ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಡಲಾಗಿದೆ ಎನ್ನುವ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದೆ. ಇನ್ನೇನು ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸಲಿದೆ ಎನ್ನುವ ಹೊತ್ತಲ್ಲೇ ಧರ್ಮಸ್ಥಳ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನ್ಯಾಯಾಲಯದ ಮುಂದೆ ದೂರುದಾರ ಚಿನ್ನಯ್ಯ ಕೊಟ್ಟ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ ಎನ್ನಲಾಗ್ತಿದೆ. ಇದೀಗ ಎಸ್ಐಟಿ ಮತ್ತೆ ತನಿಖೆ ಚುರುಕುಗೊಳಿಸಿದ್ದು, ಈ ರಹಸ್ಯ ಬೇದಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ತಲೆನೋವಾಯ್ತು ಚಿನ್ನಯ್ಯುನ ಹೊಸ ಸ್ಟೇಟ್ಮೆಂಟ್!
ಕೋರ್ಟ್ ಮುಂದೆ ಚಿನ್ನಯ್ಯ 10 ಶವಗಳನ್ನ ಒಂದೆಡೆ ಹೂತಿಟ್ಟಿರುವುದಾಗಿ ಹೇಳಿಕೆ ನೀಡಿದ್ದು, ಇದು ಎಸ್ಐಟಿಗೆ ದೊಡ್ಡ ತಲೆನೋವಾಗಿದೆ. ಈ ಹಿಂದೆ ಎಸ್ಐಟಿ ತನಿಖೆ ವೇಳೆ ಚಿನ್ನಯ್ಯ ಈ ಬಗ್ಗೆ ಬಾಯ್ಬಿಟ್ಟಿರಲಿಲ್ಲ ಎನ್ನಲಾಗ್ತಿದೆ. ಕೋರ್ಟ್ ಮುಂದೆ ಕೊಟ್ಟ ಹೇಳಿಕೆ ಎಸ್ಐಟಿಗೂ ಶಾಕ್ ಕೊಟ್ಟಿದೆ. ಇದೀಗ 10 ಶವ ರಹಸ್ಯ ಕೆದಕಲು ಎಸ್ ಐ ಟಿ ಮುಂದಾಗಿದೆ.
’10 ಶವಗಳ ರಹಸ್ಯ ‘
ಎಸ್ ಐ ಟಿ ಮುಂದೆ ಹೇಳದ ಈ ವಿಚಾರವನ್ನ ಕೋರ್ಟ್ ಮುಂದೆ ಚಿನ್ನಯ್ಯ ಹೇಳಿದ್ದಾನೆ. ‘ಈ 10 ಶವಗಳ ರಹಸ್ಯ ‘ ಇದೀಗ SIT ಅಧಿಕಾರಿಗಳಿಗೆ ತಲೆನೋವಾಗಿದೆ. ಇನ್ನೇನು ಚಾರ್ಜ್ ಶೀಟ್ ಸಲ್ಲಿಕೆ ಮಾಡ್ಬೇಕು ಎನ್ನುವಷ್ಟರ ಹೊತ್ತಲ್ಲೇ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಗುವಂತೆ ಕಾಣ್ತಿದೆ.
ಮತ್ತೆ ಚಿನ್ನಯ್ಯನ ತನಿಖೆ
ಸರಕಾರಕ್ಕೆ ವರದಿ ಸಲ್ಲಿಸುವ ತರಾತುರಿಯಲ್ಲಿ ಎಸ್ ಐ ಟಿ ಇದ್ದು, ಇದೇ ವೇಳೆ ಚಿನ್ನಯ್ಯ 10 ಶವಗಳ ಹೊಸ ಬಾಂಬ್ ಸಿಡಿಸಿದ್ದಾನೆ. ಚಿನ್ನಯ್ಯ ಹತ್ತು ಶವ ಹೂತು ಹಾಕಿದ್ದು ಎಲ್ಲಿ? ಯಾವಾಗ ಎಂಬ ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
ದಾಖಲೆಗಳ ಹುಡುಕಾಟ
ಚಿನ್ನಯ್ಯನ ವಿಚಾರಣೆಗೂ ಮುನ್ನವೇ ಮಾಹಿತಿ ಕಲೆ ಹಾಕಲು ಎಸ್ಎಸ್ ಐ ಟಿ ಮುಂದಾಗಿದೆ. 10 ಶವ ಹೂತು ಹಾಕಿದ್ದು ಯಾವಾಗ ಎಂದು ಪತ್ತೆ ಹಚ್ಚಲು ದಾಖಲೆಗಳ ಹುಡುಕಾಟ ನಡೆಸ್ತಿದೆ. ಮತ್ತೆ ಎಲ್ಲಾ ಯು ಡಿ ಆರ್, ಪೋಸ್ಟ್ ಮೊರ್ಟಮ್ ರಿಪೋರ್ಟ್ ಗಳನ್ನ ಎಸ್ ಐ ಟಿ ತಡಕಾಡುತ್ತಿದೆ.
ಚಿನ್ನಯ್ಯನ ವಿಚಾರಣೆಗೂ ಸಿದ್ಧತೆ
10 ಶವ ಹೂತು ಹಾಕಿದ ಕುರಿತು ಧರ್ಮಸ್ಥಳ ಗ್ರಾಂ. ಪಂಚಾಯತ್ ನಿಂದಲೂ ಮಾಹಿತಿ ಸಂಗ್ರಹ ಮಾಡಲಾಗ್ತಿದೆ. ತನಿಖಾಧಿಕಾರಿ ಜೀತೇಂದ್ರ ಕುಮಾರ್ ದಯಮಾ ನೇತೃತ್ವದಲ್ಲಿ ತಲಾಶ್ ನಡೆಸಲಾಗ್ತಿದ್ದು, ಒಂದೇ ಜಾಗದಲ್ಲಿ 10 ಶವ ಹೂತಿದ್ದೇನೆ ಎಂದು ಚಿನ್ನಯ್ಯ ಹೇಳಿಕೆ ನೀಡಿದ್ದಾನೆ. ಬೆಳ್ತಂಗಡಿ ನ್ಯಾಯಾಲಯದಲ್ಲಿ ಬಿ ಎನ್ ಎಸ್ 183 ಹೇಳಿಕೆ ವೇಳೆ ಈ ಮಾಹಿತಿ ರಿವೀಲ್ ಆಗಿದೆ ಎನ್ನಲಾಗ್ತೊದೆ.
ಸದ್ಯ ಶಿವಮೊಗ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿನ್ನಯ್ಯನನ್ನು ವಿಚಾರಣೆ ನಡೆಸಲು ಎಸ್ಐಟಿ ಮುಂದಾಗಿದೆ. ಮೊದಲು ಕೋರ್ಟ್ ನಿಂದ ಅನುಮತಿ ಪಡೆದು ಶಿವಮೊಗ್ಗ ಜೈಲಿನಲ್ಲೇ ಚಿನ್ನಯ್ಯನ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಧರ್ಮಸ್ಥಳ ಕೇಸ್, ಅಂತಿಮ ಹಂತದ ತನಿಖೆಗೆ ಬಿಗ್ ಟ್ವಿಸ್ಟ್; ಮತ್ತೆ ಈ ರಹಸ್ಯ ಕೆದಕಲು ಮುಂದಾದ ಎಸ್ಐಟಿ!
