Ad image

ಶ್ರೀ ಕೃಷ್ಣ ಪೂಜೆಗೆ ವಿನಿಯೋಗ ಆಗುವ ಉಪಕರಣೆಗಳನ್ನು ತೊಳೆದ ಕೇಂದ್ರ ವಿತ್ತ ಸಚಿವೆ ನಿರ್ಮಲಾ

Team SanjeMugilu
1 Min Read

ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಪವಿತ್ರ ಸಂದರ್ಭದಲ್ಲಿ, ಶ್ರೀಮಧ್ವಾಚಾರ್ಯರ ಶಿಷ್ಯರಾದ ಶ್ರೀಉಪೇಂದ್ರ ತೀರ್ಥರ ಪರಂಪರೆಯಲ್ಲಿ ಪರ್ಯಾಯಾಧಿಪತಿಗಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಅವರ ಉತ್ತರಾಧಿಕಾರಿಗಳಾದ ಶ್ರೀಸುಶ್ರೀಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಕೇಂದ್ರದ ವಿತ್ತ ಸಚಿವೆ ಶ್ರೀಮತಿ.ನಿರ್ಮಲಾ ಸೀತಾರಾಮನ್ ಅವರಿಗೆ “ಭಾರತಲಕ್ಷ್ಮೀ” ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.

 

ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಅವರು, ಕೇಂದ್ರ ಹಣಕಾಸು ಸಚಿವೆಯಾಗಿ ದೇಶದ ಆರ್ಥಿಕ ಶಿಸ್ತು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. “ಸಂಪಾದನೆ ಹಾಗೂ ವೆಚ್ಚದಲ್ಲಿ ಜಾಣ್ಮೆಯಿಂದ ನಡೆದುಕೊಳ್ಳಬೇಕು” ಎಂಬ ಮನುವಿನ ಮಾತಿನಂತೆ ಅವರು ಗೌರವಾನ್ವಿತ ಸ್ಥಾನಕ್ಕೆ ಏರಿದ್ದಾರೆ.
ವೈಯಕ್ತಿಕವಾಗಿ ಶುದ್ಧವಾದ ಸ್ವಭಾವ ಹೊಂದಿರುವ ಅವರು, ತಮ್ಮ ಅರ್ಥಪೂರ್ಣವಾದ “ನಿರ್ಮಲಾ” ಎಂಬ ಹೆಸರಿನಂತೆಯೇ, ದೇಶದ ಆರ್ಥಿಕ ಶುದ್ಧತೆಯನ್ನು ಕಾಯುವಲ್ಲಿ ನಿಸ್ಸೀಮ ಶ್ರಮವಹಿಸುತ್ತಿದ್ದಾರೆ. ಶಾಸ್ತ್ರದಲ್ಲಿ ಹೇಳಿರುವ ಏಳು ರಾಜ್ಯಾಂಗಗಳ ಪೈಕಿ (ಕೋಶಪ್ರಕೃತಿ) ಧನವಿಭಾಗವು ಅವರ ಪ್ರಯತ್ನ, ಬುದ್ಧಿವಂತಿಕೆ ಮತ್ತು ಸಾಮರ್ಥ್ಯಗಳಿಂದಾಗಿ ಬಲಿಷ್ಠ, ಸುಸ್ಥಿರ ಹಾಗೂ ಸಮೃದ್ಧವಾಗಿದೆ.
ದುರ್ವಾಸ ಮಹರ್ಷಿಯ ಶಾಪದಿಂದ ಅಳಿದುಹೋದ ಶ್ರೀಲಕ್ಷ್ಮೀದೇವಿ ಸಮುದ್ರಮಥನದಲ್ಲಿ ಪುನಃ ಪ್ರತ್ಯಕ್ಷವಾದಂತೆಯೇ, ನಿಮ್ಮ ಉದಯದಿಂದ ನಮ್ಮ ದೇಶವು ಸಂಪೂರ್ಣ ಶ್ರೀಸಂಪತ್ತಿನಿAದ ತೇಜೋಮಯವಾಗಿದೆ. ಮಹೇಂದ್ರನಾದ ನರೇಂದ್ರನು ಭಾರತದ ಕ್ಷೀರಸಾಗರವನ್ನು ಮಥಿಸಿದಾಗ, ನಿರ್ಮಲಾ ಎಂಬ ಲಕ್ಷ್ಮೀ ಅವತರಿಸಿದರು. ಈ ಶ್ರಾವಣ ಪೂರ್ಣಿಮೆ ಹಬ್ಬದಂದು, ಪರ್ಯಾಯ ಶ್ರೀ ಪುತ್ತಿಗೆ ಮಠದ ನಾಲ್ಕನೇ ಪರ್ಯಾಯ ಸೇವಾ ಅವಧಿಯಲ್ಲಿ, ಶ್ರೀಕೃಷ್ಣ ದೇವಸ್ಥಾನದ ಬಾಗಿಲು ಲಕ್ಷ್ಮೀಪೂಜೆ ಸಂದರ್ಭದಲ್ಲಿ, ಶ್ರೀಕೃಷ್ಣನ ಭಕ್ತೆಯಾದ ನಿಮಗೆ ಈ ಭಾರತಲಕ್ಷ್ಮೀ ಪ್ರಶಸ್ತಿಯನ್ನು ಸಮರ್ಪಿಸಿ ಗೌರವಿಸುತ್ತಿದ್ದೇವೆ. ಶ್ರೀಕೃಷ್ಣ ಮತ್ತು ಶ್ರೀಮಧ್ವಾಚಾರ್ಯರ ಸಮಗ್ರ ಆಶೀರ್ವಾದ ನಿಮ್ಮ ಮೇಲೆ ಇರಲೆಂದು ಹಾರೈಸುತ್ತೇವೆಂದು ಪರ್ಯಾಯ ಪೀಠಾಧಿಪತಿಗಳಾದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

Share This Article