Ad image

ಬುರುಡೆ ಗ್ಯಾಂಗ್‌ನ ಅಸಲಿಯತ್ತು ಬಯಲು – ಚಿನ್ನಯ್ಯ ಕೋರ್ಟ್‌ಗೆ ತಂದಿದ್ದ ಬುರುಡೆ ಪುರುಷನದ್ದು!

Team SanjeMugilu
1 Min Read

ಮಂಗಳೂರು: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ  ಅಸಲಿಯತ್ತು ಒಂದೊಂದಾಗಿಯೇ ಬಯಲಾಗುತ್ತಿದ್ದು, ಈಗ ಚಿನ್ನಯ್ಯ  ತಂದಿದ್ದ ಬುರುಡೆ ಕೂಡ ಗಂಡಸಿನದ್ದು ಎಂಬ ವಿಚಾರ ಹೊರಬಿದ್ದಿದೆ.

ಚಿನ್ನಯ್ಯ ಕೋರ್ಟ್ಗೆ ತಂದಿದ್ದ ಬುರುಡೆ 30 ವರ್ಷ ವಯಸ್ಸಿನ ವ್ಯಕ್ತಿಯದ್ದು ಎಂದು ತಿಳಿದುಬಂದಿದೆ. ಎಸ್‌ಐಟಿ ತನಿಖೆ ವೇಳೆ ಸಿಕ್ಕಿದ್ದ ಹಾಗೂ ಚಿನ್ನಯ್ಯ ತಂದಿದ್ದ 3 ಅಸ್ಥಿಪಂಜರವೂ ಪುರುಷರದ್ದು ಎಂಬುದು ಸಾಬೀತಾಗಿದೆ.

ಎಸ್‌ಐಟಿ ತನಿಖೆ ವೇಳೆ 6ನೇ ಸ್ಪಾಟ್‌ನಲ್ಲಿ ಸಿಕ್ಕಿದ್ದು 35 ವರ್ಷ ಪುರುಷನ ಬುರುಡೆ. ಸ್ಪಾಟ್ ನಂ.11 ರಲ್ಲಿ ಬುರುಡೆಯೊಂದು ಭೂಮಿಯ ಮೇಲೆ ಪತ್ತೆಯಾಗಿತ್ತು. ಈ ಬುರುಡೆಯೂ ಪುರುಷನದ್ದು ಎಂದು ಸಾಬೀತಾಗಿದ್ದು, ಈ ಬುರುಡೆಯು ಒಂದು ವರ್ಷ ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯದ್ದು ಎಂದು ಶಂಕಿಸಲಾಗಿದೆ. ಎಸ್‌ಐಟಿ ಅಧಿಕಾರಿಗಳು ಮೂರು ಬುರುಡೆಗೂ ಪ್ರತ್ಯೇಕ ಎಫ್‌ಐಆರ್ ದಾಖಲು ಮಾಡಿದ್ದಾರೆ.

Share This Article