Ad image

ಪಂಚಾಯತ್ ರಾಜ್ ಇಲಾಖೆ ಹಿರಿಯ ಸಹಾಯಕಿಗೆ ಸೈಬರ್ ವಂಚನೆ

Team SanjeMugilu
1 Min Read

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೈಬರ್ ವಂಚನೆಗಳು ನಡೆಯುತ್ತಿವೆ. ಯಾವುದೋ ಒಂದು ಲಿಂಕ್ ಕಳುಹಿಸಿ ಅಥವಾ ಹೆದರಿಸಿ ಬೆದರಿಸಿ ಕೋಟ್ಯಂತರ ರೂ ಸುಲಿಗೆ ಮಾಡಲಾಗುತ್ತಿದೆ. ಇದೀಗ ಅಂತಹದೊಂದು ಸೈಬರ್ ವಂಚನೆ ನಡೆದಿದ್ದು, ಪಂಚಾಯತ್ ರಾಜ್ ಇಲಾಖೆಯ ಹಿರಿಯ ಸಹಾಯಕಿ 45 ಸಾವಿರ ರೂ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೋನುಕುಮಾರ್ ಎಂಬುವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.


ಹೇಮಲತಾ ಎಂಬುವವರು ಸೈಬರ್ ವಂಚನೆಯಿಂದ 45 ಸಾವಿರ ರೂ. ಕಳೆದುಕೊಂಡ ಪಂಚಾಯತ್ ರಾಜ್ ಇಲಾಖೆಯ ಹಿರಿಯ ಸಹಾಯಕಿ ಅಧಿಕಾರಿ. ಆ. 6ರಂದು ಅಧೀನ ಕಾರ್ಯದರ್ಶಿಗಳ ವಾಟ್ಸ್ಆಪ್ನಿಂದ 45 ಸಾವಿರ ರೂ ಅವಶ್ಯಕತೆ ಇದೆ ಎಂದು ಸಂದೇಶ ಬಂದಿತ್ತು. ಕೂಡಲೇ ಹೇಮಲತಾ ಸಂದೇಶದಲ್ಲಿದ್ದ ನಂಬರ್ಗೆ ಗೂಗಲ್ ಪೇ ಮೂಲಕ ಹಣ ಕಳುಹಿಸಿದ್ದರು. ಆದರೆ ಕರೆ ಮಾಡಿದಾಗ ಮೊಬೈಲ್ ನಂಬರ್ ಹ್ಯಾಕ್ ಆಗಿರುವುದು ತಿಳಿದುಬಂದಿದೆ.
ಬೆಂಗಳೂರಿನ ವೃದ್ದ ದಂಪತಿಗೆ ಡಿಜಿಟಲ್ ಅರೆಸ್ಟ್: ನಾಲ್ಕುವರೆ ಕೋಟಿ ರೂ ಸುಲಿಗೆ
ಇನ್ನು ಕೆಲ ದಿನಗಳ ಹಿಂದೆ ಬೆಂಗಳೂರಿನ ವೃದ್ದ ದಂಪತಿಯನ್ನ ಡಿಜಿಟಲ್ ಅರೆಸ್ಟ್ ಮಾಡಲಾಗಿತ್ತು. ಸುಮಾರು ಎರಡೂವರೆ ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ ಸುಮಾರು ನಾಲ್ಕುವರೆ ಕೋಟಿ ರೂ ಸುಲಿಗೆ ಮಾಡಿರುವಂತಹ ಘಟನೆ ನಡೆದಿತ್ತು.
ನೈಜೀರಿಯಾದಲ್ಲಿ ಇಂಜಿನಿಯರ್ ಕೆಲಸ ಮಾಡಿ ನಿವೃತ್ತಿ ಹೊಂದಿದ್ದ ಮಂಜುನಾಥ್ ಎಂಬುವವರಿಗೆ ಕ್ರೆಡಿಟ್ ಕಾರ್ಡ್ ಬಿಲ್ ಓವರ್ ಡ್ಯೂ ಆಗಿದೆ ಎಂದು ಕರೆ ಬಂದಿತ್ತು. ಬಳಿಕ ನಿಮ್ಮ ಅಕೌಂಟ್ನಲ್ಲಿ ಮನಿ ಲಾಂಡರಿಂಗ್ ಆಗಿದೆ ಎಂದು ಹೆದರಿಸಿ ಇಡಿ, ಸಿಬಿಐನಲ್ಲಿ ನಿಮ್ಮ ವಿರುದ್ದ ಕೇಸ್ ಆಗಿದೆ. ನಿಮ್ಮನ್ನು ತಿಹಾರ್ ಜೈಲಿಗೆ ಹಾಕುತ್ತೆವೆ ಎಂದು ವಾರಂಟ್ ಕಳಿಸಿದ್ದ ಆರೋಪಿಗಳು, ಹಂತ ಹಂತವಾಗಿ ಸುಮಾರು ನಾಲ್ಕುವರೆ ಕೋಟಿ ರೂ ಸುಲಿಗೆ ಮಾಡಿದ್ದರು. ಈ ವಿಚಾರ ಪೊಲೀಸರಿಗೆ ಗೊತ್ತಾಗಿ ಇದೊಂದು ಸುಳ್ಳು ವಿಚಾರ, ನಿಮ್ಮನ್ನು ವಂಚನೆ ಮಾಡಿದ್ದಾರೆ ಎಂದು ವೃದ್ದ ದಂಪತಿಯನ್ನ ರಕ್ಷಣೆ ಮಾಡಲಾಗಿತ್ತು.

Share This Article