Ad image

ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಜಾತಿಗಣತಿ ಶುರು: ಹಲವಡೆ ಸಿಗದ ಕಿಟ್, ಸರ್ವರ್ ಸಮಸ್ಯೆ

Team SanjeMugilu
2 Min Read

ಬೆಂಗಳೂರು: ಎಡುವಟ್ಟು, ಗೊಂದಲದ ಮಧ್ಯೆಯೇ ಕರ್ನಾಟಕದಲ್ಲಿ ಶುರುವಾಗಿರುವ ಜಾತಿಗಣತಿಗೆ  ಹಲವೆಡೆ ವಿಘ್ನ ಎದುರಾಗಿದೆ. ಬಹುತೇಕ ಕಡೆ ನಿರ್ವಿಘ್ನವಾಗಿ ಜಾತಿಗಣತಿ ಶುರುವಾಗಿದೆ. ಆದರೆ ಹಲವೆಡೆ ಸಮಸ್ಯೆಗಳ ಸರಮಾಲೆ ಸೃಷ್ಟಿಯಾಗಿದೆ. ಶಿವಮೊಗ್ಗದಲ್ಲಿ ಕಿಟ್ ಪಡೆಯಲು ಶಿಕ್ಷಕರು ಬಂದಿದ್ದರು, ಆದರೆ ಸಮಸ್ಯೆಗಳನ್ನು ಎದುರಿಸಿದ್ದಾರೆ.

ಬಿಇಓ ಕಚೇರಿ ಬಳಿ ಬಂದರೂ, ಸಮಯಕ್ಕೆ ಸರಿಯಾಗಿ ಕಿಟ್ ಸಿಕ್ಕಿಲ್ಲ. ಸಂಪೂರ್ಣವಾಗಿ ತರಬೇತಿಯೂ ಆಗಲಿಲ್ಲ ಅಂತಾ ಶಿಕ್ಷಕರು ಆರೋಪಿಸಿದರು. ಮೊಬೈಲ್ ಆ್ಯಪ್ ಓಪನ್ ಆಗುತ್ತಿಲ್ಲ. ಎಲ್ಲಿ ಹೋಗಿ ಸರ್ವೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ಕೊಟ್ಟಿಲ್ಲ ಅಂದರು. ಬಿಇಒ ಕಚೇರಿಗೆ ಆಗಮಿಸಿದ ಸಚಿವ ಮಧು ಬಂಗಾರಪ್ಪ, ಗೊಂದಲ ನಿವಾರಿಸಿ ಜಾತಿಗಣತಿಗೆ ಚಾಲನೆ ನೀಡಿದರು. ಬಳಿಕ ಗಣತಿದಾರರಿಗೆ ಸಮೀಕ್ಷೆ ಕಿಟ್ ವಿತರಿಸಿದರು. ಬಳಿಕ ಮಾತನಾಡಿದ ಅವರು, ಜಾತಿಗಣತಿ ಬಗ್ಗೆಗಿನ ಗೊಂದಲಗಳು ನಿವಾರಣೆ ಆಗಿದೆ. ಟೆಕ್ನಿಕಲ್ ಸಮಸ್ಯೆ ಇದ್ದರೆ ಮೋದಿ ಆ್ಯಪ್‌ ಕೂಡಾ ಓಪನ್ ಆಗಲ್ಲ ಎಂದಿದ್ದಾರೆ.

ಬಳ್ಳಾರಿಯಲ್ಲೂ ಸರ್ಕಾರದ ಮೊಬೈಲ್ ಆ್ಯಪ್ ಓಪನ್ ಮಾಡಿದರೆ ಎರರ್ ಅಂತಾ ಬರ್ತಿತ್ತು. ಹೀಗಾಗಿ ಅಧಿಕೃತ ಚಾಲನೆಗಾಗಿ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳು ಕಾದು ಕುಳಿತಿದ್ದರು. ಬಳಿಕ ಸರ್ಕಾರದ ಆ್ಯಪ್ ಮೂಲಕ ಗಣತಿ ಕಾರ್ಯ ಆರಂಭಿಸಲಾಗಿದೆ.ಹಾವೇರಿಯಲ್ಲೂ ತಾಂತ್ರಿಕ ಸಮಸ್ಯೆ ಎದುರಾಗಿದೆ. ಮನೆ ಮೇಲೆ ಅಂಟಿಸಿರುವ ಯುಹೆಚ್‌ಐಡಿ ನಂಬರ್ ಅನ್ನ ಮೊಬೈಲ್ ಆ್ಯಪ್‌ನಲ್ಲಿ ಹಾಕಿದಾಗ ಎರರ್‌ ಬರುತ್ತಿತ್ತು. ಆ್ಯಪ್ ಓಪನ್ ಆಗದೇ ಅಡಚಣೆ ಉಂಟಾಗಿ ಶಿಕ್ಷಕರು ಪರದಾಡಿದರು.

