ಹೌದು. ಅಧಿಕಾರಿಗಳ ಪ್ರಕಾರ ʼUkasaʼ ಎಂಬ ಕೋಡ್‌ವರ್ಡ್‌ನಿಂದ ಗುರುತಿಸಲ್ಪಟ್ಟ ಹ್ಯಾಂಡ್ಲರ್ ಜೊತೆ ಎನ್‌ಕ್ರಿಪ್ಟ್ ಮಾಡಿದ ಸಂದೇಶ ವೇದಿಕೆಯಾದ Session ಅಪ್ಲಿಕೇಶನ್ ಬಳಸಿ ಸಂಪರ್ಕ ನಡೆಸುತ್ತಿದ್ದರು.
Ukasa ಎಂದರೆ ಅರೇಬಿಕ್ ಭಾಷೆಯಲ್ಲಿ ʼಜೇಡʼ ಎಂಬ ಅರ್ಥ ನೀಡುತ್ತದೆ. Ukasa ವ್ಯಕ್ತಿಯ ಹೆಸರಲ್ಲ. ವ್ಯಕ್ತಿಯ ಹೆಸರನ್ನು ಮರೆಮಾಚಲು ಅವರು Ukasa ಹೆಸರನ್ನು ಬಳಸಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಗುಂಪಿನ ಚಲನವಲನಗಳು ಮತ್ತು ಹಣಕಾಸು ಸಹಾಯ ಎಲ್ಲವೂ ಹ್ಯಾಂಡ್ಲರ್‌ನಿಂದಲೇ ನಡೆದಿದೆ ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಫರಿದಾಬಾದ್ ಭಯೋತ್ಪಾದಕ ಮಾಡ್ಯೂಲ್‌ಗೆ ಸಂಬಂಧಿಸಿದ ಹಲವಾರು ವ್ಯಕ್ತಿಗಳು ಮಾರ್ಚ್ 2022 ರಲ್ಲಿ ಭಾರತದಿಂದ ಟರ್ಕಿಗೆ ಪ್ರಯಾಣಿಸಿದ್ದರು. ಈ ಭೇಟಿಯ ಸಮಯದಲ್ಲಿ ಅವರು ತಮ್ಮ ಹ್ಯಾಂಡ್ಲರ್‌ನೊಂದಿಗೆ ಸಂಪರ್ಕಕ್ಕೆ ಬಂದು ಕೃತ್ಯಕ್ಕೆ ಸಂಚು ರೂಪಿಸಿರುವ ಸಾಧ್ಯತೆಯಿದೆ.
Ukasa ಪದದ ಅರ್ಥ ಏನು?
Ukasa ಪದವನ್ನು ಅರೆಬಿಕ್ ಭಾಷೆಯಲ್ಲಿ ಸಾಮಾನ್ಯವಾಗಿ ʼUkashaʼ ಅಥವಾ ʼOkashaʼ ಎಂದು ಕರೆಯಲಾಗುತ್ತದೆ. ಅರೆಬಿಕ್‌ನಲ್ಲಿ ಈ ಪದಕ್ಕೆ ʼಜೇಡʼ ಅಥವಾ ʼಜೇಡದ ಬಲೆʼ ಎಂಬ ಅರ್ಥ ಬರುತ್ತದೆ. ಈ ಪದ ಪುಲ್ಲಿಂಗ ವ್ಯಕ್ತಿಯನ್ನು ಉದ್ದೇಶಿಸಿ ಬಳಕೆ ಮಾಡಲಾಗುತ್ತದೆ.
