Ad image

ಖಾಸಗಿ ಆಸ್ಪತ್ರೆಯ ಉದ್ಘಾಟನೆ ವೇಳೆ 10 ನಿಮಿಷ ಲಿಫ್ಟ್ನಲ್ಲಿ ಸಿಲುಕಿದ ಸಚಿವ ರಾಮಲಿಂಗಾ ರೆಡ್ಡಿ

Team SanjeMugilu
1 Min Read

ಆನೇಕಲ್: ಖಾಸಗಿ ಆಸ್ಪತ್ರೆಯ ಉದ್ಘಾಟನೆ ವೇಳೆ ಸಚಿವ ರಾಮಲಿಂಗಾ ರೆಡ್ಡಿ 10 ನಿಮಿಷಗಳ ಕಾಲ ಲಿಫ್ಟ್ನಲ್ಲಿ ಸಿಲುಕಿದ ಘಟನೆ ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ.


ಹೊಸೂರಿನ ಖಾಸಗಿ ಆಸ್ಪತ್ರೆಯ ಉದ್ಘಾಟನೆ ವೇಳೆ ಘಟನೆ ನಡೆದಿದೆ. ನೆಲಮಹಡಿಯಿಂದ ಲಿಫ್ಟ್ನಲ್ಲಿ ಹೋಗುವ ವೇಳೆ ಸಚಿವ ರಾಮಲಿಂಗಾರೆಡ್ಡಿ, ಹೊಸೂರು ಶಾಸಕ ಪ್ರಕಾಶ್ ಸೇರಿ ಸುಮಾರು ಹತ್ತು ಮಂದಿ ಇದ್ದ ಲಿಫ್ಟ್ ಕೆಟ್ಟು ನಿಂತು ಕೆಲಕಾಲ ಪರದಾಟ ನಡೆಸಿದರು. ಸುಮಾರು 10 ನಿಮಿಷಗಳ ಕಾಲ ಸಚಿವರು ಹಾಗೂ ಶಾಸಕರು ಲಿಫ್ಟ್ನಲ್ಲಿ ಸಿಲುಕಿದ್ದಾರೆ.
ಘಟನೆಯಿಂದ ಕೆಲಹೊತ್ತು ಆಸ್ಪತ್ರೆಯ ಆವರಣ ಗೊಂದಲಕ್ಕೀಡಾಗಿತ್ತು. ಬಳಿಕ ಲಿಫ್ಟ್ ಆಪರೇಟರ್ ಸಹಾಯದಿಂದ ಡೋರ್ ಓಪನ್ ಮಾಡಲಾಯಿತು. ತದನಂತರ ರಾಮಲಿಂಗಾ ರೆಡ್ಡಿ ಆಸ್ಪತ್ರೆ ಉದ್ಘಾಟಿಸಿ ಅಲ್ಲಿಂದ ತೆರಳಿದ್ದಾರೆ.

Share This Article