Ad image

ಡಿಜಿಟಲ್ ಅರೆಸ್ಟ್ ಸುಳಿಯಲ್ಲಿ ಕರ್ನಾಟಕ – 3 ವರ್ಷಕ್ಕೆ ಬರೋಬ್ಬರಿ 468 ಕೋಟಿ ರೂ. ಕಳೆದುಕೊಂಡ ಜನ

Team SanjeMugilu
1 Min Read

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಡಿಜಿಟಲ್ ಅರೆಸ್ಟ್ ಕೇಸ್‌ಗಳು ಹೆಚ್ಚಾಗುತ್ತಿವೆ. ಕಳೆದ 2 ವರ್ಷಗಳಲ್ಲಿ ಜನರು ಬರೋಬ್ಬರಿ 468 ಕೋಟಿ ರೂ. ಕಳೆದುಕೊಂಡಿರುವ ವರದಿಯಾಗಿದ್ದು, ಈ ಕುರಿತು ಗೃಹ ಇಲಾಖೆ ವರದಿ ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಜನರು ಕೋಟ್ಯಂತರ ರೂಪಾಯಿ ಹಣವನ್ನು ಡಿಜಿಟಲ್ ಅರೆಸ್ಟ್‌ನಿಂದ  ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ವರ್ಷವೂ ಕೇಸ್‌ಗಳ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆ. ಪೊಲೀಸರು ಎಷ್ಟೇ ತಿಳಿ ಹೇಳಿದರೂ ಕೂಡ ಜನರು ಪಾಠ ಕಲಿಯುತ್ತಿಲ್ಲ. ಕಳೆದ 3 ವರ್ಷಗಳಲ್ಲಿ ಒಟ್ಟು 1,695 ಕೇಸ್ ದಾಖಲಾಗಿದ್ದು, ಇದರಿಂದ ಬರೋಬ್ಬರಿ 468 ಕೋಟಿ ರೂ. ಕಳೆದುಕೊಂಡಿರುವ ವರದಿ ಇಲ್ಲಿದೆ.

ಯಾವ ವರ್ಷ ಎಷ್ಟು ಕೇಸ್?
2023- 196 ಕೇಸ್ ದಾಖಲು
2024- 1129 ಕೇಸ್ ದಾಖಲು
2025- 345 ಕೇಸ್ ದಾಖಲು
2026- 25 ಕೇಸ್ ದಾಖಲು (ಫೆಬ್ರವರಿವರೆಗೆ)

ಕಳೆದುಕೊಂಡ ಹಣವೆಷ್ಟು?
2023- 22,52,38,078 ರೂ.
2024- 219,42,53,299 ರೂ.
2025- 215,14,04,655 ರೂ.
2026-11,57,85,710 ರೂ.

Share This Article