ತಿರುವನಂತಪುರಂ: ಕಳೆದ ಭಾನುವಾರದಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆಯಲಾಗಿದ್ದು, ಮುಂದಿನ 2 ತಿಂಗಳು ಭಕ್ತರಿಗೆ ದರ್ಶನ ಲಭ್ಯವಾಗಲಿದೆ. ಈ ಬೆನ್ನಲ್ಲೇ ಸ್ವಾಮಿಯ ದರ್ಶನತಿರುವನಂತಪುರಂ: ಕಳೆದ ಭಾನುವಾರದಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆಯಲಾಗಿದ್ದು, ಮುಂದಿನ 2 ತಿಂಗಳು ಭಕ್ತರಿಗೆ ದರ್ಶನ ಲಭ್ಯವಾಗಲಿದೆ. ಈ ಬೆನ್ನಲ್ಲೇ ಸ್ವಾಮಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಇದೇ ಸಂದರ್ಭದಲ್ಲಿ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ರೋಗದ ಹಾವಳಿ ಜೋರಾಗಿದೆ.
ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಂಡಲ ಪೂಜೆ ಆರಂಭವಾಗಿದೆ. ಕಳೆದ ಭಾನುವಾರದಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆಯಲಾಗಿದ್ದು, ಮುಂದಿನ 2 ತಿಂಗಳು ಭಕ್ತರಿಗೆ ದರ್ಶನ ಲಭ್ಯವಾಗಲಿದೆ. ಈ ಬೆನ್ನಲ್ಲೇ ಸ್ವಾಮಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಒಂದೂವರೆ ದಿನದಲ್ಲಿ ಒಂದೂವರೆ ಲಕ್ಷ ಭಕ್ತರು ದರ್ಶನ ಪಡೆದುಕೊಂಡಿದ್ದಾರೆ. ಭಾರೀ ಭಕ್ತಸಾಗರದಿಂದಾಗಿ ಪಂಪಾ ನದಿಯಿಂದ ದೇಗುಲ ತಲುಪಲು 7 ಗಂಟೆಗಳೇ ಬೇಕಾಗಿದೆ. ಕಣ್ಣು ಹಾಯಿಸಿದ ದೂರವೂ ಸ್ವಾಮಿ ಭಕ್ತರೇ ಇದ್ದಾರೆ. ಭಕ್ತರ ನಿಯಂತ್ರಣಕ್ಕೆ ಕೇಂದ್ರಕ್ಕೆ ಕೇರಳ ಸರ್ಕಾರ ಮನವಿ ಮಾಡಿದೆ. ಕೇಂದ್ರ ತಂಡ ಆಗಮಿಸಲು ಇನ್ನೆರಡು ದಿನ ಬೇಕಾಗಿದ್ದು, ಭಕ್ತರನ್ನು ನಿಯಂತ್ರಿಸುವುದೇ ಹರಸಾಹಸವಾಗಿದೆ.
ಪಾರ್ಕಿಂಗ್‌ನಲ್ಲೇ ಸಿಲುಕಿರುವ ಮಾಲಾಧಾರಿಗಳು:
ಕೇರಳದ ಪತ್ತಂತಿಟ್ಟ ಜಿಲ್ಲೆಯ ಬೆಟ್ಟದ ಮೇಲಿರುವ ಸ್ವಾಮಿ ಅಯ್ಯಪ್ಪನನ್ನು ನೋಡಲು ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಅತಿ ಹೆಚ್ಚು ಸಂಖ್ಯೆಯ ಭಕ್ತರು ಪ್ರತಿವರ್ಷ ಆಗಮಿಸುತ್ತಾರೆ. ಕರ್ನಾಟಕದಿಂದ ಸಾವಿರಾರು ಭಕ್ತರು ದರ್ಶನಕ್ಕೆ ತೆರಳುತ್ತಾರೆ. ಈಗಾಗಲೇ ಅಯ್ಯಪ್ಪ ದರ್ಶನಕ್ಕೆ ಕರ್ನಾಟಕದಿಂದ ತೆರಳಿರುವ ಅಯ್ಯಪ್ಪ ಭಕ್ತರು ರಾಜ್ಯದಿಂದ ಬರುವ ಭಕ್ತರಿಗೆ ಮನವಿ ಮಾಡಿದ್ದಾರೆ. ಅಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ. ನೀಲ್‌ಕಲ್‌ನಲ್ಲಿ ಭಕ್ತರ ವಾಹನಗಳು ಪಾರ್ಕಿಂಗ್‌ನಲ್ಲೇ ಜಾಮ್ ಆಗಿವೆ. ವಾಹನಗಳಲ್ಲಿ ತೆರಳಿರುವ ಭಕ್ತರು ಪಾರ್ಕಿಂಗ್‌ಗಾಗಿಯೇ ಒಂದೆರಡು ತಾಸು ಹುಡುಕುವ ಪರಿಸ್ಥಿತಿ ಇದೆ. ಹೀಗಾಗಿ ಸ್ವಲ್ಪ ದಿನ ತಡವಾಗಿ ದರ್ಶನಕ್ಕೆ ಬನ್ನಿ ಅಂತ ಈಗಾಗಲೇ ತೆರಳಿರುವ ಕರ್ನಾಟಕ ಅಯ್ಯಪ್ಪ ಭಕ್ತರು ಮನವಿ ಮಾಡಿದ್ದಾರೆ.
