Ad image

RSS ನೋಂದಣಿ ಮಾಡಿಕೊಂಡಿದ್ದರೆ ತನ್ನ ಲೆಟರ್ ಹೆಡ್‌ನಲ್ಲೇ ದೂರು ದಾಖಲಿಸಲಿ: ಸಚಿವ ಪ್ರಿಯಾಂಕ್ ಖರ್ಗೆ ಸವಾಲ್

Team SanjeMugilu
3 Min Read

ಎಐಸಿಸಿ ಅಧ‌್ಯಕ್ಷರ ವಿರುದ್ಧ ದೂರು ದಾಖಲಿಸಲಿಬಿಡಿ. ಆರ್ ಎಸ್ ಎಸ್ ಯಾಕೆ ದೂರು ದಾಖಲಿಸಿಲ್ಲ. ಅವರು ನೋಂದಣಿ ಮಾಡಿಸಿಕೊಂಡಿದ್ದರೆ ಅವರ ಲೆಟರ್ ಹೆಡ್ ನಲ್ಲಿ ದೂರು ದಾಖಲಿಸಲಿ. ತಮಗೆ ಯಾರ ಸಹಾಯ ಬೇಡ ಎಂದು ಸ್ವತಃ ಮೋಹನ್ ಭಾಗವತ್ ಹೇಳಿದ್ದಾರೆ, ಅವರೇ ದಾಖಲಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲ್ ಹಾಕಿದರು.

ಹಿರಿಯ ನಾಯಕ ಹಾಗೂ ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ” ವಿಷಸರ್ಪ ಕೊಲ್ಲಿ” ಹೇಳಿಕೆಯ ವಿರುದ್ದ ದೂರು ದಾಖಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು.

“ನಮ್ಮದು ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ತತ್ವ. ಬುದ್ದ ಬಸವ ಅವರ ತತ್ವಗಳನ್ನು ನಾವು ಹೊಂದಿದ್ದೇವೆ. ಕೆಲವೊಬ್ಬರು ಈ ತತ್ವಗಳ ಹಾಗೂ ಸಂವಿಧಾನ ವಿರೋಧಿ ಸಿದ್ದಾಂತ ಹೊಂದಿರುತ್ತಾರೆ ಇದು ಸರಿಯಲ್ಲ ಎನ್ನುವುದು ನಮ್ಮ ವೈಯಕ್ತಿಕ ಅಭಿಪ್ರಾಯ. ಅಷ್ಟಕ್ಕೂ ಹೇಳಿದ್ದೇನು? ವಿಷಸರ್ಪಗಳನ್ನು ಹೊಡೆಯಿರಿ ಎಂದಿದ್ದಾರೆ. ವಿಷ ಸರ್ಪ ಎದುರಾದರೆ ಯಾರಾದರೂ ಹಾಲು ಎರೆಯಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು.

