Ad image

ಬಂಗ್ಲೆಗುಡ್ಡ ಬುರುಡೆ ರಹಸ್ಯದ ತನಿಖೆ ಚುರುಕುಗೊಳಿಸಿದ SIT; ಚಿನ್ನಯ್ಯನ ಪತ್ನಿಗೂ ವಿಚಾರಣೆ ಬಿಸಿ!

Team SanjeMugilu
2 Min Read

ಮಂಗಳೂರು: ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ನಡೆದ ಬುರುಡೆ ರಹಸ್ಯ ಪ್ರಕರಣದಲ್ಲಿ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್  ತನಿಖೆಯನ್ನು ಚುರುಕುಗೊಳಿಸಿದೆ. ಈ ಪ್ರಕರಣದ ಮುಖ್ಯ ಆರೋಪಿ ಚಿನ್ನಯ್ಯನನ್ನು  ಈಗ ಬಂಧಿಸಲಾಗಿದೆ. ಇದೀಗ ಇದೇ ವಿಚಾರವಾಗಿ ಪತ್ನಿ ಮಲ್ಲಿಕಾ  ಅವರನ್ನು SIT ನೋಟಿಸ್​ ನೀಡಿದ್ದು, ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಚಿನ್ನಯ್ಯನ ಪತ್ನಿ ಮಲ್ಲಿಕಾ ಅವರಿಗೆ ನೋಟಿಸ್ ಜಾರಿಗೊಳಿಸಿ, ಪ್ರಕರಣದ ವಿವರಗಳು ಮತ್ತು ಫಂಡಿಂಗ್ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ.
ಚಿನ್ನಯ್ಯನ ಪತ್ನಿ ವಿಚಾರಣೆಯಿಂದ ಪ್ರಕರಣಕ್ಕೆ ಹೊಸ ತಿರುವು ಬರುವ ಸಾಧ್ಯತೆ. ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದಿದ್ದು, ಸ್ಥಳೀಯರು ಆತಂಕದಲ್ಲಿರುವುದು ಗಮನಕ್ಕೆ ಬಂದಿದೆ. ಪ್ರಕರಣದ ಕುರಿತು ಹಾಗೂ ಫಂಡಿಂಗ್ ಕುರಿತು ವಿಚಾರಣೆ ನಡೆಸಲಿದ್ದಾರೆ.
ಚಿನ್ನಯ್ಯನ ಪತ್ನಿಗೆ ನೋಟಿಸ್​!
ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಆರೋಪಿಸಿದ್ದ ಚಿನ್ನಯ್ಯನ ಹೇಳಿಕೆಯಿಂದ ಈ ಪ್ರಕರಣ ಆರಂಭವಾಗಿದೆ. ಚಿನ್ನಯ್ಯ ಎಂಬ ವ್ಯಕ್ತಿ ಈ ಆರೋಪಗಳನ್ನು ಮಾಡಿದ್ದು, ಅವನ ಹೇಳಿಕೆಯ ಪ್ರಕಾರ ಬಂಗ್ಲೆಗುಡ್ಡದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಿದ್ದ. ಇದಾದ ನಂತರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಎಸ್​ಐಟಿ ರಚನೆ ಮಾಡಿತ್ತು. ಈ ಬೆನ್ನಲ್ಲೇ ಬೆಟ್ಟದಲ್ಲಿ ಉತ್ಖನನ ಕಾರ್ಯ ನಡೆದಿದ್ದು, ಆತ ತೋರಿಸಿದ್ದ 17 ಜಾಗಗಳಲ್ಲಿ ಗುಂಡಿ ತೋಡಿ ಕಾರ್ಯಾಚರಣೆ ನಡೆಸಿದ್ದು, ಆದರೆ SIT ತನಿಖೆಯಲ್ಲಿ ಇದು ಷಡ್ಯಂತ್ರ ಎಂದು ಬಹಿರಂಗವಾಗಿದೆ.
ಇದಾದ ಬೆನ್ನಲ್ಲೇ ಚಿನ್ನಯ್ಯನನ್ನು ಬಂಧಿಸಲಾಗಿದೆ. SIT ಅಧಿಕಾರಿಗಳು ಚಿನ್ನಯ್ಯನ ವಿಚಾರಣೆಯಲ್ಲಿ ಹೊಸ ಸತ್ಯಗಳನ್ನು ಕಂಡುಹಿಡಿದಿದ್ದಾರೆ. ಚಿನ್ನಯ್ಯನ ಹೇಳಿಕೆಯಲ್ಲಿ ಬೋಳಿಯಾರ್, ಕಲ್ಲೇರಿ ಸೇರಿದಂತೆ ಹಲವು ಜಾಗಗಳ ಹೆಸರುಗಳು ಬಂದಿವೆ.
