Ad image

ಅಮೆರಿಕದ ಜನತೆಗೆ 1.77 ಲಕ್ಷ ರೂ. ಡಿವಿಡೆಂಡ್‌ : ಟ್ರಂಪ್‌ ಘೋಷಣೆ

Team SanjeMugilu
1 Min Read

ವಾಷಿಂಗ್ಟನ್‌: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಅಮೆರಿಕದ ಪ್ರತಿ ಪ್ರಜೆಗೆ 2 ಸಾವಿರ ಡಾಲರ್‌(1.77 ಲಕ್ಷ ರೂ.) ಡಿವಿಡೆಂಡ್‌ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ಹೌದು. ಮಾಧ್ಯಮದ ಜೊತೆ ಮಾತನಾಡಿದ ಅವರು 1 ಸಾವಿರದಿಂದ 2 ಸಾವಿರ ಡಾಲರ್‌ ವರೆಗೆ ಡಿವಿಡೆಂಡ್‌ ನೀಡುತ್ತೇನೆ ಎಂದು ಹೇಳಿದ್ದಾರೆ. ಬಹಳಷ್ಟು ಜನ ನಾನು ತೆರಿಗೆ ವಿಧಿಸಿದ್ದನ್ನು ಪ್ರಶ್ನಿಸಿದ್ದರು. ಆದರೆ ಈಗ ನಮ್ಮ ತೆರಿಗೆ ಸಂಗ್ರಹದಲ್ಲಿ ಬಂದ ಲಾಭಾಂಶವನ್ನು ಡಿವಿಡೆಂಡ್‌ ಜನರಿಗೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಯಾರು ಅರ್ಹರು?
ಇಲ್ಲಿಯವರೆಗೆ ಯಾರಿಗೆ ಮತ್ತು ಹೇಗೆ ಹಣ ಸಿಗಲಿದೆ ಎನ್ನುವ ವಿವರವನ್ನು ಬಹಿರಂಗ ಪಡಿಸಿಲ್ಲ. ಆದರೆ ಕಡಿಮೆ ಆದಾಯ ಹೊಂದಿದ ಜನರಿಗೆ ಮಾತ್ರ ಈ ಹಣ ಸಿಗುವ ಸಾಧ್ಯತೆಯಿದೆ.

ನೇರವಾಗಿ ಜನರಿಗೆ ಹಣ ಸಿಗುತ್ತದೋ ಅಥವಾ ವಸ್ತುಗಳ ಮೇಲಿನ ತೆರಿಗೆ ಕಡಿತ  ಮಾಡಲಾಗುತ್ತದೋ ಎನ್ನುವುದು ತಿಳಿದು ಬಂದಿಲ್ಲ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸ್ಪಷ್ಟತೆ ಸಿಗಲಿದೆ. ಸಾಮಾನ್ಯವಾಗಿ ವ್ಯವಹಾರದಲ್ಲಿ ಲಾಭಾಂಶ ಬಂದರೆ ಷೇರು ಹೊಂದಿದ ಹೂಡಿಕೆದಾರರಿಗೆ ಕಂಪನಿ ಡಿವಿಡೆಂಡ್‌ ಘೋಷಣೆ ಮಾಡುತ್ತದೆ.

Share This Article