Ad image

ದೀಪಾವಳಿಗೆ ಬೆಳ್ಳಿ-ಬಂಗಾರ ಬಲು ಭಾರ – 10 ಗ್ರಾಂ ಚಿನ್ನ ಒಂದೂವರೆ ಲಕ್ಷಕ್ಕೆ ತಲುಪುತ್ತಾ?

Team SanjeMugilu
2 Min Read

ಬೆಂಗಳೂರು: ದೀಪಾವಳಿಗೂ ಮೊದಲೇ ಬೆಳ್ಳಿ-ಚಿನ್ನ ಪೈಪೋಟಿಗೆ ಬಿದ್ದಿದೆ. ಇತ್ತ ಚಿನ್ನ  ಬಿಟ್ಟು ಬೆಳ್ಳಿ ಕಡೆ ಮುಖ ಮಾಡಿದವರಿಗೂ ಬಿಗ್ ಶಾಕ್ ಆಗ್ತಿದೆ. ಬಂಗಾರದ ಜೊತೆಗೆ ಬೆಳ್ಳಿ ಬೆಲೆಯೂ ದಿಢೀರನೇ ಏರುತ್ತಿದೆ. ಹಾಗಿದ್ರೆ ಧನತ್ರಯೋದಶಿಗೆ ಚಿನ್ನ-ಬೆಳ್ಳಿ ಇನ್ನಷ್ಟು ಏರಿಕೆಯಾಗುತ್ತಾ?

ಯಾವುದೇ ಹಬ್ಬ ಇರಲಿ ಹೊಸ ಬದುಕಿನ ಜೊತೆಗೆ ಚಿನ್ನ ಬೆಳ್ಳಿ ಖರೀದಿ ಮಾಡೋದು ವಾಡಿಕೆ. ಇನ್ನು ದೀಪಾವಳಿಯಲ್ಲಂತೂ ಚಿನ್ನ ಬೆಳ್ಳಿ ಖರೀದಿಯಲ್ಲಿ ಜನ ಮುಗಿ ಬಿದ್ದಿರುತ್ತಾರೆ. ಜನ ಸಾಮಾನ್ಯರಿಗೆ ಚಿನ್ನ-ಬೆಳ್ಳಿಯ ಮೇಲೆ ಸಾಕಷ್ಟು ವ್ಯಾಮೋಹವಿದೆ. ಹಬ್ಬ ಬಂದ್ರೆ ಸಾಕು ಚಿನ್ನ ಅಥವಾ ಬೆಳ್ಳಿ ಕೊಂಡರೇನೇ ಶುಭ ಅನ್ನೋ ನಂಬಿಕೆಯೂ ಬೇರೂರಿದೆ. ಹಾಗಾಗೇ ಹಬ್ಬಗಳು ಹತ್ತಿರ ಆಗ್ತಿದ್ದಂತೆ ಚಿನ್ನ ಬೆಳ್ಳಿ ರೇಟ್ ಹೆಚ್ಚಾಗ್ತಿರುತ್ತೆ. ಆದ್ರೆ ಈ ಬಾರಿ ಚಿನ್ನ-ಬೆಳ್ಳಿ ರೇಟ್  ಸಖತ್ ಪೈಪೋಟಿಯೊಂದಿಗೆ ಜನರಿಗೆ ಶಾಕ್ ಕೊಡುತ್ತಿವೆ.

ಈಗಾಗಲೇ ಚಿನ್ನದ ರೇಟ್ ಅಂತೂ ಕೇಳೋ ಹಾಗಿಲ್ಲ. 10 ಗ್ರಾಂ ಚಿನ್ನದ ರೇಟ್ 1 ಲಕ್ಷ ಗಡಿ ದಾಟಿದ್ದಲ್ಲದೇ 1 ಲಕ್ಷ 20 ಸಾವಿರಕ್ಕೆ ಬಂದು ನಿಲ್ಲುತ್ತಿದೆ. ದೀಪಾವಳಿ ವೇಳೆಗೆ ಒಂದೂವರೆ ಲಕ್ಷ ತಲುಪುವ ಸಾಧ್ಯತೆಯಿದೆ. ಜೊತೆಗೆ ಇನ್ನೇನು ಈ ವಾರ ಕಳೆದ್ರೆ ದೀಪಾವಳಿ. ದೀಪಾವಳಿಗೆ ಬೆಳ್ಳಿ ದೀಪನೋ.. ಬೆಳ್ಳಿ ಲಕ್ಷ್ಮಿವಿಗ್ರಹವೋ ಹೀಗೆ ಬೆಳ್ಳಿಯಲ್ಲಿ ಏನಾದರೂ ಖರೀದಿಸೊಕೆ ಮುಂದಾದವರಿಗೂ ಬೆಲೆಯೂ ಕೈ ಸುಡುವಂತೆ ಮಾಡಿದೆ. ದೀಪಾವಳಿ ಹೊತ್ತಿಗೆಲ್ಲಾ ಬೆಳ್ಳಿ ಬೆಲೆ ಕೆಜಿಗೆ 2 ಲಕ್ಷ ರೂ. ದಾಟಲಿದೆ ಅನ್ನೋ ಮಾತುಗಳೂ ಕೇಳಿ ಬರ್ತಿದೆ. ಇದೇಲ್ಲದಕ್ಕೂ ಹಲವು ಕಾರಣಗಳನ್ನ ಚಿನ್ನದ ವ್ಯಾಪಾರಿಗಳು ಕೊಡ್ತಿದ್ದಾರೆ.

ಅಕ್ಷಯ ತೃತಿಯದಂತೆ ಧನತ್ರಯೋದಶಿ!
ಅಕ್ಷಯ ತೃತಿಯದಂತೆ ಧನತ್ರಯೋದಶಿ. ಧನತ್ರಯೋದಶಿ ದಿನ ಚಿನ್ನ ಹಾಗೂ ಬೆಳ್ಳಿ ಖರೀದಿ ಮಾಡಿದ್ರೆ ಒಳಿತಾಗುತ್ತೆ ಅನ್ನೋ ನಂಬಿಕೆ ಜನರಲ್ಲಿದೆ. ಈ ಬೆಲೆ ಏರಿಕೆ ನಡುವೆ ಧನತ್ರಯೋದಶಿಗೂ ಜನ ಸಂಕಷ್ಟ ಎದುರಿಸುವಂತಾಗಿದೆ.

ಚಿನ್ನ-ಬೆಳ್ಳಿ ದರ ಏರಿಕೆಗೆ ಕಾರಣಗಳೇನು?
– ಅಮೆರಿಕದ ಅಧ್ಯಕ್ಷ ಟ್ರಂಪ್ ನೀತಿಗಳಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ಏರಿಳಿತ
– ಹೂಡಿಕೆದಾರರು ಡಾಲರ್ ಬದಲು ಚಿನ್ನದ ಖರೀದಿಗೆ ಮುಂದಾಗಿರೋದು
– ಕೇಂದ್ರೀಯ ಬ್ಯಾಂಕ್‌ಗಳಿಂದ ಚಿನ್ನದ ಖರೀದಿ ಹೆಚ್ಚಳ
– ಕೈಗಾರಿಕೆ ಉದ್ದೇಶದಿಂದ ಬೆಳ್ಳಿ ಬಳಕೆ
– ಇರಾನ್-ಇಸ್ರೇಲ್, ಉಕ್ರೇನ್-ರಷ್ಯಾ ಯುದ್ಧಗಳ ಪರಿಣಾಮ

Share This Article