Ad image

ಡಿ.ಕೆ.ಶಿವಕುಮಾರ್ ಪ್ಲ್ಯಾನ್ ಫ್ಲಾಪ್? ಎ ಖಾತಾ ಪರಿವರ್ತನೆಗೆ ಸಲ್ಲಿಕೆ ಆಗ್ತಿಲ್ಲ ಅರ್ಜಿಗಳು

Team SanjeMugilu
1 Min Read

ಬೆಂಗಳೂರು: ಬಿ ಖಾತಾದಾರರಿಗೆ ನಗರಾಭಿವೃದ್ಧಿ ಇಲಾಖೆ ಸುವರ್ಣಾವಕಾಶ ಮಾಡಿಕೊಟ್ಟಿದೆ. ಬಿ ಖಾತೆಯಿಂದ ಎ ಖಾತಾ ಪರಿವರ್ತನೆಗೆ ಅವಕಾಶ ಮಾಡಿಕೊಟ್ಟಿದೆ. 5% ಮಾರ್ಗಸೂಚಿ ದರ ಕೂಡ ಕಟ್ಟಬೇಕಿದೆ. ಅರ್ಜಿ ಸಲ್ಲಿಕೆ ಆರಂಭ ಆಗಿ 25 ದಿನ ಆದರೂ ಇನ್ನೂ ಅರ್ಜಿ ಸಲ್ಲಿಕೆಗಳು ಸರಿಯಾಗಿ ಆಗಿಲ್ಲ.

ಬೆಂಗಳೂರಿಗರು ಇದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಇದುವರೆಗೂ ಬರೀ 1,200 ಅರ್ಜಿ ಸಲ್ಲಿಕೆ ಆಗಿದೆ. 5% ದರ ಏರಿಕೆ ಜಾಸ್ತಿ ಆಯ್ತಾ ಅಂತ ಜನ ಮುಂದಾಗಲಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.

ಡಿಸಿಎಂ ಹಾಗೂ ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ಈ ಯೋಜನೆ ಜಾರಿ ಮಾಡಿದ್ದು, ಇದಕ್ಕೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಟೀಕೆ ಮಾಡಿದ್ದರು. ಯಾರು ಕೂಡ ದುಡ್ಡು ಕೊಟ್ಟು ಎ ಖಾತಾ ಮಾಡಿಸಿಕೊಳ್ಳಬೇಡಿ ಅಂತಾ ಹೇಳಿದ್ದರು. ನಮ್ಮ ಸರ್ಕಾರ ಬರುತ್ತೆ ಎಂದಿದ್ದರು. ಈ ಹೇಳಿಕೆಯಿಂದ ಹೊಡೆತ ಆಯ್ತಾ ಎಂಬ ಪ್ರಶ್ನೆ ಎದ್ದಿದೆ.

ಬೆಂಗಳೂರು ಒನ್‌ಗಳಲ್ಲೂ ಕೂಡ ಅರ್ಜಿ ಸಲ್ಲಿಕೆಗೆ ಅವಕಾಶ ಕೂಡ ಮಾಡಿಲ್ಲ. ಹೀಗಾಗಿ ಈ ಯೋಜನೆಯಿಂದ ಜನ ಯಾಕೆ ಹಿಂದೆ ಸರಿಯುತ್ತಿದ್ದಾರೆ ಅಂತಾ ತಿಳಿಯಬೇಕಿದೆ. ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಅರ್ಜಿ ಸಲ್ಲಿಕೆ ಕಡಿಮೆ ಆಗಿದೆ. ಯಾವ ಕಾರಣಕ್ಕೆ ಅಂತ ಜಿಬಿಎ ಸತ್ಯ ತಿಳಿಯಬೇಕಿದೆ.

Share This Article