Ad image

‘ಇಲ್ಲಿ ಬಂದು ಮಾತಾಡೋಕೆ ಅವನ್ಯಾರು?’ ಜಮೀರ್ ಅಹ್ಮಮದ್ ವಿರುದ್ಧ ಸಚಿವ SS ಮಲ್ಲಿಕಾರ್ಜುನ ಆಕ್ರೋಶ

Team SanjeMugilu
2 Min Read

ದಾವಣಗೆರೆ: ಕಾಂಗ್ರೆಸ್​​ನಲ್ಲಿ  ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆ ಜೋರಾಗಿರುವ ಹೊತ್ತಲ್ಲೇ, ಬಣ ಗುದ್ದಾಟ ಹಾಗೂ ಕೆಲ ನಾಯಕರ ನಡುವೆ ಅಸಮಾಧನಾ ಸ್ಫೋಟದಂತಹ ಬೆಳವಣಿಗೆಗಳು ನಡೆಯುತ್ತಿದೆ. ದಾವಣಗೆರೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ಕೊಡಿಸಲು ಜಮೀರ್ ಅಹ್ಮದ್​ ಖಾನ್ ಲಾಬಿ ನಡೆಸುತ್ತಿದ್ದಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಈ ವಿಚಾರಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಹಿರಂಗವಾಗಿದೆ ಜಮೀರ್​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಜಮೀರ್ ವಿರುದ್ಧ SS ಮಲ್ಲಿಕಾರ್ಜುನ ಕಿಡಿ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ವಿಚಾರ ಇದೀಗ ಸಚಿವರ ನಡುವಿನ ವಾಗ್ವಾದಕ್ಕೆ ಕಾರಣವಾದಂತೆ ಕಾಣ್ತಿದೆ. ದಾವಣಗೆರೆ ಚುನಾವಣೆ ಟಿಕೆಟ್ ವಿಚಾರದಲ್ಲಿ ಎಂಟ್ರಿಯಾದ ಸಚಿವ ಜಮೀರ್ ಅಹ್ಮದ್ ವಿರುದ್ಧ ಎಸ್.ಎಸ್ ಮಲ್ಲಿಕಾರ್ಜುನ ಅವ್ರು ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.
ಇಲ್ಲಿ ಬಂದು ಮಾತನಾಡೋಕೆ ಅವನ್ಯಾರು?
‘ಅವನ್ಯಾರು ಇಲ್ಲಿ ಬಂದು ಮಾತನಾಡೋಕೆ, ಇವು ನಮ್ಮ ಕ್ಷೇತ್ರಗಳು”ಅವನ್ಯಾರು ಮಾತನಾಡೋಕೆ? ಇವೆಲ್ಲಾ ಸರಿ ಇರಲ್ಲ’ಸಭೆ ಕರೆದಾಗ ನಾನು ಮಾತನಾಡ್ತೀನಿ ಎಂದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಖಡಕ್​ ಆಗಿ ಪ್ರತಿಕ್ರಿಯಿಸಿದ್ದಾರೆ.
‘ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್​ ನೀಡ್ಬೇಕು’
ಸಚಿವ ಜಮೀರ್ ಅಹ್ಮದ್ ಖಾನ್ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಲು ಒತ್ತಾಯಿಸಿದ್ದಾರೆ ಎನ್ನಲಾಗ್ತಿದೆ. ಜನವರಿ 26 ರಂದು ಎಂಎಲ್‌ಸಿ ಅಬ್ದುಲ್ ಜಬ್ಬಾರ್ ನಿವಾಸಕ್ಕೆ ಭೇಟಿ ನೀಡಿದ್ದ ಸಚಿವ ಜಮೀರ್ ಅಹ್ಮದ್, ಈ ವೇಳೆ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಲು ವರಿಷ್ಠರಿಗೆ ಮನವಿ ಮಾಡೋದಾಗಿ ಹೇಳಿದ್ದರು ಎನ್ನಲಾಗ್ತಿದೆ.
ಮಲ್ಲಿಕಾರ್ಜುನ ಅವರ ಪುತ್ರನಿಗೆ ಸಿಗುತ್ತಾ ಟಿಕೆಟ್?
ಜಮೀರ್ ಮಾತಿಗೆ ಕೆಂಡಾಕಾರಿದ ಮಲ್ಲಿಕಾರ್ಜುವ ಅವ್ರು ಪುತ್ರ ಸಮರ್ಥಗೆ ಟಿಕೆಟ್ ನೀಡಲು ಕೆಲ ನಾಯಕರು ಆಗ್ರಹಿಸುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ, ಸಭೆ ಕರೆದಾಗ ಏನ್ ಹೇಳ್ತಾರೆ ಕೇಳೋಣ ಎಂದಿದ್ದಾರೆ. ಅಲ್ಲದೆ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಲು ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೆ ನೋಡೋಣ. ಹೈಕಮಾಂಡ್ ಹೇಗೆ ಹೇಳುತ್ತಾರೆ ಹಾಗೇ ದುಡಿಯೋಣ ಎಂದಿದ್ದಾರೆ.
ಸೂಕ್ತ ಅಭ್ಯರ್ಥಿಯನ್ನು ಚುನಾವಣೆ ನಿಲ್ಲಿಸುತ್ತೇವೆ
ಮೀಟಿಂಗ್ ಕರೆದಾಗ ಏನು ಅಂತ ಕೇಳೋಣ. ಸೂಕ್ತ ಅಭ್ಯರ್ಥಿ ಬೇಕು ನಮಗೆ, ನಮ್ಮಲ್ಲಿ ಒಮ್ಮತ ಇದೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ನಿರ್ಧಾರ ಮಾಡ್ತೀವಿ. ನಾನು ಕಾರ್ಯಕರ್ತರ ಮೇಲೆ ಎಲ್ಲವನ್ನ ಬಿಡ್ತೀನಿ, ನಾನೇನೂ ಮಧ್ಯಪ್ರವೇಶಿಸಲ್ಲ. ಅವರು ಯಾರಿಗೆ ಹೇಳ್ತಾರೆ ಅವರನ್ನ ನಿಲ್ಲಿಸೋಣ. ಎಲ್ಲಾ ಸಮಾಜದವರು ಸೇರಿ ಸೂಕ್ತ ಅಭ್ಯರ್ಥಿಯನ್ನು ಚುನಾವಣೆ ನಿಲ್ಲಿಸುತ್ತೇವೆ ಎಂದು ದಾವಣಗೆರೆಯಲ್ಲಿ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ ಹೇಳಿಕೆ ನೀಡಿದ್ದಾರೆ.

Share This Article