Ad image

ಸಿಎಂ, ಮತ್ತವರ ಕುಟುಂಬಕ್ಕೆ ಶಿಕ್ಷೆ ಆಗುವುದು ನಿಶ್ಚಿತ: ಸ್ನೇಹಮಹಿ ಕೃಷ್ಣ

Team SanjeMugilu
1 Min Read

ಮೈಸೂರು: ಮುಡಾ ಪ್ರಕರಣದಲ್ಲಿ ಸಿಎಂ ಮತ್ತು ಸಿಎಂ ಕುಟುಂಬಕ್ಕೆ  ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ಲೋಕಾಯುಕ್ತ ಸಲ್ಲಿಸಿದ್ದ ಬಿ ರೀಪೋರ್ಟ್ ಪ್ರಶ್ನಿಸಿ ಇಡಿ ಈಗ ಹೈಕೋರ್ಟ್ ಗೆ ಅರ್ಜಿ ಹಾಕಿದೆ. ಅರ್ಜಿಯಲ್ಲಿ ಸಿಎಂ ಹಾಗೂ ಸಿಎಂ ಕುಟುಂಬದ ಸದಸ್ಯರ ಮೇಲಿನ ಆರೋಪಕ್ಕೆ ಸಾಕ್ಷಿ ಇದೆ ಎಂದು ಕೂಡ ಹೇಳಿದೆ.

ಈ ಬಗ್ಗೆ ಪ್ರಕರಣದ ಮೂಲ ದೂರುದಾರ ಸ್ನೇಹಮಹಿ ಕೃಷ್ಣ  ಪ್ರತಿಕ್ರಿಯಿಸಿ, ಮುಡಾ ಪ್ರಕರಣದಲ್ಲಿ ಸಿಎಂ ಕುಟುಂಬಕ್ಕೆ ತಾತ್ಕಾಲಿಕ ರಿಲೀಫ್ ಅಷ್ಟೇ ಸಿಕ್ಕಿರೋದು. ಈ ಪ್ರಕರಣದಲ್ಲಿ ಅವರ ಕುಟುಂಬಕ್ಕೆ ಜೈಲು ಶಿಕ್ಷೆ ಆಗುವುದು ಖಚಿತ ಎಂದು ಪ್ರತಿಪಾದಿಸಿದ್ದಾರೆ.

ಜಾರಿ ನಿರ್ದೇಶನಾಲಯ ಹೇಳಿರುವಂತೆ ಆರೋಪಿಗಳ ಮೇಲಿನ ಆರೋಪಕ್ಕೆ ನನ್ನ ಬಳಿಯೂ ಬಹಳಷ್ಟು ಸಾಕ್ಷಿ ಇವೆ. ಈ ಪ್ರಕರಣದಲ್ಲಿ ಬಿ ರಿಪೋರ್ಟ್‌ ಹಾಕಿದ ಲೋಕಾಯುಕ್ತ ಅಧಿಕಾರಿಗಳಿಗೂ ಶಿಕ್ಷೆ ಕೊಡಿಸುತ್ತೇನೆ ಎಂದು ಹೇಳಿದ್ದಾರೆ.

ED ಯಿಂದ ಪ್ರತ್ಯೇಕ ಅರ್ಜಿ
ಸದ್ಯ ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ರಿಪೋರ್ಟ್‌ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಜಾರಿ ನಿರ್ದೇಶನಾಲಯ ಅರ್ಜಿ ಸಲ್ಲಿಸಿದೆ. ನಮ್ಮ ತನಿಖೆಯಲ್ಲಿ ಸಾಕಷ್ಟು ಮಾಹಿತಿ ಬಹಿರಂಗ ಆಗಿದೆ ಎಂದು ಕೆಳಹಂತದ ನ್ಯಾಯಾಲಯ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಇ.ಡಿ ಅಧಿಕಾರಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಮುಡಾದಲ್ಲಿ ಹಗರಣ ನಡೆದಿದೆ. ನಾಲ್ವರು ಆರೋಪಿಗಳ ಪಾತ್ರ ಇರೋದು ತನಿಖೆಯಲ್ಲಿ ಸಾಕ್ಷ್ಯಾಧಾರ ಇದೆ. ಹೀಗಾಗಿ, ಮರು ತನಿಖೆಗೆ ಮನವಿ ಮಾಡಲಾಗಿದೆ. ಸ್ನೇಹಮಯಿ ಕೃಷ್ಣ ಬಳಿಕ ಇ.ಡಿಯಿಂದಲೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಕೆಯಾಗಿದೆ.

Share This Article