Ad image

ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಹೊಸ ವಾರ್ಡ್ ಗಳಿಗೆ ಸಾಧಕರು, ಮಹನೀಯರ ಹೆಸರು

Team SanjeMugilu
2 Min Read

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಎಲ್ಲ 5 ಹೊಸ ಪಾಲಿಕೆಗಳಿಗೂ ವಾರ್ಡ್ ರಚನೆ ಮಾಡಿ ನಿನ್ನೆಯಷ್ಟೇ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಐದು ಹೊಸ ಪಾಲಿಕೆಗಳಲ್ಲೂ ಸಾಧಕರ ಹೆಸರಿನಲ್ಲಿ ಹೊಸ ವಾರ್ಡ್ ಗಳನ್ನು ರಚಿಸಿರುವುದು ವಿಶೇಷ. ಐದು ಪಾಲಿಕೆಗಳಲ್ಲಿ 368 ವಾರ್ಡ್ ಗಳನ್ನ ರಚನೆ ಮಾಡಲಾಗಿದೆ.
ಸಾಧಕರು, ಧೀಮಂತರ ಹೆಸರಿನಲ್ಲಿ ಹೊಸ ವಾರ್ಡ್ ಗಳನ್ನು ರಚಿಸಲಾಗಿದೆ. ಕರ್ನಾಟಕ ರತ್ನ ಡಾಕ್ಟರ್ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹೆಸರುಗಳನ್ನು ಹೊಸ ವಾರ್ಡ್ ಗಳಿಗೆ ಇಡಲಾಗಿದೆ. ಕೆಲವು ಕಡೆ ಒಂದೇ ಹೆಸರಿನಲ್ಲಿ ಎರಡು ವಾರ್ಡ್ ರಚಿಸಲಾಗಿದೆ. ಸಿನಿಮಾ ನಟರು, ಮೈಸೂರು ಮಹಾರಾಜರು, ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಹೊಸ ವಾರ್ಡ್ ಗಳಿಗೆ ಇಡಲಾಗಿದೆ. ದೇಶದ ಐಕಾನಿಕ್ ವ್ಯಕ್ತಿಗಳ ಹೆಸರು ಅನ್ನು ಹೊಸ ವಾರ್ಡ್ ಗಳಿಗೆ ಇಟ್ಟಿರುವುದು ವಿಶೇಷ. ಬೆಂಗಳೂರು ಸಂಸ್ಥಾಪಕ ನಾಡಪ್ರಭು ಕೆಂಪೇಗೌಡರಿಂದ ಹಿಡಿದು ವರಕವಿ ಬೇಂದ್ರೆ, ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಕಿತ್ತೂರು ರಾಣಿ ಚೆನ್ನಮ್ಮ, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಅನೇಕ ಮಹನೀಯರ ಹೆಸರುಗಳನ್ನು ಹೊಸ ಪಾಲಿಕೆಗಳ ವಾರ್ಡ್ ಗಳಿಗೆ ಇಡಲಾಗಿದೆ.

ಬೆಂಗಳೂರು ಪೂರ್ವ ಮಹಾ ನಗರ ಪಾಲಿಕೆ
ಡಾ ಕೆ. ಎಸ್. ನಿಸಾರ್ ಅಹಮದ್ ವಾರ್ಡ್

ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆ
ಅರಮನೆ ನಗರ, ನಾಲ್ವಡಿ ಕೃಷ್ಣರಾಜ ಒಡೆಯರ್ ವಾರ್ಡ್, ಡಾ ಪುನೀತ್ ರಾಜ್ ಕುಮಾರ್ ವಾರ್ಡ್, ನಾಡಪ್ರಭು ಕೆಂಪೇಗೌಡ ನಗರ ವಾರ್ಡ್, ಫ್ರೀಡಂ ಫೈಟರ್ ವಾರ್ಡ್, ಕಿತ್ತೂರು ರಾಣಿ ಚೆನ್ನಮ್ಮ ವಾರ್ಡ್, ಬಂಡಿ ರೆಡ್ಡಿ ವೃತ್ತ ವಾರ್ಡ್, ಕೆಂಪೇಗೌಡ ಬಡಾವಣೆ, ದರಾ ಬೇಂದ್ರೆ ವಾರ್ಡ್, ಡಾ ರಾಜ್ ಕುಮಾರ್ ವಾರ್ಡ್, ಝಾನ್ಸಿ ರಾಣಿ ವಾರ್ಡ್, ಮಂಗಲ್ ಪಾಂಡೆ ವಾರ್ಡ್, ಸಂಗೊಳ್ಳಿ ರಾಯಣ್ಣ ವಾರ್ಡ್, ಕೃಷ್ಣ ದೇವರಾಯ ವಾರ್ಡ್, ಸ್ವಾಮೀ ವಿವೇಕಾನಂದ ವಾರ್ಡ್, ಸುಭಾಷ್ ನಗರ

ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ
ಅಬ್ದುಲ್ ಕಲಾಂ‌ಂ ಆಜಾದ್, ವಿಶ್ವಮಾನವ ಕುವೆಂಪು ವಾರ್ಡ್, ಆ್ಯನಿ ಬೆಸೆಂಟ್ ವಾರ್ಡ್, ಅಬ್ದುಲ್ ಕಲಾಂ ನಗರ, ಸರ್ ಎಂ ವಿಶ್ವೇಶ್ವರಯ್ಯ ವಾರ್ಡ್,

ಬೆಂಗಳೂರು ಕೇಂದ್ರ ಮಹಾ ನಗರ ಪಾಲಿಕೆ
ಅಂಬೇಡ್ಕರ್ ನಗರ ವಾರ್ಡ್

ಬೆಂಗಳೂರು ಉತ್ತರ ಮಹಾನಗರ ಪಾಲಿಕೆ
ಬಾಲಗಂಗಾಧರ ವಾರ್ಡ್, ಕೆಂಪೇಗೌಡ ವಾರ್ಡ್, ಜಯಚಾಮರಾಜೇಂದ್ರ ನಗರ, ಸಮಾಧಾನ ನಗರ ವಾರ್ಡ್

ಹೀಗೆ ಅನೇಕ ಮಹನೀಯರು, ಐತಿಹಾಸಿಕ ಪುರುಷರು, ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಖ್ಯಾತ ಸಿನಿಮಾ ನಟರ ಹೆಸರುಗಳನ್ನು ವಾರ್ಡ್ ಗಳಿಗೆ ಇಟ್ಟು ಅವರ ಹೆಸರುಗಳನ್ನ ಅಜರಾಮಾರಗೊಳಿಸುವ ಕೆಲಸವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡಿದೆ. ಇದಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.

Share This Article