Ad image

ಶಾಕಿಂಗ್​ ಲೇಆಫ್​​.. ಐಟಿ ಕಂಪನಿಯಿಂದ ಶೇ.40ರಷ್ಟು ಉದ್ಯೋಗಿಗಳಿಗೆ ಗೇಟ್​ಪಾಸ್​​

Team SanjeMugilu
2 Min Read

ಇತ್ತೀಚೆಗೆ ಐಟಿ ಸಿಟಿ ಬೆಂಗಳೂರಿನಲ್ಲಿ ಒಂದು ಶಾಕಿಂಗ್ ಲೇಆಫ್ ನಡೆದಿದ್ದು, ಇದು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್​ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಬೆಂಗಳೂರು ಮೂಲದ ಒಂದು ಐಟಿ ಸ್ಟಾರ್ಟ್‌ಅಪ್ ಕೇವಲ ಒಂದೇ ದಿನದಲ್ಲಿ ತನ್ನ ಒಟ್ಟು ಉದ್ಯೋಗಿಗಳ ಪೈಕಿ ಬರೋಬ್ಬರಿ 40 ಪರ್ಸೆಂಟ್ ಜನರನ್ನು ಕೆಲಸದಿಂದ ಕಿತ್ತು ಹಾಕಿದೆ. ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ನಡೆದ ಈ ಹಠಾತ್ ಲೇಆಫ್ ಇಡೀ ಟೆಕ್ ಕಮ್ಯುನಿಟಿಯನ್ನೇ ದಿಗ್ಭ್ರಮೆಗೊಳಿಸಿದೆ.

ಈ ವಿಷಯವನ್ನ ಚಾರ್ಟರ್ಡ್ ಅಕೌಂಟೆಂಟ್ ಅರ್ಪಿತ್ ಗೋಯಲ್ ಅನ್ನೋರು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಅವರ ಆಪ್ತ ಗೆಳೆಯ ಅದೇ ಸ್ಟಾರ್ಟ್‌ಅಪ್‌ನಲ್ಲಿ ವಾರ್ಷಿಕ 92 ಲಕ್ಷ ರೂಪಾಯಿ ಸಿಟಿಸಿ ಪ್ಯಾಕೇಜ್ ಪಡೀತಿದ್ರು. ಸಾಮಾನ್ಯವಾಗಿ ನಾವೆಲ್ಲರೂ ಅನ್ಕೊಳ್ತೀವಿ ಅಂದ್ರೆ ಹೈ ಸ್ಯಾಲರಿ ಇದ್ರೆ ಜಾಬ್ ಸೆಕ್ಯೂರಿಟಿ ಇರುತ್ತೆ ಅಂತ. ಆದ್ರೆ ಈ ಘಟನೆ ಒಂದು ಕಹಿ ಸತ್ಯವನ್ನ ರಿವೀಲ್ ಮಾಡಿದೆ. ಕಂಪನಿಗಳು ಕಾಸ್ಟ್ ಕಟಿಂಗ್ ಮಾಡೋವಾಗ ಎಷ್ಟು ದೊಡ್ಡ ಸಂಬಳದ ಬ್ರಾಕೆಟ್‌ನಲ್ಲಿದ್ದರೂ ಯಾರೂ ಕೂಡ ಸೇಫ್ ಅಲ್ಲ.

ಬರಿ ಕೆಲಸ ಹೋಗಿರೋದು ಅಷ್ಟೇ ಅಲ್ಲ, ಇದರ ಹಿಂದಿರೋ ಹ್ಯೂಮನ್ ಸ್ಟೋರಿ ಇನ್ನು ನೋವಿನದ್ದಾಗಿದೆ. ಕೆಲಸ ಕಳೆದುಕೊಂಡವರಲ್ಲಿ ಒಬ್ಬರು ಇನ್ನೇನು ಕೆಲವೇ ದಿನಗಳಲ್ಲಿ ತಂದೆಯಾಗೋ ಸಂಭ್ರಮದಲ್ಲಿದ್ರು. ಮಗುವಿನ ಬರ್ತ್​ಗೆ ಕೌಂಟ್‌ಡೌನ್ ಸ್ಟಾರ್ಟ್ ಆಗಿರೋವಾಗ ಇಂತಹ ಆಘಾತ ಎದುರಾಗಿದೆ. ಇನ್ನೊಬ್ಬ ಉದ್ಯೋಗಿ ಗರ್ಭಿಣಿಯಾಗಿದ್ದು, ಮೆಟರ್ನಿಟಿ ಲೀವ್​ಗೆ ಅಪ್ಲೈ ಮಾಡೋಕೆ ರೆಡಿಯಾಗಿದ್ದ ಟೈಮ್‌ನಲ್ಲೇ ಈ ಲೇಆಫ್ ಲಿಸ್ಟ್​ಗೆ ಲ್ಯಾಂಡ್ ಆಗಿದ್ದಾರೆ. ಜೀವನದ ಇಂತಹ ಸೂಕ್ಷ್ಮ ಹಂತಗಳಲ್ಲಿ ಉದ್ಯೋಗ ನಷ್ಟವಾಗೋದು ನಿಜಕ್ಕೂ ದುರಂತ.

