ಬೆಂಗಳೂರು: ಸರ್ಕಾರದ ಪಂಚ ಗ್ಯಾರಂಟಿಗಳಲ್ಲೊಂದು ಗೃಹಲಕ್ಷ್ಮಿ ಯೋಜನೆ . ಆದ್ರೆ ಕಳೆದ 3-4 ತಿಂಗಳಿಂದ ಎರಡು ಸಾವಿರ ರೂಪಾಯಿ ಹಣ ಮಹಿಳೆಯರ ಅಕೌಂಟ್ಗೆ ಜಮೆಯಾಗ್ತಿಲ್ಲ. ದೀಪಾವಳಿ ಸಮಯದಲ್ಲೇ ಮನೆಗೆ ಮಹಾಲಕ್ಷ್ಮಿ ಬಾರದೇ ಇರೋದು ಗೃಹಲಕ್ಷ್ಮೀಯರ ಆಕ್ರೋಶಕ್ಕೆ ಕಾರಣವಾಗ್ತಿದೆ.
ಕಾಂಗ್ರೆಸ್ ಸರ್ಕಾರ 2023ರ ವಿಧಾನಸಭಾ ಚುನಾವಣೆಯ ವೇಳೆ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದೆ. ಈ ಗ್ಯಾರಂಟಿಗಳಲ್ಲೊಂದು ಗೃಹಲಕ್ಷ್ಮಿ ಯೋಜನೆ ಮಹತ್ವದ್ದಾಗಿದೆ. ಇದ್ರಿಂದಾಗಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಜಮಾಯಾಗುತ್ತಿತ್ತು. ಆದ್ರೆ, ಕಳೆದ 4 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಮಹಿಳೆಯರ ಅಕೌಂಟ್ಗೆ ಜಮೆಯಾಗ್ತಿಲ್ಲ. ಸರ್ಕಾರ ಹಣ ಹಾಕಲು ವಿಳಂಬ ಮಾಡುತ್ತಿದೆ. ಇದು ಗೃಹಲಕ್ಷ್ಮಿ ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗ್ತಿದೆ.
ಇನ್ನೂ ಸರ್ಕಾರ ಮಹಿಳೆಯರ ಮತಗಳ ಮೇಲೆ ಕಣ್ಣಿಟ್ಟು ಈ ಯೋಜನೆ ಜಾರಿಗೊಳಿಸಿತ್ತು. ಅದರಂತೆ ರಾಜ್ಯದ ಮಹಿಳೆಯರಿಗೆ ಆರ್ಥಿಕ ಸಬಲೀಕರಣ ಒದಗಿಸುವ ಗುರಿಯೊಂದಿಗೆ ಈ ಯೋಜನೆಯನ್ನ ಜಾರಿಗೆ ತಂದಿತ್ತು. ಆದ್ರೆ ಮಹಿಳೆಯರಿಗೆ ಮನೆ ನಡೆಸಲು, ಮಕ್ಕಳ ಶಿಕ್ಷಣಕ್ಕೆ ಮೊದಲಾದವುಗಳಿಗೆ ಈ ಹಣ ಸಹಾಯಕವಾಗ್ತಿಲ್ಲ ಅಂತಾ ಸರ್ಕಾರದ ವಿರುದ್ದ ಹರಿಹಾಯುತ್ತಿದ್ದಾರೆ.
ಕಳೆದ 3-4 ತಿಂಗಳಿನಿಂದ ಮಹಿಳೆಯರ ಬ್ಯಾಂಕ್ ಖಾತೆಗೆ ಸರಿಯಾಗಿ ಹಣ ಜಮಾ ಆಗದೇ ಇರೋದಕ್ಕೆ ಗೃಹಲಕ್ಷ್ಮಿ ಫಲಾನುಭವಿಗಳು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ಗೆ ಅಲೆದಾಡುತ್ತಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಮನ ಹರಿಸಿ, ಆದಷ್ಟು ಬೇಗ ಬಾಕಿ ಕಂತಿನ ಹಣ ಬಿಡುಗಡೆ ಮಾಡಿದ್ರೇ, ಮಹಿಳೆಯರು ದೀಪಾವಳಿ ಹಬ್ಬವನ್ನು ಖುಷಿಯಿಂದ ಮಾಡಬಹುದು ಅನ್ನೋದು ಜನರ ಕೋರಿಕೆ.