Ad image

ಮಾತುಕತೆ ಚೆನ್ನಾಗಿ ನಡೆಯುತ್ತಿದೆ – ಮತ್ತೆ 10 ದಿನ ಕದನ ವಿರಾಮ ಘೋಷಿಸಿದ ಟ್ರಂಪ್‌

Team SanjeMugilu
1 Min Read

ವಾಷಿಂಗ್ಟನ್‌: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧ ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಸಕಲ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಇರಾನ್‌ ಜೊತೆಗೆ ಮಾತುಕತೆ ಮುಂದುವರಿಸಲು ಮತ್ತೆ 10 ದಿನಗಳ ಕದನ ವಿರಾಮ  ಘೋಷಿಸಿದ್ದಾರೆ.

ಹೌದು. ಇರಾನ್‌ನ  ಇಂಧನ ಸೌಲಭ್ಯ ಕೇಂದ್ರಗಳ ಮೇಲಿನ ದಾಳಿಯನ್ನ ಮತ್ತೆ 10 ದಿನಗಳವರೆಗೆ ಸ್ಥಗಿತಗೊಳಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇರಾನಿನ ಸರ್ಕಾರದ ಕೋರಿಕೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೇ ಇದು ಎರಡೂ ದೇಶಗಳ ನಡುವೆ ಮಾತುಕತೆಯನ್ನ ಮುಂದುವರಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಟ್ರಂಪ್‌ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ʻಇರಾನಿನ ಸರ್ಕಾರದ ಕೋರಿಕೆಯ ಮೇರೆಗೆ, ನಾನು ಇಂಧನ ಸ್ಥಾಪನೆಗಳ ನಾಶವನ್ನ 10 ದಿನಗಳವರೆಗೆ ವಿರಾಮಗೊಳಿಸುತ್ತಿದ್ದೇನೆ. ಇದು ಏಪ್ರಿಲ್ 6 ರ ರಾತ್ರಿ 8 ಗಂಟೆಯವರೆಗೆ ಮುಂದುವರಿಯುತ್ತದೆ ಎಂದು ಬರೆದಿದ್ದಾರೆ.

ಅಲ್ಲದೇ ಇರಾನ್‌ ಮಾತುಕತೆಗೆ ಒಪ್ಪಿಲ್ಲ ಎನ್ನುವ ಮಾಧ್ಯಮ ವರದಿಗಳನ್ನ ತಳ್ಳಿಹಾಕಿರುವ ಟ್ರಂಪ್‌, ಅಮೆರಿಕ ಮತ್ತು ಇರಾನ್‌ ನಡುವೆ ಮಾತುಕತೆ ನಡೆಯುತ್ತಿದ್ದು, ಸಕಾರಾತ್ಮಕ ದಿಕ್ಕಿನಲ್ಲಿ, ತುಂಬಾ ಚೆನ್ನಾಗಿ ನಡೆಯುತ್ತಿವೆ ಎಂದು ಪ್ರತಿಕ್ರಿಯಿಸಿದ್ದಾರೆ.

Share This Article