ಐಟಿ ಫೀಲ್ಡ್‌ನಲ್ಲಿ ಸಕ್ಸಸ್ ಅನ್ನೋದು ಅನಿಶ್ಚಿತತೆ

ಸ್ಟಾರ್ಟ್‌ಅಪ್‌ಗಳ ಅಸ್ಥಿರ ಸ್ವಭಾವ ಈಗಿನ ಕಾಲದಲ್ಲಿ ತುಂಬಾ ಕಾಮನ್ ಆಗಿದೆ. ಇನ್ವೆಸ್ಟರ್​​ಗಳ ಪ್ರೆಷರ್, ಮಾರ್ಕೆಟ್ ಕಾಂಪಿಟಿಷನ್ ಮತ್ತು ಪ್ರಾಫಿಟ್ ಮಾಡೋ ಗುರಿ ಕಂಪನಿಗಳನ್ನ ಇಂತಹ ತೀವ್ರ ನಿರ್ಧಾರಗಳ ಕಡೆಗೆ ಒಯ್ತಿವೆ. ಮೊದಲೆಲ್ಲಾ ಸ್ಟಾರ್ಟ್‌ಅಪ್ ಅಂದ್ರೆ ಒಳ್ಳೆ ಪ್ರಮೋಷನ್ ಮತ್ತು ಭರವಸೆಯ ಫ್ಯೂಚರ್ ಅಂತ ಅನ್ಕೊಳ್ತಿದ್ರು, ಆದ್ರೆ ಈಗ ಆ ವಿಶ್ವಾಸಾರ್ಹತೆ ಕಮ್ಮಿ ಆಗ್ತಿದೆ. ಐಟಿ ಫೀಲ್ಡ್‌ನಲ್ಲಿ ಸಕ್ಸಸ್ ಅನ್ನೋದು ಯಾವಾಗ್ಲೂ ಅನಿಶ್ಚಿತತೆಯ ಜೊತೆಗೇ ಹೆಜ್ಜೆ ಹಾಕ್ತಿದೆ ಅನ್ನೋದು ಇಲ್ಲಿ ಸ್ಪಷ್ಟವಾಗಿದೆ.

ಕೊನೆಯದಾಗಿ, ಈ ಘಟನೆ ಟೆಕ್ ಉದ್ಯೋಗಿಗಳಿಗೆ ಮತ್ತು ಸ್ಟೂಡೆಂಟ್ಸ್‌ಗೆ ಒಂದು ದೊಡ್ಡ ಪಾಠ ಕಲಿಸಿದೆ. ಬರಿ ದೊಡ್ಡ ಪ್ಯಾಕೇಜ್ ನಂಬಿಕೊಂಡು ಇವತ್ತಿನ ಕಾರ್ಪೊರೇಟ್ ಜಗತ್ತಿನಲ್ಲಿ ಕೂರಬಾರದು. ನಿರಂತರವಾಗಿ ಸ್ಕಿಲ್ಸ್ ಅನ್ನ ಅಪ್‌ಗ್ರೇಡ್ ಮಾಡ್ಕೋಬೇಕು ಮತ್ತು ಸರಿಯಾದ ಫೈನಾನ್ಷಿಯಲ್ ಪ್ಲಾನಿಂಗ್ ಇಟ್ಕೋಬೇಕು. ಉದ್ಯೋಗ ಅನ್ನೋದು ಬರಿ ಇನ್ಕಮ್ ಸೋರ್ಸ್ ಅಷ್ಟೇ ಅಲ್ಲ, ಅದು ನಿಮ್ಮ ಫ್ಯಾಮಿಲಿ ಸೆಕ್ಯೂರಿಟಿಗೆ ಆಧಾರ.

Share This Article