Ad image

ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಭಾರೀ ಸುಂಕ ಹಾಕ್ತೇವೆ: ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Team SanjeMugilu
1 Min Read

ವಾಷಿಂಗ್ಟನ್‌: ರಷ್ಯಾದಿಂದ  ಭಾರತ  ತೈಲ ಖರೀದಿ ನಿಲ್ಲಿಸದೇ ಇದ್ದರೆ ಮುಂದೆ ಭಾರಿ ಸುಂಕಗಳನ್ನು ಎದುರಿಸಬೇಕಾಗುತ್ತದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಎಚ್ಚರಿಕೆ ನೀಡಿದ್ದಾರೆ.

ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ನಾನು ರಷ್ಯಾದ ತೈಲ ಖರೀದಿ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ನನಗೆ ವೈಯಕ್ತಿಕವಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಅವರು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದರೆ ಭಾರೀ ಸುಂಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಪಾಕಿಸ್ತಾನ-ಅಫ್ಘಾನಿಸ್ತಾನದ ನಡುವೆ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಗೆ

ಟ್ರಂಪ್‌ ಮತ್ತು ಪ್ರಧಾನಿ ಮೋದಿ ನಡುವಿನ ಯಾವುದೇ ಇತ್ತೀಚಿನ ಸಂಭಾಷಣೆಯ ಬಗ್ಗೆ ತಿಳಿದಿಲ್ಲ ಎಂಬ ಭಾರತ ಸರ್ಕಾರದ ಪ್ರತಿಕ್ರಿಯೆಯ ಬಗ್ಗೆ ಕೇಳಿದ್ದಕ್ಕೆ, ಅವರು ಹಾಗೆ ಹೇಳಲು ಬಯಸಿದರೆ ಮುಂದೆ ಅವರು ಬೃಹತ್ ಸುಂಕಗಳನ್ನು ಪಾವತಿಸುವುದನ್ನು ಮುಂದುವರಿಸಬೇಕಾಗುತ್ತದೆ ಎಂದರು.

ಡೊನಾಲ್ಡ್‌ ಟ್ರಂಪ್‌ ಆರಂಭದಲ್ಲಿ ಭಾರತದ ಮೇಲೆ 25% ಸುಂಕವನ್ನು ಹೇರಿದ್ದರು. ನಂತರ ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ಸುಂಕ ಹಾಕಿದ್ದಾರೆ. ಇದರ ಪರಿಣಾಮ ಈಗ ಭಾರತದಿಂದ ಅಮೆರಿಕ್ಕೆ ಆಮದಾಗುವ ವಸ್ತುಗಳ ಮೇಲೆ 50% ಸುಂಕ ಹೇರಲಾಗಿದೆ.

ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕೆ ಚೀನಾ ಮೇಲೆ 100% ಸುಂಕವನ್ನು ಟ್ರಂಪ್‌ ಘೋಷಿಸಿದ್ದಾರೆ. ಹೊಸ ಸುಂಕ ನೀತಿಗಳು ನ.1 ರಿಂದ ಜಾರಿಗೆ ಬರಲಿದೆ.

Share This Article