ಚಿನ್ನಯ್ಯನ ಪತ್ನಿ ವಿಚಾರಣೆಗೆ ಹಾಜರು!
ಈಗ ಚಿನ್ನಯ್ಯನ ಪತ್ನಿ ಮಲ್ಲಿಕಾ ಮೇಲೆ SIT ಗಮನ ಹರಿಸಿದೆ. ಮಲ್ಲಿಕಾ ಅವರಿಗೆ ನೋಟಿಸ್ ನೀಡಿ, SIT ಕಚೇರಿಗೆ ಹಾಜರಾಗಲು ಸೂಚಿಸಲಾಗಿತ್ತು. ಇಂದು ಮಲ್ಲಿಕಾ ಅವರು ಕಚೇರಿಗೆ ಬಂದು ವಿಚಾರಣೆಗೆ ಒಳಗಾಗಿದ್ದಾರೆ. ಪ್ರಕರಣದ ವಿವರಗಳು, ಚಿನ್ನಯ್ಯನ ಷಡ್ಯಂತ್ರದಲ್ಲಿ ಅವರ ಪಾತ್ರ, ಮತ್ತು ಫಂಡಿಂಗ್ ಮೂಲಗಳ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ. ಮಲ್ಲಿಕಾ ಅವರು ಈ ಗ್ಯಾಂಗ್‌ನಲ್ಲಿ ಭಾಗಿಯಾಗಿದ್ದರಾ ಎಂಬುದು ಈಗ ಚರ್ಚೆಯಲ್ಲಿದೆ. SIT ಅಧಿಕಾರಿಗಳು ಇಬ್ಬರ ಹೇಳಿಕೆಯನ್ನು ದಾಖಲಿಸಿ, ಇದರಿಂದ ಹೊಸ ತಿರುವುಗಳು ಬರಲಿದೆ ಎನ್ನಲಾಗಿದೆ.
ಎಸ್​ಐಟಿ ತೀವ್ರ ತನಿಖೆ!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ SIT ಹಲವು ಕ್ರಮಗಳನ್ನು ಕೈಗೊಂಡಿದೆ. ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ 12 ಗಂಟೆಗಳ ಕಾಲ ಶೋಧ ನಡೆಸಿ, ಚಿನ್ನಯ್ಯ ಬಳಸುತ್ತಿದ್ದ ಮೊಬೈಲ್ ಪತ್ತೆ ಮಾಡಿದ್ದಾರೆ. ಚಿನ್ನಯ್ಯನಿಗೆ ಆಶ್ರಯ ನೀಡಿದ ಆರೋಪದಲ್ಲಿ ತಿಮರೋಡಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಂಬುಲೆನ್ಸ್ ಚಾಲಕರಾದ ಜಲೀಲ್ ಬಾಬಾ ಮತ್ತು ಹಮೀದ್ ಯುಡಿಆರ್ ಅವರನ್ನು ಸಹ ವಿಚಾರಣೆಗೆ ಕರೆಸಲಾಗಿದ್ದು, ಶವಗಳನ್ನು ಶವಗಾರಕ್ಕೆ ಸಾಗಿಸಿದ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಬಂಗ್ಲೆಗುಡ್ಡೆಯಲ್ಲಿ ಮತ್ತೆ ಶೋಧ ನಡೆಸಿ, ಮೂಳೆಗಳು ಮತ್ತು ಅಸ್ಥಿಪಂಜರ ಪತ್ತೆಯಾಗಿದ್ದು, ಇದು ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.
ಈ ಪ್ರಕರಣ ಧರ್ಮಸ್ಥಳದ ಇತಿಹಾಸಕ್ಕೆ ಕಳಂಕ ತಂದಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ. ತನಿಖೆಯಿಂದ ಸತ್ಯ ಬಹಿರಂಗವಾಗಲಿ ಎಂಬುದಾಗಿ ಎಲ್ಲರೂ ಭಾವಿಸುತ್ತಿದ್ದಾರೆ. SIT ತಂಡದ ಅಧಿಕಾರಿಗಳು ಈ ತನಿಖೆಯನ್ನು ಮುಂದುವರಿಸುತ್ತಿದ್ದಾರೆ. ಪ್ರಕರಣದ ರೋಚಕತೆಯಿಂದ ಸಾರ್ವಜನಿಕರ ಗಮನ ಸೆಳೆಯಲಾಗಿದೆ, ಫಲಿತಾಂಶಗಳು ಶೀಘ್ರ ಬರಲಿ ಎಂಬ ನಿರೀಕ್ಷೆಯಿದೆ.

Share This Article