ತಾಂತ್ರಿಕ ಸಮಸ್ಯೆ: ಸಮೀಕ್ಷೆ ವಿಳಂಬ
ಚಿತ್ರದುರ್ಗದಲ್ಲಿ ಸಚಿವ ಡಿ. ಸುಧಾಕರ್ ಸಮೀಕ್ಷೆಗೆ ಚಾಲನೆ ನೀಡಿದರು. ಚಾಲನೆ ನೀಡಿದ ಬಳಿಕ ತಾಂತ್ರಿಕ ಸಮಸ್ಯೆ ಉಂಟಾಗಿ ಸಮೀಕ್ಷೆ ವಿಳಂಬವಾಯಿತು. ಇತ್ತ ಹುಬ್ಬಳ್ಳಿಯಲ್ಲೂ ಜಾತಿಗಣತಿಗೆ ಕೆಲ ತಾಂತ್ರಿಕ ಸಮಸ್ಯೆ ಎದುರಾಗಿದೆ. ಶಿಕ್ಷಕರಿಗೆ ಏರಿಯಾಗಳು, ಮನೆಗಳನ್ನ ಹಂಚಿಕೆ ಮಾಡುವುದು ಸೇರಿದಂತೆ ಹಲವು ಸಮಸ್ಯೆ ಎದುರಾಗಿದೆ. ಸಮಸ್ಯೆ ಬಗೆಹರಿಸಿ ಗಣತಿ ಆರಂಭಿಸುತ್ತೇವೆ ಅಂತಾ ಅಧಿಕಾರಿಗಳು ಹೇಳಿದ್ದಾರೆ.

ಗದಗದಲ್ಲಿ 6ಸಾವಿರದ 509 ಸಿಬ್ಬಂದಿ ಗಣತಿಯಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಕಿಟ್ ವಿತರಣೆ ಮಾಡಲಾಯಿತು. ಬ್ಯಾಗ್, ಗಣತಿ ಕಿಟ್, ಐಡಿ ಕಾರ್ಡ್ ಪಡೆದುಕೊಂಡರು. ಬಿಸಿಲು, ಮಳೆಗೆ ಆಸರೆಯಾಗಿ ಸಿಬ್ಬಂದಿಗಳಿಗೆ ಕ್ಯಾಪ್ ವಿತರಿಸಲಾಯಿತು. ಇತ್ತ ಕೋಲಾರದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅವರ ಮನೆಯಿಂದ ಚಾಲನೆ ನೀಡಲಾಯಿತು.

ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಒಕ್ಕಲಿಗ, ಲಿಂಗಾಯತರು
ಜಾತಿಗಣತಿಗೆ ತರಾತುರಿಯಲ್ಲಿ ಮಾಡಲಾಗುತ್ತಿದೆ. ಕಾಲಾವಕಾಶ ನೀಡಬೇಕು. ಕೆಲ ಸಮಯ ಮುಂದೂಡಬೇಕು. ಇಲ್ಲ 15 ದಿನದಲ್ಲಿ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಹೆಚ್ಚುವರಿ ಸಮಯ ನೀಡಬೇಕು ಅಂತಾ ಒಕ್ಕಲಿಗ, ಲಿಂಗಾಯತರು ಒತ್ತಾಯಿಸಿದ್ದಾರೆ. ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಒಕ್ಕಲಿಗ ಲಿಂಗಾಯತರ ಮುಖಂಡರು ಭೇಟಿ ಮಾಡಿದರು. ಕೇವಲ ಹದಿನೈದು ದಿನಗಳಲ್ಲಿ ಸಮೀಕ್ಷೆ ಮಾಡಲು ಆಗಲ್ಲ. 3 ತಿಂಗಳ ಕಾಲ ಮುಂದೂಡುವಂತೆ ಮನವಿ ಸಲ್ಲಿಸಿದ್ದಾರೆ.

Share This Article