Ad image

ದೇಶದಲ್ಲಿ LPG ಕೊರತೆ ಇಲ್ಲ – 5 ಕೆಜಿ ಗ್ಯಾಸ್‌ ಸಿಲಿಂಡರ್‌ಗಳ ಪೂರೈಕೆ ಹೆಚ್ಚಿಸಿದ ಕೇಂದ್ರ ಸರ್ಕಾರ

Team SanjeMugilu
1 Min Read

ನವದೆಹಲಿ: ಅಮೆರಿಕ ಮತ್ತು ಇರಾನ್‌ ನಡುವಿನ ಯುದ್ಧ 38ನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಎಲ್‌ಪಿಜಿ ಕೊರತೆ ಆತಂಕದಲ್ಲಿದ್ದ ಜನಕ್ಕೆ ಕೇಂದ್ರ ಸರ್ಕಾರ ಮತ್ತೆ ಅಭಯ ನೀಡಿದೆ. ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ ಎಂದಿರುವ ಕೇಂದ್ರ ಸರ್ಕಾರ  ಮತ್ತೊಂದು ಕಡೆ ಕೊರತೆ ನೀಗಿಸಲು 5 ಕೆಜಿ ಗ್ಯಾಸ್‌ ಸಿಲಿಂಡರ್‌ಗಳ ಪೂರೈಕೆಯನ್ನ ಹೆಚ್ಚಿಸಿದೆ.

ಹೌದು. ಭಾರತದಲ್ಲಿ ಎಲ್‌ಪಿಜಿ ಕೊರತೆಯಿಲ್ಲ , ಸಾಕಷ್ಟು ಲಭ್ಯವಿದೆ. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. 5 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ಗಳು ಎಲ್ಲ ಏಜೆನ್ಸಿಗಳಲ್ಲೂ ಲಭ್ಯವಿದೆ. ಸೂಕ್ತ ಗುರುತಿನ ಚೀಟಿ  ತೋರಿಸಿ ಗ್ರಾಹಕರು ಸಿಲಿಂಡರ್‌ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇ

6.6 ಲಕ್ಷ ಸಿಲಿಂಡರ್‌ ಮಾರಾಟ
ಎಲ್‌ಪಿಜಿ ಬಿಕ್ಕಟ್ಟು ಪೂರೈಸಲು 5 ಕೆಜಿ ಸಿಲಿಂಡರ್‌  ಪೂರೈಕೆ ಹೆಚ್ಚಿಸಿದ ಬೆನ್ನಲ್ಲೇ ಇವುಗಳ ಖರೀದಿಗೂ ಜನ ಆಸಕ್ತಿ ತೋರಿದ್ದಾರೆ. ಕಳೆದ ಮಾರ್ಚ್‌ 23 ರಿಂದ ದೇಶದಲ್ಲಿ ಸುಮಾರು 6.6 ಲಕ್ಷ ಸಿಲಿಂಡರ್‌ಗಳು ಮಾರಾಟವಾಗಿದೆ. ಸದ್ಯ ಈ ಸಣ್ಣ ಸಿಲಿಂಡರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಜನ ಸೂಕ್ತ ದಾಖಲಾತಿ ನೀಡಿ ಗ್ಯಾಸ್ ಏಜೆನ್ಸಿಗಳಿಂದ ಖರೀದಿಸಬಹುದು ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿದೆ.

ಐಡಿ ಪ್ರೂಫ್ ಅಗತ್ಯ
5 ಕೆಜಿ ಸಿಲಿಂಡರ್‌ ಖರೀದಿಸಲು ಯಾವುದೇ ವಾಸಸ್ಥಳದ ಸಾಕ್ಷ್ಯ ತೋರಿಸುವ ಅಗತ್ಯವಿಲ್ಲ. ಆದ್ರೆ ಯಾವುದಾದರೂ ಒಂದು ಗುರುತಿನ ಚೀಟಿ ಮಾತ್ರ ತೋರಿಸಿ, ಸಿಲಿಂಡರ್‌ ಖರೀದಿ ಮಾಡಬಹುದು ಎಂದು ಸರ್ಕಾರ ಎಚ್ಚರಿಸಿದೆ.

ಎಲ್ಲಾ ರೀತಿಯಲ್ಲೂ ಅಗತ್ಯ ಕ್ರಮ
ಮನೆಗಳಿಗೆ, ಸಾರಿಗೆ ವ್ಯವಸ್ಥೆ ಹಾಗೂ ಇನ್ನಿತರ ಅಗತ್ಯ ಕಾರ್ಯಗಳಿಗೆ ಪೆಟ್ರೋಲ್‌, ಡೀಸೆಲ್‌, ಅನಿಲ ಪೂರೈಕೆಯನ್ನು ಕಾಯ್ದುಕೊಳ್ಳಲಾಗುತ್ತಿದೆ. ರಸಗೊಬ್ಬರ ಘಟಕಗಳಿಗೆ ಪೂರೈಕೆ ಏಪ್ರಿಲ್ 6 ರಿಂದ ಸರಾಸರಿ ಬಳಕೆಯ ಸರಿಸುಮಾರು 90% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಅದಕ್ಕಾಗಿ ದೇಶಾದ್ಯಂತ ಎಲ್ಲಾ ಸಂಸ್ಕರಣಾಗಾರಗಳು ಸಾಕಷ್ಟು ಕಚ್ಚಾತೈಲ ನಿಕ್ಷೇಪಗಳೊಂದಿಗೆ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ದೇಶಾದ್ಯಂತ ಪೆಟ್ರೋಲ್ ಪಂಪ್‌ಗಳು ಸಂಪೂರ್ಣವಾಗಿ ದಾಸ್ತಾನು ಮಾಡಲ್ಪಟ್ಟಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

Share This Article