Ad image

ಆಪರೇಷನ್ ʻರೋರಿಂಗ್ ಲಯನ್ʼ – ಲೆಬನಾನ್‌ ಮೇಲೆ ಇಸ್ರೇಲ್‌ ಮಿಸೈಲ್‌ ಮಳೆ; 31 ಮಂದಿ ಸಾವು

Team SanjeMugilu
1 Min Read

ಟೆಲ್‌ ಅವಿವ್‌/ಬೈರೂತ್‌: ಆಪರೇಷನ್ ‘ರೋರಿಂಗ್ ಲಯನ್’ ಭಾಗವಾಗಿ ಇಸ್ರೇಲ್‌ ರಕ್ಷಣಾ ಪಡೆಗಳು ನಡೆಸುತ್ತಿರುವ ದಾಳಿಯನ್ನು ಮತ್ತಷ್ಟು ತೀವ್ರಗೊಂಡಿದೆ. ಹಿಜ್ಬುಲ್ಲಾ ನೆಲೆಗಳನ್ನ ಗುರಿಯಾಗಿಸಿ ಲೆಬನಾನ್‌  ರಾಜಧಾನಿ ಬೈರೂತ್‌ ಮೇಲೆ ಇಸ್ರೇಲ್‌ ದಾಳಿ ನಡೆಸಿದೆ.

ಹಿಜ್ಬುಲ್ಲಾ ನಡೆಸಿದ ಕ್ಷಿಪಣಿ ಮತ್ತು ಗುಂಡಿನ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಕೂಡ ಮಿಸೈಲ್‌ ಮಳೆಗರೆದಿದೆ. ಹಿಜ್ಬುಲ್ಲಾ ಗುರಿಗಳ ಮೇಲೆ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ನಡೆಸಿದ ದಾಳಿಯಲ್ಲಿ ಕನಿಷ್ಠ 31 ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಅಲ್ಲದೇ ನಮ್ಮ ಪಡೆಗಳು ಲೆಬನಾನ್‌ ರಾಜ್ಯವನ್ನ ನಾಶಪಡಿಸುತ್ತಿವೆ. ಯಾವುದೇ ಬೆದರಿಕೆಗಳನ್ನ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಇಸ್ರೇಲ್‌ ಹೇಳಿದೆ.

ಇದಕ್ಕೂ ಮುನ್ನ ಖಮೇನಿ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್‌ ನಾಗರಿಕರನ್ನ ಗುರಿಯಾಗಿಸಿ ಹಿಜ್ಬುಲ್ಲಾ ಮಿಸೈಲ್‌ ಮತ್ತು ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಆಪರೇಷನ್ ʻರೋರಿಂಗ್ ಲಯನ್ʼ  ಪ್ರಾರಂಭಿಸಿ ಲೆಬನಾನ್‌ ಸುತ್ತ ದಾಳಿ ನಡೆಸುತ್ತಿದೆ.

ನಾಗರಿಕರಿಗೆ ಎಚ್ಚರಿಕೆ
ದಾಳಿ ನಡೆಸುವುದಕ್ಕೆ ಮುನ್ನವೇ ಇಸ್ರೇಲ್‌ ಲೆಬನಾನ್‌ ನಾಗರಿಕರಿಗೆ ಎಚ್ಚರಿಕೆ ರವಾನಿಸಿತ್ತು. ಪೂರ್ವ ಮತ್ತು ದಕ್ಷಿಣ ಲೆಬನಾನ್‌ನ ಸುಮಾರು 50 ಹಳ್ಳಿಗಳ ಜನರನ್ನ ಸ್ಥಳಾಂತರಿಸುವಂತೆ ಇಸ್ರೇಲಿ ಸೇನೆ ಒತ್ತಾಯಿಸಿತ್ತು. ನಾಗರಿಕರು ತಮ್ಮ ಮನೆಗಳನ್ನ ತೆರವುಗೊಳಿಸಿ ಹಳ್ಳಿಗಳಿಂದ ಕನಿಷ್ಠ 1,000 ಮೀಟರ್ ದೂರದಲ್ಲಿರುವ ತೆರೆದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಹೇಳಿತ್ತು.

Share This Article