Ad image

ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಬಂದ್ರು ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ

Team SanjeMugilu
1 Min Read
ಬೆಂಗಳೂರು: ಕಲ್ಯಾಣ ಕರ್ನಾಟಕದಲ್ಲಿ ಕಂಡು ಕೇಳರಿಯದ ರೀತಿ ಮಳೆ ಬೀಳುತ್ತಿದ್ದರೂ ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಚಿವ ಸಿಸಿ ಪಾಟೀಲ್ ಕಿಡಿಕಾರಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಲ್ಯಾಣ ಕರ್ನಾಟಕ ಮಾತ್ರವಲ್ಲ, ಉತ್ತರ ಕರ್ನಾಟಕದಲ್ಲೂ ಮಳೆ ಜಾಸ್ತಿ ಬಂದಿತ್ತು. ಮಳೆಗೆ ಹೆಸರು ಬೆಳೆ, ಮೆಕ್ಕೆಜೋಳ ನಾಶವಾಗಿದೆ. ತಹಶೀಲ್ದಾರರಿಗೆ ಲಿಮಿಟ್ ಏರಿಯಾ ಸರ್ವೇ ಮಾಡಿ ಅಂತ ಸರ್ಕಾರದಿಂದ ಸೂಚನೆ ಬಂದಿದೆ ಅಂತ ಹೇಳಲಾಗ್ತಿದೆ. ಸರ್ಕಾರ ಹೀಗೆ ಮಾಡಬಾರದು. ಎಲ್ಲಿ ಮಳೆ ಹಾನಿಯಾಗಿದೆ ಅಲ್ಲಿ ಸರ್ವೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಂಡು ಕೇಳರಿಯದ ಭೀಕರ ಪ್ರವಾಹ ಬಂದಿದೆ. ಸಿಎಂ ಸಿದ್ದರಾಮಯ್ಯ ಅವರು ಇವತ್ತು ಹೋಗ್ತಾ ಇದ್ದಾರೆ. ಈ ಸರ್ಕಾರದಿಂದ ರೈತರಿಗೆ ನ್ಯಾಯ ಸಿಗೋ ವಿಶ್ವಾಸ ಇಲ್ಲ. ಮಳೆ ಹಾನಿಗೆ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ. ಕಳೆದ ಬಾರಿ ಅರ್ಧ ಜನರಿಗೆ ಪರಿಹಾರ ಬಿಡುಗಡೆ ಆಗಿಲ್ಲ. ಇನ್ನು ಹಾನಿಯ ಸರ್ವೆಯೇ ಮಾಡಿಲ್ಲ. ಹಾನಿಯಾದ ಎಲ್ಲಾ ಭಾಗದ ಸರ್ವೆಯನ್ನ ಸರ್ಕಾರ ಮಾಡಲು ಸೂಚನೆ ಕೊಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

Share This Article