Ad image

ಹೋಟೆಲ್‌ಗಳಿಗೆ ಸದ್ಯಕ್ಕೆ ಗ್ಯಾಸ್ ಪೂರೈಕೆ ಇಲ್ಲ – ಹೋಟೆಲ್ ಉದ್ಯಮಕ್ಕೆ ಮತ್ತೆ ಸರ್ಕಾರ ಶಾಕ್

Team SanjeMugilu
1 Min Read

ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷದಿಂದ ತತ್ತರಿಸಿರುವ ಹೋಟೆಲ್ ಉದ್ಯಮಕ್ಕೆ ಕರ್ನಾಟಕ ಸರ್ಕಾರ ಮತ್ತೆ ಶಾಕ್ ಕೊಟ್ಟಿದೆ. ಹೋಟೆಲ್‌ಗಳಿಗೆ ಸದ್ಯಕ್ಕೆ ಗ್ಯಾಸ್  ಪೂರೈಕೆ ಇಲ್ಲ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

ತೈಲ ಪೂರೈಕೆ ಕಂಪನಿಗಳ ಜೊತೆ ಇಂದು ಮಹತ್ವದ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಎರಡನೇ ಪತ್ರ ಬರೆಯುತ್ತಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ. ಕೇಂದ್ರ ಸರ್ಕಾರ ಹೆಚ್ಚಿನ ಗಮನ ಕೊಡಬೇಕು. ಇಂದು ಸೆಕ್ರೆಟರಿ, ಕಮಿಷನರ್ ಹಾಗೂ ತೈಲ ಕಂಪನಿಗಳ ಮುಖ್ಯಸ್ಥರು ಜೊತೆ ಸಭೆ ನಡೆಸಲಾಯಿತು ಎಂದರು.

ಒಂದು ಗಂಟೆಯ ತನಕ ಸಭೆಯಾಗಿದೆ. ವಿನಾಕಾರಣ ಆತಂಕಕ್ಕೆ ಒಳಗಾಗಬಾರದು ಎಂದು ಗ್ರಾಹಕರಲ್ಲಿ ಮನವಿ ಮಾಡುತ್ತೇವೆ. ಗ್ಯಾಸ್ ಡಬಲ್ ಬುಕ್ಕಿಂಗ್ ಬೇಡ. ಮಿತವ್ಯಯದಲ್ಲಿ ಬಳಕೆ ಮಾಡಿ. ಹಡಗುಗಳ ಮೂವ್‌ಮೆಂಟ್ ಆರಂಭವಾಗಿದೆ. ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು, ಏರ್‌ಲೈನ್ಸ್, ರೈಲ್ವೆ ಕ್ಯಾಂಟೀನ್‌ಗಳಿಗೆ 100% ರಷ್ಟು ಸಿಲಿಂಡರ್ ನೀಡಲು ಒಪ್ಪಿಗೆ ನೀಡಲಾಗಿದೆ. ಆರೂವರೆ ಸಾವಿರ ಸಿಲಿಂಡರ್ ಗಳ ಪ್ರತಿದಿನ ಖರ್ಚಿಗೆ ಕೇಂದ್ರ ಒಪ್ಪಿಗೆ ನೀಡಿದೆ. ಇದರಲ್ಲಿ 4200 ಸಿಲಿಂಡರ್ ಎಸೆನ್ಸಿಯಲ್ ವಲಯಕ್ಕೆ ಪೂರೈಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು, ಇಂದಿರಾ ಕ್ಯಾಂಟೀನ್‌ಗಳಿಗೆ 4200+1200, ಎಸೆನ್ಸಿಯಲ್ ಸರ್ವಿಸ್ ವಲಯಕ್ಕೆ 5200 ಪೂರೈಕೆ, 2250 ಸಿಲಿಂಡರ್‌ಗಳು ಆಟೋಗಳಿಗೆ ಪೂರೈಕೆ ಮಾಡಲಾಗ್ತಿದೆ. ಹೊಟೇಲ್‌ಗಳಿಗೆ ಸದ್ಯಕ್ಕೆ ಪೂರೈಕೆ ಆಗಲ್ಲ. ಎಲೆಕ್ಟ್ರಿಕ್ ಸ್ಟವ್ ಬಳಕೆ ಮಾಡುವಂತೆ ಸಚಿವರು ಮನವಿ ಮಾಡಿದರು.

1 ಸಾವಿರ ಸಿಲಿಂಡರ್ ಒಂದು ದಿನಕ್ಕೆ ಪೂರೈಕೆ ಮಾಡಲಾಗುವುದು. ಇದರಲ್ಲಿ ಹೋಟೆಲ್ ಅಸೋಸಿಯೇಷನ್ ಕೂಡ ಇದೆ. ಹೋಟೆಲ್ ಸರ್ವಿಸರ್‌ಗಳ ಬಳಕೆಗೆಯಾದ್ರೂ ಸಿಲಿಂಡರ್ ಬೇಕಾಗುತ್ತೆ. ರಾಜ್ಯದಲ್ಲಿ 44 ಸಾವಿರ ಸಿಲಿಂಡರ್‌ಗಳು ಹೊಟೇಲ್‌ಗಳಿಗೆ ಪೂರೈಕೆ ಆಗ್ತಿತ್ತು ಎಂದು ವಿವರಿಸಿದರು.

Share This Article