ಬೆಂಗಳೂರು: ಇರಾನ್ ಹಾಗೂ ಇಸ್ರೇಲ್-ಅಮೆರಿಕಾ ನಡುವೆ ಉದ್ವಿಗ್ನತೆ ಹೆಚ್ಚಿದ್ದು, ಇದರ ಎಫೆಕ್ಟ್ ಭಾರತಕ್ಕೂ ತಟ್ಟಿದೆ. ದೇಶದಲ್ಲಿ ಸಿಲಿಂಡರ್ ಅಭಾವ ಸೃಷ್ಟಿಯಾಗಿದ್ದು, ಹೋಟೆಲ್ಗಳು ಬಾಗಿಲು ಮುಚ್ಚುತ್ತಿವೆ. ಮತ್ತೊಂದೆಡೆ ಆಟೋ ಚಾಲಕರು ಪರದಾಡ್ತಿದ್ದು, ಕೈಗಾರಿಕೆಗಳು ಕೂಡ ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆ ಸಿಲಿಂಡರ್ ಪೂರೈಕೆಯಲ್ಲೂ ರಾಜ್ಯಕ್ಕೆ ಕೇಂದ್ರ ಅನ್ಯಾಯ ಮಾಡ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕರ್ನಾಟಕಕ್ಕೆ ಎಷ್ಟು ಸಿಲಿಂಡರ್ ಪೂರೈಕೆ ಆಗ್ತಿದೆ.
ಸಿಲಿಂಡರ್ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣದಂತೆ ನಡೆದುಕೊಳ್ತಿದ್ದು, ಕಮರ್ಷಿಯಲ್ ಗ್ಯಾಸ್ ಹಂಚಿಕೆಯಲ್ಲಿ ರಾಜ್ಯಕ್ಕೆ ಭಾರೀ ಅನ್ಯಾಯವಾಗಿದೆ ಎನ್ನುವ ಆರೋಪವನ್ನ ಬೆಂಗಳೂರು ಹೋಟೆಲ್ ಸಂಘದ ಜಂಟಿ ಕಾರ್ಯದರ್ಶಿ ಮಾಡ್ತಿದ್ದಾರೆ.
ಪಕ್ಕದ ರಾಜ್ಯ ತಮಿಳುನಾಡಿಗೆ 72 ಸಾವಿರ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಹಂಚಿಕೆಯಾಗಿದ್ರೆ ಇತ್ತ ಕರ್ನಾಟಕಕ್ಕೆ ಕೇವಲ 44 ಸಾವಿರ ಗ್ಯಾಸ್ ಹಂಚಿಕೆ ಆಗಿದೆ ಎಂದು ವರದಿ ಆಗಿದೆ. ಕರ್ನಾಟಕದಲ್ಲಿ ಸಿಲಿಂಡರ್ ಅಭಾವದಿಂದ ನಾನಾ ಸಮಸ್ಯೆ ಉಂಟಾಗಿದೆ. ರಾಜ್ಯ ನಿರೀಕ್ಷೆ ಮಾಡಿದ್ದು ಕನಿಷ್ಠ 1.50 ಲಕ್ಷ ಗ್ಯಾಸ್ ಸಿಲಿಂಡರ್. ಆದ್ರೆ ರಾಜ್ಯಕ್ಕೆ ಸಿಕ್ಕಿದ್ದು 44 ಸಾವಿರ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಎಂದು ಕೆಲವರು ಅಸಮಾಧಾನ ಹೊರಹಾಕ್ತಿದ್ದಾರೆ.
ಇದರಲ್ಲಿ ಪ್ರತಿದಿನ ಹೋಟೆಲ್ ಉದ್ಯಮಕ್ಕೆ 1000 ಸಾವಿರ ಆನ್ವಯದಂತೆ ಗ್ಯಾಸ್ ಸಿಲಿಂಡರ್ ಹಂಚಿಕೆ ಮಾಡಲಾಗ್ತಿದೆ. ಈ ರೀತಿ ತಾರತಮ್ಯ ಮಾಡೋದು ಎಷ್ಟು ಸರಿ? ಹೋಟೆಲ್ ಉದ್ಯಮಕ್ಕೆ ಯಾಕೆ ಇಷ್ಟು ತಾತ್ಸಾರ. ಎಲ್ಲರಿಗೂ ಸಭೆ, ಸಮಾರಂಭ ಮಾಡಲು ಹೋಟೆಲ್ ಬೇಕು ಆದ್ರೆ, ಹೋಟೆಲ್ ಮಾಲೀಕರಿಗೆ ಅನ್ಯಾಯ ಆದ್ರೆ ಯಾರು ಕೂಡ ಮಾತನಾಡಲ್ಲ ಎಂದು ಬೆಂಗಳೂರು ಹೋಟೆಲ್ ಸಂಘದ ಜಂಟಿ ಕಾರ್ಯದರ್ಶಿ ಕೃಷ್ಣರಾಜು ಕಿಡಿಕಾರಿದ್ದಾರೆ.
ಈಗ ಹಂಚಿಕೆ ಮಾಡಿರುವ ಗ್ಯಾಸ್ ಸಿಲಿಂಡರ್ ಸಾಕಾಗಲ್ಲ. ಪ್ರತಿ ಹೋಟೆಲ್ಗೆ 2 ಕೆಜಿ ಸಿಲಿಂಡರ್ ಹಂಚಿಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿ 40 ಸಾವಿರಕ್ಕೂ ಹೆಚ್ಚು ಹೋಟೆಲ್ಗಳು ಇವೆ. ಇದ್ರಲ್ಲಿ ಕ್ಯಾಟರಿಂಗ್ ಉದ್ಯಮ ಸೇರಿ 40 ಸಾವಿರ ಹೋಟೆಲ್ಗಳು ಇವೆ. ಈಗ ಹಂಚಿಕೆ ಮಾಡಿರೋ ಗ್ಯಾಸ್ ಸಾಕಾಗೋದಿಲ್ಲ ಎಂದು ಬೆಂಗಳೂರು ಹೋಟೆಲ್ ಸಂಘದ ಜಂಟಿ ಕಾರ್ಯದರ್ಶಿ ಕೃಷ್ಣರಾಜು ಹೇಳಿದ್ದಾರೆ.
ಸಿಲಿಂಡರ್ ಪೂರೈಕೆಯಲ್ಲೂ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆರೋಪ; ಕರ್ನಾಟಕಕ್ಕೆ ಹಂಚಿಕೆಯಾಗಿದ್ದೆಷ್ಟು?
