ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ವಾಯುಭಾರ ಕುಸಿತವು ಮೋಂಟಾ ಚಂಡಮಾರುತವಾಗಿ ತೀವ್ರಗೊಂಡಿದೆ. ಈ ಚಂಡಮಾರುತವು ತೀವ್ರಗೊಂಡು ಭಾರತದ ಪೂರ್ವ ಕರಾವಳಿಯನ್ನು ಅಪ್ಪಳಿಸಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಅನ್ವಯ, ಒಡಿಶಾ, ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ.
ಥೈಲ್ಯಾಂಡ್ ಈ ಚಂಡಮಾರುತಕ್ಕೆ ಮೋಂಟಾ ಎಂದು ಹೆಸರಿಟ್ಟಿದ್ದು, ಥಾಯ್ ಭಾಷೆಯಲ್ಲಿ ‘ಪರಿಮಳಯುಕ್ತ ಅಥವಾ ಸುಂದರವಾದ ಹೂವು’ ಎಂಬರ್ಥವನ್ನು ನೀಡುತ್ತದೆ. ಈ ಚಂಡಮಾರುತವೂ ಗಂಟೆಗೆ 90 ರಿಂದ 110 ಕಿ.ಮೀ ವೇಗವನ್ನು ತಲುಪಬಹುದು ಎಂದು ಅಂದಾಜು ಮಾಡಲಾಗಿದ್ದು, ಭಾರತದ ಪೂರ್ವ ಕರಾವಳಿಯ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯನ್ನು ಸುರಿಸಲಿದೆ.
ಐಎಂಡಿ ಪ್ರಕಾರ, ಚಂಡಮಾರುತವು ಪ್ರಸ್ತುತ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಕೇಂದ್ರೀಕೃತವಾಗಿದ್ದು, ಪಶ್ಚಿಮದ ಕಡೆಗೆ ಸ್ಥಿರವಾಗಿ ಚಲಿಸುತ್ತಿದೆ. ಶನಿವಾರ, ಇದು ಪೋರ್ಟ್ ಬ್ಲೇರ್ನಿಂದ 460 ಕಿಮೀ ಪಶ್ಚಿಮ-ನೈಋತ್ಯ, ಚೆನ್ನೈನಿಂದ 950 ಕಿಮೀ ಪೂರ್ವ-ಆಗ್ನೇಯ ಮತ್ತು ಕಾಕಿನಾಡದಿಂದ 970 ಕಿಮೀ ಆಗ್ನೇಯದಲ್ಲಿತ್ತು. ಅಕ್ಟೋಬರ್ 28 ರ ಸಂಜೆ ಅಥವಾ ರಾತ್ರಿ, ಚಂಡಮಾರುತವು ಆಂಧ್ರಪ್ರದೇಶದ ಮಚಲಿಪಟ್ನಂ ಮತ್ತು ಕಳಿಂಗಪಟ್ನಂ ಭೂಮಿಗೆ ಅಪ್ಪಳಿಸಲಿದೆ.
ಆಂಧ್ರ ಕರಾವಳಿಯಲ್ಲಿ ಗಂಟೆಗೆ 45 ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಇದು ಕ್ರಮೇಣ ಗಂಟೆಗೆ 90-110 ಕಿ.ಮೀ.ಗೆ ಹೆಚ್ಚಾಗುತ್ತದೆ ಎಂದು ಹವಾಮಾನ ಇಲಾಖೆ ವಿಜ್ಞಾನಿ ಎಸ್. ಕರುಣಾಸಾಗರ್ ಹೇಳಿದ್ದಾರೆ. ಇದರೊಂದಿಗೆ ಆಂಧ್ರಪ್ರದೇಶ, ಒಡಿಶಾ ಮತ್ತು ತಮಿಳುನಾಡಿನಲ್ಲಿ ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದಾರೆ. ಸೂಕ್ಷ್ಮ ಜಿಲ್ಲೆಗಳಲ್ಲಿ NDRF ಮತ್ತು SDRF ತಂಡಗಳನ್ನು ನಿಯೋಜಿಸಿದ್ದು, ವಿದ್ಯುತ್ ಮತ್ತು ಕುಡಿಯುವ ನೀರು ಸರಬರಾಜು ಅಡೆತಡೆಯಿಲ್ಲದೆ ಮುಂದುವರಿಯಬೇಕು ಸೂಚನೆ ನೀಡಲಾಗಿದೆ.
ಕರ್ನಾಟಕದಲ್ಲಿ, ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಧ್ಯಮದಿಂದ ಭಾರೀ ಮಳೆಯೊಂದಿಗೆ ಬಲವಾದ ಗಾಳಿಯ ಸಾಧ್ಯತೆಯಿದೆ. ಮುಂಬರುವ ದಿನಗಳಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಯ ಸಾಧ್ಯತೆ ಇರುವುದರಿಂದ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಿಗೆ ಐಎಂಡಿ ಎಚ್ಚರಿಕೆ ನೀಡಿದೆ.
ಚಂಡಮಾರುತ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಲವಾದ ಗಾಳಿಯೊಂದಿಗೆ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿಯೂ ಸಹ ಹಗುರದಿಂದ ಮಧ್ಯಮ ಮಳೆಯಾಗಲಿದೆ. ಚೆನ್ನೈ, ನಾಗಪಟ್ಟಣಂ ಮತ್ತು ಕಡಲೂರು ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನಗಳವರೆಗೆ ನಿರಂತರ ಮಳೆಯಾಗುವ ನಿರೀಕ್ಷೆಯಿದೆ.
ಚಂಡಮಾರುತ ಮೊಂತಾ ಬಂಗಾಳ ಕೊಲ್ಲಿಯಲ್ಲಿ ಶಕ್ತಿ ಪಡೆಯುತ್ತಿರುವ ಕಾರಣ, ಸಂಭಾವ್ಯ ಹಾನಿಯನ್ನು ಕಡಿಮೆ ಮಾಡಲು ಸಿದ್ಧತೆಯ ಕ್ರಮಗಳು ಅಗತ್ಯವಾಗಿವೆ. ಅಗತ್ಯ ಸೇವೆಗಳು ಅಡೆತಡೆಯಿಲ್ಲದೆ ಮುಂದುವರಿಯಬೇಕು ಮತ್ತು ಅಗತ್ಯವಿದ್ದರೆ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲು ಒಡಿಶಾ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ಈ ಜಿಲ್ಲೆಗಳಿಗೆ ಮೋಂಟಾ ಚಂಡಮಾರುತ ಭೀತಿ