ಆಸ್ಸಾಂ ಸಿಎಂ ಹೇಮಂತ ಬಿಸ್ವಾ ಶರ್ಮಾ ಅವರು ಖರ್ಗೆ ಹಾಗೂ ರಾಹುಲ್ ಗಾಂಧಿ ಬಗ್ಗೆ ಕೇವಲವಾಗಿ ಮಾತನಾಡಿರುವ ಕುರಿತು ಕೇಳಿದಾಗ, “ಸೋಲಿನ‌ಭೀತಿನಲ್ಲಿ ಅವರು ಹಾಗೆ ಮಾತನಾಡುತ್ತಿದ್ದಾರೆ ಅಷ್ಟೇ. ಬಿಸ್ವಾ ಶರ್ಮ ಅವರ ಡ್ಯಾಡಿ ಮೋದಿ ಅವರೇ ಸಂಸತ್ತಿನಲ್ಲಿ ಖರ್ಗೆ ಸಾಹೇಬರಿಗೆ ಉತ್ತರ ಕೊಟ್ಟಿಲ್ಲ ಇವರೇನು ಕೊಡುತ್ತಾರೆ. ಅವರು ಮೊದಲು ಕಾಂಗ್ರೆಸ್ ನಲ್ಲಿದ್ದವರು ಈಗ ಬಿಜೆಪಿಗೆ ಹೋಗ ಮೇಲೆ ಆರ್ ಎಸ್ ಎಸ್ ನಿಂದ ಪಾಠ ಕಲಿತಿದ್ದಾರೆ. ಅವರ ಹೆಂಡತಿ ಹೆಸರಲ್ಲಿ ಮೂರು ಪಾಸ್ ಪೋರ್ಟ್ ಇವೆ ಎನ್ನಲಾಗುತ್ತಿದೆ. ಅವರು ನಮಗೆ ದೇಶಭಕ್ತಿ ಪಾಠ ಹೇಳುತ್ತಾರ? ಆಸ್ಸಾಂ ಮೂಲಕ ಬಾಂಗ್ಲಾದವರು ಕರ್ನಾಟಕೆ ಬರುತ್ತಾರೆ ಎನ್ನುತ್ತಾರೆ ಹಾಗಾದರೆ‌ ಆಸ್ಸಾಂ ಸಿಎಂ, ಹೋಂ ಮಿನಿಸ್ಟರ್ ಕತ್ತೆ ಕಾಯುತ್ತಿದ್ದಾರ? ಎಂದು ಟೀಕಿಸಿದರು.

“ಬಿಜೆಪಿಗರು ಪಾರ್ಲಿಮೆಂಟ್ ನಲ್ಲಿ ಮೆಜಾರಿಟಿ ಹೊಂದಿದ್ದಾರೆ ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ನಮ್ಮ ದೇಶದವರಲ್ಲ ಎಂದು ಹೇಳಿಬಿಡಲಿ. ಯುಎಇ ದವರನ್ನು ತಬ್ಬಿಕೊಳ್ಳುತ್ತಾರೆ. ಅವರಿಂದ ಪೆಟ್ರೋಲ್ ಬೇಕು, ಯೂರಿಯಾ ಬೇಕು. ಅಷ್ಟೇಕೆ, ಕೇಸರಿ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಯುಎಇ ನಿಂದ ಬರುತ್ತದೆ. ಹಾಗಾದರೆ ಮುಸ್ಲಿಂ ರಾಷ್ಟ್ರಗಳ ಜೊತೆಗೆ ಎಲ್ಲ ವ್ಯಾಪಾರ ವ್ಯವಹಾರ ನಿಲ್ಲಿಸಲಿ” ಎಂದು ಟಾಂಗ್ ನೀಡಿದರು.

ಕೊರೋನ ಸಮಯದಲ್ಲಿ ಅಮಿತ್ ಶಾ ಮಗ ಐಪಿಎಲ್ ಆಡಿಸಿದ್ದು ಇದೇ ದುಬೈ ನಲ್ಲಿ. ಈ ತರ ಇಬ್ಬಗೆ ನೀತಿ ಯಾಕೆ? ಅವರ ಮಾತುಗಳನ್ನು ಅವರೇ ಸಮರ್ಥನೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಖರ್ಗೆ ಕುಟುಕಿದರು.

ಇತ್ತೀಚಿಗೆ ಕೇರಳದಲ್ಲಿ ಚುನಾವಣಾ ಪ್ರಚಾರ ಮಾಡಿದ ಮೋದಿ, ಕೇರಳ ಫೈಲ್, ಧುರಂಧರ ಸಿನೆಮಾ ನಿಜ ಅಂತ ಹೇಳಿದ್ದಾರೆ. ಆ ಚಿತ್ರಗಳ ಗಳಿಗೆ ಬಗ್ಗೆ ಹೇಳುವವರು ಆರ್ ಎಸ್ ಎಸ್ ಬಗ್ಗೆ ಶತಕ್ ಎನ್ನುವ ಸಿನೆಮಾ ಹೊರಬಂದು ಫ್ಲಾಪ್ ಆಗೊಯ್ತು. ಆರ್ ಎಸ್ ಎಸ್ ನವರಿಗೆ ಅವರ ಸಂಘಟನೆಯ ಸಿನೆಮಾ ಬಗ್ಗೆನೆ ನಂಬಿಕೆ ಇಲ್ಲ. ಅವರೆಲ್ಲ ನೋಡಿದ್ದರೆ ಒಳ್ಳೆ ಕಲೆಕ್ಷನ್ ಆಗಿರೋದು ಎಂದು ಪ್ರಿಯಾಂಕ್ ಕುಟುಕಿದರು.

