Ad image

ಮುಂಜಾನೆ ದೆಹಲಿಯಿಂದ ಆಗಮಿಸಿ ಪತ್ನಿ ಆರೋಗ್ಯ ವಿಚಾರಿಸಿದ ಸಿಎಂ

Team SanjeMugilu
0 Min Read

ಬೆಂಗಳೂರು: ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯನವರು  ಆಸ್ಪತ್ರೆಗೆ ಭೇಟಿ ನೀಡಿ‌ ಪತ್ನಿ ಪಾರ್ವತಿ ಅವರ ಆರೋಗ್ಯ ವಿಚಾರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭೇಟಿ, ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯನವರು ಇಂದು ಮುಂಜಾನೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದರು.
ವಿಮಾನ ನಿಲ್ದಾಣದಿಂದ ನೇರವಾಗಿ ಶೇಷಾದ್ರಿಪುರಂನಲ್ಲಿರುವ ಆಸ್ಪತ್ರೆಗೆ ಆಗಮಿಸಿ ಐಸಿಯುನಲ್ಲಿರುವ ಪತ್ನಿಯ ಆರೋಗ್ಯ ವಿಚಾರಿಸಿದರು.ನಂತರ ಅರ್ಧಗಂಟೆಗೂ ಹೆಚ್ಚು ಕಾಲ ವೈದ್ಯರ ಜೊತೆ ಸಿಎಂ ಸಮಲೋಚನೆ ನಡೆಸಿದರು.ಬಳಿಕ ಮಾತನಾಡಿದ ಸಿಎಂ, ಆರೋಗ್ಯ ಸ್ಥಿರವಾಗಿದ್ದು ಏನು ಸಮಸ್ಯೆ ಇಲ್ಲ. ಶ್ವಾಸಕೋಶ ಸೋಂಕು ಇದೆ, ಈಗ ಸುಧಾರಣೆ ಕಾಣುತ್ತಿದೆ. ಇನ್ನೂ 2-3 ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂದು ಹೇಳಿ ತೆರಳಿದರು.

Share This Article