Ad image

ಪೆಟ್ರೋಲ್ ದರ ಹೆಚ್ಚಾಗುತ್ತೆ ಅಂತ ಬಂಕ್‌ಗೆ ನೀರಿನ ಜಾರ್‌ ಹೊತ್ತುಕೊಂಡು ಬಂದ ಸವಾರ!

Team SanjeMugilu
1 Min Read

ಚೆನ್ನೈ: ಎಲ್‌ಪಿಜಿ ಸಿಲಿಂಡರ್‌  ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿರುವ ಬೆನ್ನಲ್ಲೇ ತಮಿಳುನಾಡಿನಲ್ಲಿ ಬಂಕ್‌ ಮುಂದೆ ಜನರು ಸಾಲುಗಟ್ಟಿ ನಿಂತು ವಾಹನಗಳಿಗೆ ಪೆಟ್ರೋಲ್‌  ಹಾಕಿಸುತ್ತಿದ್ದಾರೆ.

ಈಗ ಸಿಲಿಂಡರ್‌ಗೆ ಸಮಸ್ಯೆಯಗಿದೆ ಮುಂದೆ ಪೆಟ್ರೋಲ್ ಕೂಡ ಸಿಗುವುದಿಲ್ಲ. ದರ ಭಾರೀ ಏರಿಕೆಯಾಗಲಿದೆ ಎಂಬ ಗಾಳಿ ಸುದ್ದಿಯನ್ನು ಯಾರೋ ಹಬ್ಬಿಸಿದ್ದಾರೆ. ಸುದ್ದಿ ವೈರಲ್‌ ಆದ ಬೆನ್ನಲ್ಲೇ ತಮಿಳುನಾಡಿನ ಪೆಟ್ರೋಲ್‌ ಬಂಕ್‌ ಮುಂದೆ ಜನ ಪೆಟ್ರೋಲ್‌ ಹಾಕಿಸಲು ಮುಗಿ ಬಿದ್ದಿದ್ದಾರೆ.

ವಾಹನಗಳಿಗೆ ಫುಲ್‌ ಟ್ಯಾಂಕ್‌ ಪೆಟ್ರೋಲ್‌ ತುಂಬಿಸುವುದರ ಜೊತೆಗೆ ಸವಾರನೊಬ್ಬ ಮನೆಯಲ್ಲಿದ್ದ 15 ಲೀಟರ್‌ ವಾಟರ್‌ ಜಾರ್‌ ತಂದು ಪೆಟ್ರೋಲ್‌ ತುಂಬಿಸಿಕೊಂಡು ಹೋಗಿದ್ದಾನೆ. ತಮಿಳುನಾಡಿನ ಪೆಟ್ರೋಲ್‌ ಬಂಕ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಫುಲ್‌ ವೈರಲ್‌ ಆಗಿದೆ.

ಮಧ್ಯಪ್ರಾಚ್ಯದಲ್ಲಿ ತೈಲ ಬಿಕ್ಕಟ್ಟು ಸಂಭವಿಸಿದರೂ ಭಾರತಕ್ಕೆ ಯಾವುದೇ ಸಮಸ್ಯೆ ಇಲ್ಲ. ನಮ್ಮಲ್ಲಿ ತೈಲಗಳನ್ನು ತುರ್ತು ದಾಸ್ತಾನು ಸಂಗ್ರಹಿಸಿ ಇಡಲಾಗಿದೆ. ಬೇರೆ ದೇಶಗಳಿಂದಲೂ ಕಚ್ಚಾ ತೈಲ ಬರುತ್ತಿದ್ದು ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

Share This Article