Ad image

ಉಡುಪಿ ಕಟಪಾಡಿಯಲ್ಲಿ ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್

Team SanjeMugilu
1 Min Read

ಉಡುಪಿ: ಮಧ್ಯಪ್ರಾಚ್ಯ ಯುದ್ಧದಿಂದ ಉಂಟಾಗಿರುವ ಗ್ಯಾಸ್ ಅಭಾವದ ಹೊತ್ತಲ್ಲೇ ಉಡುಪಿಯ ಕಟಪಾಡಿಯಲ್ಲಿ ಗ್ಯಾಸ್ ಟ್ಯಾಂಕರ್ ಮಗುಚಿ ಬಿದ್ದಿದೆ. ಮಂಗಳೂರಿನಿಂದ ಉಡುಪಿ (Udupi) ಕಡೆಗೆ ಸಾಗುತ್ತಿದ್ದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ.

ಟ್ಯಾಂಕರ್ ಎಲ್‌ಪಿಜಿ ಗ್ಯಾಸ್ ಸಾಗಾಟ ಮಾಡುತ್ತಿತ್ತು. ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯಲ್ಲೇ ಟ್ಯಾಂಕರ್ ಮಗುಚಿ ಬಿದ್ದಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಟ್ಯಾಂಕರ್‌ನಲ್ಲಿ ಸೋರಿಕೆ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದರು. ಪಲ್ಟಿಯಾದ ಟ್ಯಾಂಕರ್‌ನಲ್ಲಿ ಅನಿಲ ಸೋರಿಕೆ ತಡೆಯಲು ನಿರಂತರ ನೀರು ಹಾಯಿಸಿದರು.

ಮಂಗಳೂರಿನಿಂದ ಇನ್ನೊಂದು ಟ್ಯಾಂಕರ್ ಬಂದ ಬಳಿಕ ಗ್ಯಾಸ್ ಶಿಫ್ಟ್ ಕಾರ್ಯ ಆರಂಭಿಸಲಾಗಿದೆ. ಇದನ್ನೂ ಓದಿ: 20% ಗ್ಯಾಸ್ ವಿತರಣೆಗೆ ಕೇಂದ್ರ ಗ್ರೀನ್ ಸಿಗ್ನಲ್ – ಇಂದು ಹೋಟೆಲ್ ಸಂಘದಿಂದ ಸರ್ಕಾರದ ಭೇಟಿ

Share This Article