ಶಬರಿಮಲೆಯಲ್ಲಿ ಹೊಸ ವೈರಸ್ ಭೀತಿ:
ಇದೇ ಸಂದರ್ಭದಲ್ಲಿ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ರೋಗದ ಹಾವಳಿ ಜೋರಾಗಿದೆ. ಮೆದುಳು ತಿನ್ನುವ ನೇಗ್ಲೇರಿಯಾ ಪೌಲೇರಿ ಎಂಬ ಅಮಿಬಾ ವೈರಸ್ ಆತಂಕ ಹೆಚ್ಚಿಸಿದೆ. ಪಂಪಾನದಿಯಲ್ಲಿ ಸ್ನಾನ ಮಾಡುವಾಗ ಮೂಗು, ಬಾಯಿಗೆ ನೀರು ಹೋಗದಂತೆ ಎಚ್ಚರ ವಹಿಸಿ, ಬಿಸಿನೀರನ್ನೇ ಸೇವಿಸಲು ಕೇರಳ ಸರ್ಕಾರ ಸಲಹೆ ನೀಡಿದೆ. ಪಂದಳಂ, ಅಡೂರ್, ಪತ್ತನಂತಿಟ್ಟ ಮತ್ತು ವಡಸೇರಿಕ್ಕರದಲ್ಲಿ ವಿಶೇಷ ಔಷಧಾಲಯಗಳ ಸ್ಥಾಪನೆ ಮಾಡಲಾಗಿದೆ. ಸುರಕ್ಷಿತ ನೀರಿನ ಪದ್ಧತಿಗಳನ್ನು ಅನುಸರಿಸಲು ಭಕ್ತರಿಗೆ ಸೂಚನೆ ನೀಡಲಾಗಿದೆ. ಪಂಪಾದಿಂದ ಶಬರಿಮಲೆಗೆ ತೆರಳುವವರು ಉಸಿರಾಟ, ಹೃದಯ ಸಂಬಂಧಿ ಸಮಸ್ಯೆ ಇದ್ದರೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸಲಹೆ ನೀಡಲಾಗಿದೆ.
ಕರ್ನಾಟಕಕ್ಕೂ ವೈರಸ್ ಟೆನ್ಷನ್:
ಕೇರಳದಲ್ಲಿ ನೂರಾರು ಜನರಿಗೆ ಬಾಧಿಸುತ್ತಿರುವ ವೈರಸ್, ರಾಜ್ಯದಿಂದ ಶಬರಿ ಮಲೆಗೆ ಹೋಗುವ ಭಕ್ತರ ಟೆನ್ಷನ್‌ಗೆ ಕಾರಣವಾಗಿದೆ. ಹೀಗಾಗಿ ಭಕ್ತರ ಆರೋಗ್ಯ ರಕ್ಷಣೆಗೆ ಮುಂದಾಗಿರುವ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆಗೆ ಮಾಡಿದೆ. ಇದು ಅತ್ಯಂತ ವಿಷಕಾರಿ ವೈರಸ್ ಆಗಿದ್ದು, ಬೇಗ ಹರಡುತ್ತೆ. ಯಾತ್ರೆಯ ಸಂದರ್ಭ ನಿಂತ ನೀರಿನಲ್ಲಿ ಸ್ನಾನ ಮಾಡಬೇಡಿ. ಮೂಗಿಗೆ ನೀರು ಹೋಗದಂತೆ ಕ್ಲಿಪ್ ಬಳಸಿ ಅಂತ ಎಚ್ಚರಿಸಿದೆ. ವೈರಸ್ ಸಂಪರ್ಕದ 7 ದಿನಗಳ ಒಳಗೆ ರೋಗ ಲಕ್ಷಣ ಕಾಣಿಸಿಕೊಳ್ಳಲಿದೆ. ಜ್ವರ, ತಲೆನೋವು, ವಾಕರಿಕೆ, ವಾಂತಿ, ಕುತ್ತಿಗೆ ಬಿಗಿತ, ಗೊಂದಲ, ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆ, ಅಸ್ವಸ್ಥತೆ ರೋಗ ಲಕ್ಷಣವಾಗಿದೆ.
ಒಟ್ಟಿನಲ್ಲಿ ಶಬರಿಮಲೆ ಮಾಲಾಧಾರಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಾಲಾಧಾರಿಗಳ ನಿಯಂತ್ರಣಕ್ಕೆ ಕೇರಳ ಸರ್ಕಾರ ಇನ್ನಿಲ್ಲದ ಹರಸಾಹಸ ಪಡುತ್ತಿದೆ. ಕ್ಕೆರ್ಕಾರ ಇನ್ನಿಲ್ಲದ ಹರಸಾಹಸ ಪಡುತ್ತಿದೆ.
