Ad image

ದಿವಾಳಿ ಪಾಕ್‌ನಿಂದ ಮತ್ತೆ ಶಾಕ್‌ – ಎಮ್ಮೆ ಸಾಕಿದವರಿಗೆ ಸೆಗಣಿ ತೆರಿಗೆ

Team SanjeMugilu
1 Min Read

ಇಸ್ಲಾಮಾಬಾದ್: ಪಾಕಿಸ್ತಾನ ಇದೀಗ ಹೊಸ ತೆರಿಗೆಯೊಂದನ್ನು ಜಾರಿಗೆ ತಂದಿದೆ. ಈ ಮೂಲಕ ಸ್ವಚ್ಛತೆಯ ದೃಷ್ಟಿಯಿಂದ ಎಮ್ಮೆ ಸಾಕಿದವರಿಗೆ ಇನ್ಮುಂದೆ ಸಗಣಿ ತೆರಿಗೆ  ವಿಧಿಸಲಿದೆ.

ಇಷ್ಟು ಕಾಲ ಪಾಕಿಸ್ತಾನದ  ಪಂಜಾಬ್ ಪ್ರಾಂತ್ಯದ ಸರ್ಕಾರ ಹಣಕ್ಕಾಗಿ ವಿದೇಶಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಬಾಗಿಲು ಬಡಿಯುತ್ತಿತ್ತು. ಆದರೆ ಇದೀಗ ತನ್ನ ಜನರ ಜೇಬಿಗೆ ಕತ್ತರಿ ಹಾಕಿ, ಬೊಕ್ಕಸ ತುಂಬಿಸಿಕೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಎಮ್ಮೆಗಳನ್ನು ಸಾಕಿದವರಿಂದ `ಸೆಗಣಿ ವಸೂಲಿ’ ಮಾಡುವುದಾಗಿ ಘೋಷಿಸಿದೆ.

ಅಧಿಕಾರಿಗಳು `ಸ್ವಚ್ಛ ಪಂಜಾಬ್’ ಯೋಜನೆಯ ಅಡಿಯಲ್ಲಿ ತ್ಯಾಜ್ಯ ನಿರ್ವಹಣೆ, ಸ್ವಚ್ಛತೆ ಮತ್ತು ಜೈವಿಕ ಅನಿಲ ಉತ್ಪಾದನೆಗೆ ಹಣ ಒದಗಿಸುವ ಸಲುವಾಗಿ ಪ್ರತಿ ಎಮ್ಮೆಗೆ ದಿನಕ್ಕೆ 30 ರೂ. ವಸೂಲಿ ಮಾಡುವ ಚಿಂತನೆಯಲ್ಲಿದ್ದಾರೆ. ಇದರ ಭಾಗವಾಗಿ ಈಗಾಗಲೇ 168 ಜಾನುವಾರು ಸಾಕಾಣಿಕೆ ಪ್ರದೇಶಗಳನ್ನು ಸರ್ಕಾರ ಗುರುತಿಸಿದೆ ಎನ್ನಲಾಗಿದೆ.

ಉತ್ತೇಜಿಸುವ ಉದ್ದೇಶ ಇದೆ ಎಂದು ಸರ್ಕಾರ ತಿಳಿಸಿದ್ದರೂ ಕೂಡ, ಈ ಕ್ರಮಕ್ಕೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. `ಸರ್ಕಾರಕ್ಕೆ ಆದಾಯ ತರುತ್ತಿದ್ದ ಮೂಲಗಳು ಬರಿದಾಗಿರುವ ಕಾರಣ ಆಡಳಿತ ನಡೆಸಲು ತಗುಲುವ ವೆಚ್ಚವನ್ನು ಈ ರೀತಿ ವಸೂಲಿ ಮಾಡಲಾಗುತ್ತಿದೆ. ದೇಶವು ಸೆಗಣಿಯಿಂದಲೂ ಹಣ ಗಳಿಸುವ ಬಗ್ಗೆ ಯೋಚಿಸುವ ಸ್ಥಿತಿಗೆ ಬಂದು ತಲುಪಿದೆ’ ಎಂಬ ಆಕ್ರೋಶವೂ ಕೇಳಿಬರುತ್ತಿದೆ. ಅತ್ತ ಬೆಳೆ ನಷ್ಟ, ದುಬಾರಿ ಮೇವಿನಂತಹ ಸಮಸ್ಯೆಗಳಿಂದ ಬಳಲುತ್ತಿರುವ ರೈತರಿಗೆ ಈ ಹೊಸ ತೆರಿಗೆಯಿಂದ ಹೊರೆಯಾಗಲಿದೆ.

Share This Article