Ad image

ಕುಡಿದು ಬಿಎಂಟಿಸಿ ಬಸ್‌ ಚಾಲನೆ – ಪ್ರಶ್ನಿಸಿದ ಮಹಿಳೆ ಜೊತೆ ಚಾಲಕನ ರಂಪಾಟ

Team SanjeMugilu
1 Min Read

ಬೆಂಗಳೂರು: ಬಿಎಂಟಿಸಿ  ಚಾಲಕನೊಬ್ಬ ಮದ್ಯಪಾನ ಮಾಡಿ ಬಸ್ ಚಾಲನೆ  ಮಾಡಿದ ಘಟನೆ ನಗರದಲ್ಲಿ  ನಡೆದಿದೆ. ಈ ವೇಳೆ ಪ್ರಶ್ನಿಸಿದ ಮಹಿಳೆಯ ಜೊತೆ ಚಾಲಕ ವಾಗ್ವಾದ ನಡೆಸಿದ್ದಾನೆ.

ಮಾ. 18ರ ರಾತ್ರಿ 7:30ರ ಸುಮಾರಿಗೆ ಟಿನ್ ಫ್ಯಾಕ್ಟರಿ ಹತ್ತಿರ ಈ ಘಟನೆ ನಡೆದಿದೆ. ಚಾಲಕ ಅಡ್ಡಾದಿಡ್ಡಿಯಾಗಿ ರಸ್ತೆಯಲ್ಲಿ ಬಸ್ ಚಲಾಯಿಸುತ್ತಿದ್ದ. ಚಾಲಕನ ವರ್ತನೆ ಕಂಡು ಬಸ್ ನಿಲ್ಲುಸುವಂತೆ ಮಹಿಳೆ ಕೇಳಿಕೊಂಡಿದ್ದರು. ಆದರೆ ಮಹಿಳೆ ಜೊತೆ ಚಾಲಕ ವಾಗ್ವಾದ ಮಾಡಿದ್ದಾನೆ.

KA – 57 – F – 3660 ರಿಜಿಸ್ಟ್ರೇಷನ್ ಸಂಖ್ಯೆಯ ಬಿಎಂಟಿಸಿ ಬಸ್‌ನಲ್ಲಿ ವಾಗ್ವಾದ ನಡೆದಿದೆ. ಬಸ್ ಚಾಲಕನ ವರ್ತನೆ ಕಂಡು ವಿಡಿಯೋ ಸೆರೆ ಹಿಡಿದು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Share This Article