಮಠದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, ಉದ್ಘಾಟನಾ ಸಮಾರಂಭ ನೆರವೇರಲಿದೆ. ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಶ್ರೀ ಶಿವಸುಜ್ಞಾನ ತೀರ್ಥಮಹಾಸ್ವಾಮೀಜಿಯವರು ಹಾಗೂ ಅನೇಕ ಪೀಠಾಧಿಪತಿಗಳು, ಮಠಾಧಿಪತಿಗಳು ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರವರು ಸೇರಿದಂತೆ ಅನೇಕ ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ ಅಂತಾ ತಿಳಿಸಿದ್ರು.

Share This Article