ಪ್ರಿಯಾಂಕ್ ಖರ್ಗೆ ಹುಚ್ಚು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಿಡಿದಿದೆ ಎನ್ನುವ ಪ್ರತಾಪ್ ಸಿಂಹ ಮಾತಿಗೆ ತೀಕ್ಷ್ಣ ವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ಅವನು ನಡೆಯದ ನಾಣ್ಯ. ಅವನ ಬಗ್ಗೆ ಮೈಸೂರಲ್ಲೇ ಬೆಲೆ ಇಲ್ಲ ಇಲ್ಲಿ ಯಾಕೆ ಅವರ ಹೆಸರು ತರ್ತಿರಿ? ನಮ್ಮ ಬಗ್ಗೆ ಮಾತ‌ನಾಡುವ ಬದಲು ಸಂಸತ್ ನಲ್ಲಿ ಸ್ಮೋಕ್ ಬಾಂಬ್ ಇಟ್ಟವರು ಯಾರು ಅವರಿಗೆ ಒಅಸ್ ಕೊಟ್ಟವರು ಯಾರು? ಪ್ರತಾಪ್ ಸಿಂಹ್ ಮೊಬೈಲ್ ಸೀಜ್ ಮಾಡಿದ್ರಲ್ಲ ಏನಿತ್ತು ಅಲ್ಲಿ? ಆ ಬಗ್ಗೆ ಅವನು ಹೇಳಲಿ. ಈ ಸಲ ಎಂ ಎಲ್ ಎ ಗೆ ನಿಲ್ಲುತ್ತಾನಂತೆ ಅವನಿಗೆ ಟಿಕೆಟ್ ಕೊಡ್ತಾರ?” ಎಂದು ವ್ಯಂಗ್ಯವಾಡಿದರು.

ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರನ್ನು ಜೈಲಿಗೆ ಹಾಕಿಸುತ್ತೇವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, “ಅವರಿಗೆ ತಾಕತ್ ಇದ್ದರೆ ಸ್ಕ್ವಾಡ್ ತಂದು ನಮ್ಮನ್ನು ಅರೆಸ್ಟ್ ಮಾಡಿಸಲಿ ಎಂದು ಸವಾಲ್ ಹಾಕಿದರು. ನನ್ನದು ಹಾಗೂ ಖರ್ಗೆ ಒಂದೇ ಸಿದ್ದಾಂತ. ಅದರಲ್ಲೇನಿದೆ ತಪ್ಪು? ನಮ್ಮ ಬಸವ ಸಿದ್ದಾಂತ. ನಮ್ಮಲ್ಲಿ ಇದ್ದಾಗ ನಾರಾಯಣ ಸ್ವಾಮಿ ಅವರಿಗೂ ಇತ್ತು ಯಾವಾಗ ಬಿಜೆಪಿ ಹೋಗಿ ಆರ್ ಎಸ್ ಎಸ್ ಚಡ್ಡಿ ಹೊತ್ತುಕೊಂಡರೋ ಸಂಪೂರ್ಣ ಬದಲಾಗಿದ್ದಾರೆ” ಎಂದು ಛೇಡಿಸಿದರು. ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಜೆಸ್ಕಾಂ ಚೇರ ಮನ್ ಪ್ರವೀಣ್ ಪಾಟೀಲ್ ಹರವಾಳ ಮತ್ತಿತರು ಇದ್ದರು.

Share This Article