Ad image

RSS ಚಟುವಟಿಕೆಗಳಲ್ಲಿ ಭಾಗಿಯಾಗುವ ಸರ್ಕಾರಿ ನೌಕರರ ವಿರುದ್ಧ ಕ್ರಮ?

Team SanjeMugilu
1 Min Read

ಬೆಂಗಳೂರು: ಆರ್​ಎಸ್​ಎಸ್​ಗೆ ಅಂಕುಶ ಹಾಕುವ ಬಗ್ಗೆ ರಾಜ್ಯ ಕಾಂಗ್ರೆಸ್ ಚರ್ಚೆ ನಡೆಸುತ್ತಿದೆ. RSS ಚಟುವಟಿಕೆಗಳನ್ನ ನಿಷೇಧ ಮಾಡುವಂತೆ ಸಚಿವ ಪ್ರಿಯಾಂಕ್​ ಖರ್ಗೆ  ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ರು. ಇದೇ ವೇಳೆ ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗುವ ಸರ್ಕಾರಿ ನೌಕರರ  ವಿರುದ್ದ ಕ್ರಮಕೈಗೊಳ್ಳುವಂತೆ ಪ್ರಿಯಾಂಕ್​ ಖರ್ಗೆ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
ನೌಕರರ ವಿರುದ್ದ ಶಿಸ್ತುಕ್ರಮ
ಕೆಲವೆಡೆ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆ‌ಗಳಲ್ಲಿ ಭಾಗಿ ಹಿನ್ನೆಲೆ ಸರ್ಕಾರಿ‌ ನೌಕರರು ಆರ್‌ಎಸ್‌ಎಸ್, ಇತರೆ ಸಂಘಸಂಸ್ಥೆಗಳ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ನಿಷೇಧಿಸಿ. ಇದನ್ನ ಉಲ್ಲಂಘಿಸುವ ಅಧಿಕಾರಿ, ನೌಕರರ ವಿರುದ್ದ ಶಿಸ್ತುಕ್ರಮ ಎಂಬ ಸುತ್ತೋಲೆ ಹೊರಡಿಸಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ಳುವಂತಿಲ್ಲ
ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಸಚಿವ ಪ್ರಿಯಾಂಕ್ ‌ಖರ್ಗೆ ಅವ್ರು, ಕರ್ನಾಟಕ ನಾಗರೀಕ ಸೇವಾ ನಿಯಮಗಳು 2021 5(1) ಪ್ರಕಾರ ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷ, ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರುತಕ್ಕದಲ್ಲ.
ಜೊತೆಗೆ ಅದರ ಸಹಾಯಾರ್ಥ, ನೆರವು , ವಂತಿಗೆ ನೀಡತಕ್ಕದಲ್ಲ. ಹೀಗಿದ್ದರೂ ಕೆಲ ಸರ್ಕಾರಿ ನೌಕರರು ಇತರೆ ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ ಹೀಗಾಗಿ ಈ ಬಗ್ಗೆ ಕ್ರಮ‌ಕೈಗೊಳ್ಳಿ ಎಂದು ಸಿಎಂಗೆ ಪ್ರಿಯಾಂಕ್ ಖರ್ಗೆ ಒತ್ತಾಯ ಮಾಡಿದ್ದಾರೆ ಎನ್ನಲಾಗ್ತಿದೆ.

Share This Article