ಬೆಂಗಳೂರು: ರಾಜ್ಯದ ಉಪಚುನಾವಣೆಗೆ ಯುಗಾದಿ ದಿನದಂದೇ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಎಸ್ಟಿ ನಾಯಕ ಶ್ರೀನಿವಾಸ್ ದಾಸಕರಿಯಪ್ಪಗೆ ಟಿಕೆಟ್ ಘೋಷಿಸಿದ್ದು, ಬಾಗಲಕೋಟೆ ಕ್ಷೇತ್ರದಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠರನ್ನು ಕಣಕ್ಕಿಳಿಸಲಾಗಿದೆ
ಈ ಹಿಂದೆ ಮೂರು ಬಾರಿ ಚರಂತಿಮಠ ಶಾಸಕರಾಗಿದ್ದು, ಲಿಂಗಾಯತದ ಪ್ರಭಾವಿ ನಾಯಕರಾಗಿದ್ದಾರೆ. ಇನ್ನೊಂದೆಡೆ ದಾವಣಗೆರೆಯಲ್ಲಿ ಜಾತಿ ಲೆಕ್ಕಾಚಾರದಲ್ಲಿ ತಂತ್ರ ಹೆಣೆದಿರುವ ಬಿಜೆಪಿ, ನಿರೀಕ್ಷೆಯಂತೆ ಟಿಕೆಟ್ ಸಿಕ್ಕಿದ್ದಕ್ಕೆ ಇಬ್ಬರೂ ಅಭ್ಯರ್ಥಿಗಳು, ಹಾಗೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಬಿಜೆಪಿಗೆ ಪ್ಲಸ್ ಏನು?
ಶ್ರೀನಿವಾಸ್ ದಾಸಕರಿಯಪ್ಪ ಎಸ್ಟಿ ಸಮುದಾಯದವರಾಗಿರುವ ಕಾರಣ ಹಿಂದುಳಿದ ಹಾಗೂ ದಲಿತ ಮತಗಳ ಕ್ರೋಢೀಕರಣವಾಗುವ ಸಾಧ್ಯತೆಯಿದೆ. ಬಿಜೆಪಿಗೆ ಲಿಂಗಾಯತ ಮತಗಳ ಬಲ ನಿರೀಕ್ಷೆಯಿದ್ದು ಜಿಲ್ಲೆಯ ಎರಡು ಬಣಗಳ ನಡುವೆ ಉತ್ತಮ ಒಡನಾಟವಿದೆ. ಶಾಮನೂರು ಕುಟುಂಬ-ಮುಸ್ಲಿಮರ ನಡುವಿನ ಫೈಟ್ ವರದಾನವಾಗುವ ಸಾಧ್ಯತೆಯಿದೆ. ಕಾಂಗ್ರೆಸ್ ಟಿಕೆಟ್ ಜಟಾಪಟಿಯಿಂದ ಗೆಲುವು ಸಿಗಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ.
ಬಾಗಲಕೋಟೆಯಲ್ಲಿ ಬಿಜೆಪಿಗೆ ಪ್ಲಸ್ ಏನು?
ಅನುದಾನ ಇಲ್ಲದ ಕಾರಣ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಹೆಚ್.ವೈ ಮೇಟಿ ಕುಟುಂಬಸ್ಥರಲ್ಲೇ ಟಿಕೆಟ್ ವಿಚಾರದಲ್ಲಿ ಬಿರುಕಾಗಿದೆ. ಹೆಚ್.ವೈ ಮೇಟಿಯಂತೆ ಅವರ ಮಕ್ಕಳಿಗೆ ಜನಪ್ರಿಯತೆ ಇಲ್ಲ.
ಕಾಂಗ್ರೆಸ್ ಟಿಕೆಟ್ ಕಗ್ಗಂಟು ಕಾರ್ಯಕರ್ತರಿಂದ ಬೇಸರಗೊಂಡಿದ್ದಾರೆ. ಅಸಮಾಧಾನಿತ ಬಿಜೆಪಿ ಮುಖಂಡರ ಘರ್ ವಾಪ್ಸಿಯಾಗುವುದರ ಜೊತೆ ಹಿರಿಯ ರಾಜಕಾರಣಿ ಗೋವಿಂದ ಕಾರಜೋಳ ಬಲ ಇರುವ ಕಾರಣ ತಮಗೆ ಗೆಲುವು ಸಿಗಬಹುದು ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.
ಅಭ್ಯರ್ಥಿ ಯಾರು?
ಬೈ ಎಲೆಕ್ಷನ್ ಅಖಾಡದಲ್ಲಿ ಕಾಂಗ್ರೆಸ್ಗೆ ಅಭ್ಯರ್ಥಿ ಘೋಷಣೆ ಕಗ್ಗಂಟಾಗಿ ಪರಿಣಮಿಸಿದೆ. ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬ ಮತ್ತು ಮುಸ್ಲಿಂ ನಾಯಕರ ಮಧ್ಯೆ ಟಿಕೆಟ್ಗಾಗಿ ಪೈಪೋಟಿ ನಡೆಯುತ್ತಿದ್ದರೆ ಇತ್ತ ಬಾಗಲಕೋಟೆಯಲ್ಲಿ ಹೆಚ್.ವೈ ಮೇಟಿ ಕುಟುಂಬಕ್ಕೆ ಟಿಕೆಟ್ ಫೈನಲ್ ಆದರೂ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ಗೊಂದಲ ಮನೆಮಾಡಿದೆ. ಮೇಟಿ ಕುಟುಂಬದಲ್ಲೇ ಟಿಕೆಟ್ಗಾಗಿ ಫೈಟ್ ಶುರುವಾಗಿದೆ.
ಟಿಕೆಟ್ ಗೊಂದಲ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಎರಡು ತಿಂಗಳ ಹಿಂದೆಯೇ ಸರ್ವೆ ನಡೆಸಿ ಮಾಹಿತಿ ಪಡೆದಿದ್ದೇನೆ. ಕುಟುಂಬಕ್ಕಿಂತ ಪಕ್ಷದ ತೀರ್ಮಾನ ಮುಖ್ಯ ಅಂದಿದ್ದಾರೆ. ಎಐಸಿಸಿ ಜನರಲ್ ಸೆಕ್ರೆಟರಿ ಬರುತ್ತಿದ್ದು ನಾನು ಮತ್ತು ಸಿಎಂ ಸಹ ಚರ್ಚೆ ಮಾಡಿದ್ದೇವೆ. ಹೈಕಮಾಂಡ್ ಹೇಳಿದವರಿಗೆ ಬಿ-ಫಾರಂ ನೀಡುತ್ತೇವೆ ಎಂದಿದ್ದಾರೆ.
