ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕಸದ ರಾಶಿ ನಡುವೆ ಮಹಿಳೆಯ ಶವ ಪತ್ತೆಯಾಗಿದ್ದು, ಕೆಂಗೇರಿಯ ಮಹದೇಶ್ವರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ರಾಡ್ನಿಂದ ತಲೆಗೆ ಹೊಡೆದು ಹತ್ಯೆಗೈದಿದ್ದಾರೆ ಎನ್ನಲಾಗ್ತಿದೆ. ಮೃತದೇಹ ಬಿದ್ದ ಜಾಗದಲ್ಲಿ ರಕ್ತದ ಕಲೆ ಇದ್ದು, ತೀವ್ರ ರಕ್ತಸಾವ್ರದಿಂದ ಒದ್ದಾಡಿ ಮಹಿಳೆ ಪ್ರಾಣ ಬಿಟ್ಟಿದ್ದಾಳೆ ಎಂದು ವರದಿ ಆಗಿದೆ.
ಮಾರಕಾಸ್ತ್ರಗಳಿಂದ ಹೊಡೆದು ಮಹಿಳೆಯನ್ನು ಕೊಲೆಗೈದ ಹಂತಕರು ಆಕೆಯನ್ನ ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಕಸದ ರಾಶಿಗೆ ಬಿಸಾಡಿ ಹೋಗಿದ್ದಾರೆ ಎನ್ನಲಾಗ್ತಿದೆ. ಕೆಂಗೇರಿಯ ಮಹದೇಶ್ವರ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, 45 ವರ್ಷದ ಕೆಂಪಮ್ಮ ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಕಸದ ರಾಶಿ ನಡುವೆ ಶವ ಪತ್ತೆ
ಕೆಂಪಮ್ಮ ಕೊಲೆಯಾದ ಜಾಗದಲ್ಲಿ ಮಹಿಳೆಯ ಆಧಾರ್ ಕಾರ್ಡ್ ಸಿಕ್ಕಿದೆ ಎನ್ನಲಾಗ್ತಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಿತ್ಯ ಅದೇ ರಸ್ತೆಯಲ್ಲಿ ಓಡಾಡ್ತಿದ್ದ ಜನರು ಮಹಿಳೆ ಶವ ಕಂಡು ಶಾಕ್ ಆಗಿದ್ದಾರೆ.
ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ
112ಕ್ಕೆ ಕರೆ ಮಾಡಿ ಮಾಹಿತಿದ ಪೊಲೀಸರು ಮಹಿಳೆ ಶವ ಬಿದ್ದಿರುವ ಬಗ್ಗೆ ತಿಳಿಸಿದ್ದು, ತಕ್ಷಣ ಕೆಂಗೇರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಘಟನಾ ಸ್ಥಳದಲ್ಲಿ FSL ತಂಡ ಕೂಡ ಪರಿಶೀಲನೆ ನಡೆಸಿದೆ.
ಕಿರಣ್ ಕೊಲೆ ಕೇಸ್ನ ವಿಡಿಯೋ ಪತ್ತೆ
ಮತ್ತೊಂದೆಡೆ ರಾಮಮೂರ್ತಿನಗರ ಕಿರಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯಾನಕ ವಿಡಿಯೋ ಒಂದು ಹೊರಬಿದ್ದಿದೆ. ಹಂತಕರನ್ನು ಕಿರಣ್ನನ್ನು ಕೊಚ್ಚಿ ಕೊಲೆಗೈದಿರುವ ಘಟನೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಜನರನ್ನೇ ಬೆಚ್ಚಿಬೀಳಿಸುವಂತಿದೆ. ಉಸಿರು ನಿಂತ ಮೇಲೂ ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ.
ಬೆಂಗಳೂರಲ್ಲಿ ಮಹಿಳೆಯ ಬರ್ಬರ ಹ*; ಕಸದ ರಾಶಿಯಲ್ಲಿ ಶವ ಕಂಡು ಸ್ಥಳೀಯರು ಶಾಕ್
