Ad image

20ಕ್ಕೂ ಹೆಚ್ಚು ಸರ್ಕಾರಿ ನೌಕರರ ಆತ್ಮಹತ್ಯೆ, ಸಿಎಂ ಮಾನವೀಯತೆ ಸತ್ತಂತೆ ಇದ್ದಾರೆ: ಸಿ.ಟಿ ರವಿ

Team SanjeMugilu
1 Min Read

ಚಿಕ್ಕಮಗಳೂರು: ಕಾಂಗ್ರೆಸ್ ಸರ್ಕಾರದ ಎರಡೂವರೆ ವರ್ಷದ ಅವಧಿಯಲ್ಲಿ 20ಕ್ಕೂ ಹೆಚ್ಚು ಸರ್ಕಾರಿ ನೌಕರರು ಸರ್ಕಾರದ ಕಾರಣ ಮುಂದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಎಂ ಮಾತ್ರ ಕಣ್ಣಿದ್ದು ಕುರುಡರಂತೆ, ಕಿವಿಯಿದ್ದು ಕಿವುಡರಂತೆ, ಹೃದಯವಿದ್ದು ಮಾನವೀಯತೆ ಸತ್ತಂತೆ ಇದ್ದಾರೆ ಎಂದು ಎಮ್ಎಲ್ಸಿ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಸಚಿವರು, ಶಾಸಕರು, ಸಿಬ್ಬಂದಿ, ಸರ್ಕಾರದ ಬೇಜವಾಬ್ದಾರಿ, ಸಂಬಳ ನೀಡದೇ ಇರುವುದರ ಕಾರಣ ನೀಡಿ ಡೆತ್ ನೋಟ್ ಬರೆದಿಟ್ಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ಹೃದಯ ಇದೆಯೋ? ಇಲ್ವೋ ಗೊತ್ತಿಲ್ಲ, ಮಾನವೀಯತೆ ಸತ್ತಿರೋದು ಗೊತ್ತಾಗ್ತಿದೆ. ಇದು ಸರ್ಕಾರದ ಪ್ರಾಯೋಜಿತ ಕೊಲೆ, ಇದರ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು. ಸರ್ಕಾರದ ಭಕ್ಷಣೆಯ ದಾಹಕ್ಕೆ ಸರ್ಕಾರಿ ನೌಕರರು ಬಲಿಯಾಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಸಾವಿಗೆ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಯೇ ಪ್ರಾಯಶ್ಚಿತ್ತ. ಆದರೆ ಸರ್ಕಾರ ಹೃದಯಹೀನ ಸರ್ಕಾರವಾಗಿ, ಮಾನವೀಯತೆ ಸತ್ತಂತೆ ವರ್ತಿಸುತ್ತಿದೆ. ದಪ್ಪ ಚರ್ಮ ಅನ್ನೋಣ ಅಂದ್ರೆ ಆ ದಪ್ಪ ಚರ್ಮಕ್ಕಾದ್ರು ಸ್ವಲ್ಪ ನಾಟುತ್ತೆ. ಚಡಿ ಏಟು ನಾಟದಿದ್ರು, ಕರೆಂಟ್ ಶಾಕ್ ಆದ್ರೂ ನಾಟುತ್ತೆ. ಇದು ದಪ್ಪ ಚರ್ಮವೋ, ಸತ್ತಿರೋ ಚರ್ಮವೋ ಗೊತ್ತಾಗ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

 

Share This Article