ಬೆಂಗಳೂರು : ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರೀ ದುರಂತದ ಬಳಿಕ ಐಪಿಎಲ್ ಹಾಗೂ ಆರ್ಸಿಬಿ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಕಟ್ಟುನಿಟ್ಟಾದ ನಿಯಮಗಳ ಪಾಲನೆಯೊಂದಿಗೆ ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ಆಯೋಜಿಸಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.
ಗೃಹ ಸಚಿವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
ಚಿನ್ನಸ್ವಾಮಿಯಲ್ಲಿ IPL ಆಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಿದ್ರು. ಸ್ಟೇಡಿಯಂ ಭದ್ರತೆ ಸೇರಿದಂತೆ ಕೆಲ ವಿಚಾರ ಸಂಬಂಧ ಉನ್ನತ ಮಟ್ಟದ ಕಮಿಟಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದು, ಅಂತಿಮ ವರದಿ ಬಳಿಕ ಗೃಹ ಸಚಿವರು ಉನ್ನತ ಮಟ್ಟದ ಸಭೆ ಕರೆದಿದ್ರು.
7 ಪಂದ್ಯಗಳ ಆಯೋಜನೆಗೆ ಗ್ರೀನ್ ಸಿಗ್ನಲ್
ಚಿನ್ನಸ್ವಾಮಿಯಲ್ಲಿ ನಿಯಮಾನುಸಾರ ಪಂದ್ಯ ಆಯೋಜನೆಗೆ ಅವಕಾಶ ನೀಡಲಾಗಿದೆ. ಇಂದಿನ ಸಭೆಯಲ್ಲಿ ಪಂದ್ಯ ಆಯೋಜನೆ ಗ್ರೀನ್ ಸಿಗ್ನಲ್ ನೀಡಿದ ಸರ್ಕಾರ ಒಟ್ಟು 7 ಪಂದ್ಯ ಆಯೋಜನೆಗೂ ಒಪ್ಪಿಗೆ ಸೂಚಿಸಿದೆ.
ಪಂದ್ಯ ಆಯೋಜನೆಗೆ ಅಧಿಕೃತ ಪರವಾನಿಗೆ
ಗೃಹ ಸಚಿವರು ಒಂದು ತಜ್ಞರ ಸಮಿತಿ ಮಾಡಿದ್ದು, ತಜ್ಞರ ಸಮಿತಿ ಶುಕ್ರವಾರ ಚಿನ್ನಸ್ವಾಮಿಗೆ ಭೇಟಿಕೊಟ್ಟಿತ್ತು. ತಜ್ಞರ ವರದಿ ಆಧರಿಸಿ ಇಂದು ಸಭೆ ನಡೆದಿದ್ದು, ಇಂದು ನಮಗೆ ಅಧಿಕೃತ ಪರವಾನಿಗೆ ಸಿಕ್ಕಿದೆ. ತಜ್ಞರ ಸಮಿತಿಗೆ ಹಾಗೂ ಸರ್ಕಾರಕ್ಕೆ ಧನ್ಯವಾದ ಹೇಳ್ತೇನೆ. 5Rcb ಪಂದ್ಯ ,1ಪ್ಲೇ ಆಪ್ ಹಾಗೂ ಫೈನಲ್ ಪಂದ್ಯಕ್ಕೆ ಅವಕಾಶ ಕೊಟ್ಟಿದ್ದಾರೆ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ತಿಳಿಸಿದ್ದಾರೆ.
ಜಸ್ಟಿಸ್ ಕುನ್ಹಾ ಸಮಿತಿಯ ಶಿಫಾರಸುಗಳಂತೆ, ಪ್ರೇಕ್ಷಕರ ಸುರಕ್ಷತೆಗಾಗಿ ಸ್ಟೇಡಿಯಂ ಗೇಟ್ ಗಾತ್ರ ಹೆಚ್ಚಳ ಮತ್ತು ಅಗ್ನಿಶಾಮಕ ದಳದ ನಿಯೋಜನೆಯಂತಹ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಹೀಗೆ ಅನೇಕ ಷರತ್ತುಗಳನ್ನ ವಿಧಿಸಿ ಪಂದ್ಯಕ್ಕೆ ಅನುಮತಿ ನೀಡಲಾಗಿದೆ.
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 28ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ಇದೆ.
ಆರ್ಸಿಬಿ ಅಭಿಮಾನಿಗಳಿಗೆ ಡಬಲ್ ಗುಡ್ ನ್ಯೂಸ್, ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಕ್ಕೆ ಗ್ರೀನ್ ಸಿಗ್ನಲ್!
